ಅರಣ್ಯ ಇಲಾಖೆ ಕಚೇರಿಯಲ್ಲಿದ್ದ 8 ಲಕ್ಷ ಮೌಲ್ಯದ ಶ್ರೀಗಂಧದ ಕಟ್ಟಿಗೆ ಕಳ್ಳತನ; ಇಬ್ಬರು ಅಧಿಕಾರಿಗಳ ಅಮಾನತು

ಅರಣ್ಯ ಇಲಾಖೆ ಕಚೇರಿಯಲ್ಲಿದ್ದ 8 ಲಕ್ಷ ಮೌಲ್ಯದ ಶ್ರೀಗಂಧದ ಕಟ್ಟಿಗೆ ಕಳ್ಳತನ ಮಾಡಲಾಗಿತ್ತು. ಬಳಿಕ ಕಳ್ಳತನವನ್ನು ಮರೆಮಾಚಲು ಅಧಿಕಾರಿಗಳು ಖತರ್ನಾಕ್​ ಪ್ಯ್ಲಾನ್​ ಮಾಡಿದ್ದು,‘ಅರಣ್ಯ ಪ್ರದೇಶದಿಂದ ಮತ್ತೊಂದು ಶ್ರೀಗಂಧದ ಗಿಡ ಕಡಿದು ಮಾಡಿ, ಕಳ್ಳತನವಾಗಿರುವ ಜಾಗದಲ್ಲಿ ಇಡಲಾಗಿತ್ತು. ನಂತರ ಕಳ್ಳತನ ಆಗಿಯೇ ಇಲ್ಲ ಎನ್ನುವ ಹಾಗೆ ತೋರಿಸಲು ಅಧಿಕಾರಿಗಳು ಪ್ಲಾನ್ ಮಾಡಿದ್ದರು.

ಅರಣ್ಯ ಇಲಾಖೆ ಕಚೇರಿಯಲ್ಲಿದ್ದ 8 ಲಕ್ಷ ಮೌಲ್ಯದ ಶ್ರೀಗಂಧದ ಕಟ್ಟಿಗೆ ಕಳ್ಳತನ; ಇಬ್ಬರು ಅಧಿಕಾರಿಗಳ ಅಮಾನತು
ಯಾದಗಿರಿ ಅರಣ್ಯ ಕಚೇರಿಯಲ್ಲಿ ಶ್ರೀಗಂಧ ಕಳ್ಳತನ
Updated By: ಕಿರಣ್ ಹನುಮಂತ್​ ಮಾದಾರ್

Updated on: Oct 07, 2023 | 3:02 PM

ಯಾದಗಿರಿ, ಅ.06: ಅರಣ್ಯ ಇಲಾಖೆ ಕಚೇರಿಯಲ್ಲಿದ್ದ ಲಕ್ಷ ಮೌಲ್ಯದ ಶ್ರೀಗಂಧದ ಕಟ್ಟಿಗೆ (Sandal Wood) ಕಳ್ಳತನವಾದ ಘಟನೆ ಯಾದಗಿರಿ(Yadagiri) ನಗರದ ಅರಣ್ಯ ಕಚೇರಿಯಲ್ಲಿ ನಡೆದಿದೆ. ಹೌದು, ಕಳೆದ ತಿಂಗಳು ಖದೀಮರು ತಾಲೂಕಿನ ಬಾಲಗಮಡು-ಹಂದರಕಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಗಿಡಗಳನ್ನು ಕಡಿದು ಸಾಗಿಸುತ್ತಿದ್ದರು. ಈ ವೇಳೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಬರೊಬ್ಬರಿ 8 ಲಕ್ಷ ಮೌಲ್ಯದ 85 ಕೆ.ಜಿ ಕಟ್ಟಿಗೆಗಳನ್ನು ಹಾಗೂ ಕಳ್ಳನನ್ನು ವಶಕ್ಕೆ ಪಡೆದಿದ್ದರು. ಬಳಿಕ ಅದನ್ನು ನಗರದ ಅರಣ್ಯ ಕಚೇರಿಯಲ್ಲಿ ಶೇಖರಿಸಿಡಲಾಗಿತ್ತು. ಆದರೆ, ಇದೀಗ ಕಳೆದ ನಾಲ್ಕು ದಿನಗಳ ಹಿಂದೆಯೇ ಕಚೇರಿಯಲ್ಲಿದ್ದ ಕಟ್ಟಿಗೆಗಳು ಕಳ್ಳತನ ಕಳ್ಳತನವಾಗಿದೆ.

ಕಳ್ಳತನ ಮರೆಮಾಚಲು ಅಧಿಕಾರಿಗಳಿಂದ ಮಾಸ್ಟರ್ ಪ್ಲಾನ್

ಹೌದು, ಕಳ್ಳತನವನ್ನು ಮರೆಮಾಚಲು ಅಧಿಕಾರಿಗಳು ಖತರ್ನಾಕ್​ ಪ್ಯ್ಲಾನ್​ ಮಾಡಿದ್ದು,  ‘ಅರಣ್ಯ ಪ್ರದೇಶದಿಂದ ಮತ್ತೊಂದು ಶ್ರೀಗಂಧದ ಗಿಡ ಕಡಿದು ಮಾಡಿ, ಕಳ್ಳತನವಾಗಿರುವ ಜಾಗದಲ್ಲಿ ಇಡಲಾಗಿತ್ತು. ನಂತರ ಕಳ್ಳತನ ಆಗಿಯೇ ಇಲ್ಲ ಎನ್ನುವ ಹಾಗೆ ತೋರಿಸಲು ಅಧಿಕಾರಿಗಳು ಪ್ಲಾನ್ ಮಾಡಿದ್ದರು. ಇನ್ನು ಕಳ್ಳತನವಾದ ಹಿನ್ನಲೆ ಕಲಬುರ್ಗಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸುನೀಲ್ ಪನ್ವಾರ್  ಅವರು ‘ಉಪ ವಲಯ ಅರಣ್ಯಾಧಿಕಾರಿ ಚಂದ್ರಶಾ ನೀರಕಟ್ಟಿ ಹಾಗೂ ಗಸ್ತು ವನಪಾಲಕ ರಿಜ್ವಾನ್ ಎಂಬುವವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಕಳ್ಳತನ ಕುರಿತು ಯಾದಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಮಗಳು ಹುಟ್ಟಿದ ನೆನಪಿಗೆ ಶ್ರೀಗಂಧದ ಗಿಡ ನೆಡ್ತಾರೆ, ಆ ಮರವನ್ನೇ ಮಾರಾಟ ಮಾಡಿ ಆಕೆಯ ಮದುವೆ ಮಾಡ್ತಾರೆ, ಹೀಗೊಂದು ವಿಭಿನ್ನ ಪರಂಪರೆ

ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ಇಬ್ಬರ ಬಂಧನ

ದಾವಣಗೆರೆ: ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ಕಳ್ಳರನ್ನ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸಂದೀಪ್​ ಹಾಗೂ ಈಶ್ವರಪ್ಪ ಬಂಧಿತ ಆರೋಪಿಗಳು. ಇವರಿಂದ  40 ಲಕ್ಷ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪವನಪುರ ಹಾಗೂ ಚಿರಸ್ಥಹಳ್ಳಿ ನಿವಾಸಿಗಳಾದ ಸಂದೀಪ್ ಮತ್ತು ಈಶ್ವರಪ್ಪ ಅವರು ‘ ಕಳೆದ ಸೆ. 29 ರಂದು ಗೋವರ್ಧನ ಎಂಬ ಗುತ್ತಿಗೆದಾರಿಗೆ 2.5 ಕೆಜಿ ನಕಲಿ ಚಿನ್ನ ಕೊಟ್ಟು, 60 ಲಕ್ಷ ರೂಪಾಯಿ ಪಡೆದುಕೊಂಡು ಪರಾರಿಯಾಗಿದ್ದರು.

ಮನೆ ಅಗೆಯುವಾಗ ಚಿನ್ನದ ನಿಕ್ಷೇಪ ಪತ್ತೆ ಆಗಿದೆ ಎಂದು ವಂಚನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮೂಲದ ಗೋವರ್ಧನ ಕೆಲ ತಿಂಗಳಿಂದ ಚನ್ನಗಿರಿಯಲ್ಲಿ ವಿವಿಧ ಕಾಮಗಾರಿ ಮಾಡುತ್ತಿದ್ದ. ಈ ವೇಳೆ ಕೂಲಿ ಕಾರ್ಮಿಕರಾಗಿದ್ದುಕೊಂಡು ಹಳೆ ಮನೆ ಅಗೆಯುವಾಗ ಚಿನ್ನದ ನಿಕ್ಷೇಪ ಪತ್ತೆ ಆಗಿದೆ ಎಂದು ಹೇಳಿ  ಆರೋಪಿಗಳು ಚನ್ನಗಿರಿ ತಾಲೂಕಿನ ನಲ್ಲೂರ ಬಳಿ ವಂಚಿಸಿದ್ದರು. ಈ ಹಿನ್ನಲೆ ಇದೀಗ ಆರೋಪಿಗಳನ್ನು ಬಂಧಿಸಿರುವುದಾಗಿ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬನ್ನೇರುಘಟ್ಟದಲ್ಲಿ ಶ್ರೀಗಂಧ ಮರ ಕಳ್ಳತನ: ಪರಾರಿಯಾಗಿದ್ದ ಪ್ರಮುಖ ಆರೋಪಿಯ ಬಂಧನ

ಆ್ಯಕ್ವಿವ್​  ವಾಹದಲ್ಲಿಟ್ಟಿದ್ದ ಮಹಿಳೆಯ ಬ್ಯಾಗ್ ಕದ್ದೊಯ್ದ ಚೋರರು

ಹಾಸನ: ಹೋಂಡಾ ಆಕ್ಟಿವ್ ವಾಹದಲ್ಲಿಟ್ಟಿದ್ದ ಮಹಿಳೆಯ ಬ್ಯಾಗ್​ನ್ನು ಕದ್ದೊಯ್ದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಗ್ರಾಮದಲ್ಲಿ ನಡೆದಿದೆ. ಬ್ಯಾಂಕ್ ಸಿಬ್ಬಂದಿ ಕಾವ್ಯ ಎಂಬುವವರಿಗೆ ಸೇರಿದ ವ್ಯಾನಿಟಿ ಬ್ಯಾಗ್ ಇದಾಗಿದ್ದು, ಕೆಲಸ ಮುಗಿಸಿ ರಾಮನಾಥಪುರದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಪಾರ್ಕಿಂಗ್‌ನಲ್ಲಿ ತಮ್ಮ ವಾಹನ ನಿಲ್ಲಿಸಿ ಬ್ಯಾಗ್, ಹೆಲ್ಮೆಟ್‌ನ್ನು ಸ್ಕೂಟರ್‌ನಲ್ಲೇ ಬಿಟ್ಟು ದೇವಸ್ಥಾನಕ್ಕೆ ತೆರಳಿದ್ದರು. ಬಳಿಕ ಸ್ಕೂಟಿಯಲ್ಲಿ ಪಾರ್ಕಿಂಗ್ ಸ್ಥಳಕ್ಕೆ ಬಂದ ಮೂವರು ಚೋರರು, ಕೆಲಕಾಲ ಹೊಂಚು ಹಾಕಿ ಬೈಕ್‌ನಲ್ಲಿದ್ದ ಬ್ಯಾಗ್ ಕದ್ದೊಯ್ದಿದ್ದಾರೆ. ಬ್ಯಾಗ್ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ