ಬನ್ನೇರುಘಟ್ಟದಲ್ಲಿ ಶ್ರೀಗಂಧ ಮರ ಕಳ್ಳತನ: ಪರಾರಿಯಾಗಿದ್ದ ಪ್ರಮುಖ ಆರೋಪಿಯ ಬಂಧನ
ಬನ್ನೇರುಘಟ್ಟದಲ್ಲಿ ಶ್ರೀಗಂಧ ಮರಗಳ್ಳನ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನು ಬನ್ನೇರುಘಟ್ಟ ಠಾಣಾ ಪೊಲೀಸರು ಕೋಲಾರ ಜಿಲ್ಲೆ ಶ್ರೀನಿವಾಸಪುರ ಬಳಿ ಗೋಪಾಲ್ನನ್ನು ಪೊಲೀಸರು ಬಂಧಿಸಿದ್ದಾರೆ. 2020ರಲ್ಲೂ ಗೋಪಾಲ್ ವಿರುದ್ಧ ಕೇಸ್ ದಾಖಲಾಗಿತ್ತು. ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಪದೇಪದೆ ಕಳ್ಳತನ ಮಾಡುತ್ತಿದ್ದ.
ಆನೇಕಲ್, ಸೆಪ್ಟೆಂಬರ್ 8: ಬನ್ನೇರುಘಟ್ಟದಲ್ಲಿ ಶ್ರೀಗಂಧ ಮರಗಳ್ಳನ (Sandalwood tree) ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನು ಬನ್ನೇರುಘಟ್ಟ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಾಲೂರಿನ ನೆಟ್ಟೂರಹಳ್ಳಿ ನಿವಾಸಿಯಾಗಿರುವ ಗೋಪಾಲ್(48) ಬಂಧಿತ ಆರೋಪಿ. ಕೋಲಾರ ಜಿಲ್ಲೆ ಶ್ರೀನಿವಾಸಪುರ ಬಳಿ ಗೋಪಾಲ್ನನ್ನು ಪೊಲೀಸರು ಬಂಧಿಸಿದ್ದಾರೆ. 2018 ಮತ್ತು 2020ರಲ್ಲೂ ಗೋಪಾಲ್ ವಿರುದ್ಧ ಕೇಸ್ ದಾಖಲಾಗಿತ್ತು. ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಪದೇಪದೆ ಕಳ್ಳತನ ಮಾಡುತ್ತಿದ್ದ.
ಸಹಚರ ತಿಮ್ಮರಾಯಪ್ಪ ಜೊತೆ ಕಲ್ಕೆರೆ ವಲಯಕ್ಕೆ ಗೋಪಾಲ್ ನುಗ್ಗಿದ್ದು, ಗಂಧದಮರ ಕಡಿಯುವ ವೇಳೆ ಅರಣ್ಯ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಈ ವೇಳೆ ಶ್ರೀಗಂಧ ಮರಗಳ್ಳರನ್ನು ಶರಣಾಗುವಂತೆ ಸೂಚಿಸಿದ್ದಾರೆ. ಆರೋಪಿಗಳು ಶರಣಾಗದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳು ಫೈರಿಂಗ್ ಮಾಡಿದ್ದಾರೆ. ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರೋಪಿ ಗೋಪಾಲ್ ಪರಾರಿಯಾಗಿದ್ದ.
ಇದನ್ನೂ ಓದಿ: ಆನೇಕಲ್: ಶ್ರೀಗಂಧ ಮರ ಕಳ್ಳತನ ಮಾಡಲು ಯತ್ನ, ಪಾರೆಸ್ಟ್ಗಾರ್ಡ್ ಫೈರಿಂಗ್ನಿಂದ ಓರ್ವ ಸಾವು
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಏರಿಯಾದಲ್ಲಿ ಫಾರೆಸ್ಟ್ಗಾರ್ಡ್ ಹಾಗೂ ಇಬ್ಬರು ವಾಚರ್ಸ್ ರೌಂಡ್ಸ್ನಲ್ಲಿದ್ದರು. ಈ ಜಾಗದಲ್ಲಿ ವನ್ಯ ಜೀವಿಗಳು ಹಾಗೂ ಶ್ರೀಗಂಧ ಮರಗಳು ಇರುವುದರಿಂದ ಕಳ್ಳರ ಹಾವಳಿ ಇದೆ. ಹೀಗಾಗಿ ಫಾರೆಸ್ಟ್ ವಾಚರ್ ಹಾಗೂ ಗಾರ್ಡ್ ನೈಟ್ ಪೆಟ್ರೋಲಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಮರ ಕಡಿಯುವ ಶಬ್ದ ಕೇಳಿಸಿದೆ. ಸ್ಥಳಕ್ಕೆ ಹೋಗಿ ನೋಡುತ್ತಿದ್ದಂತೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆಗೆ ಕಳ್ಳ ಮುಂದಾಗಿದ್ದಾನೆ. ಶರಣಾಗುವಂತೆ ವಾರ್ನ್ ಮಾಡಿದರೂ, ಕೇಳದೆ ಇದ್ದಾಗ ಫೈರಿಂಗ್ ಮಾಡಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ. ಈ ವೇಳೆ ಮತ್ತೋರ್ವ ಅಲ್ಲಿಂದ ಪರಾರಿಯಾಗಿದ್ದ.
ಶ್ರೀಗಂಧದ ಮರಗಳನ್ನ ಕತ್ತರಿಸಿ ಮಾರಾಟ ಮಾಡುವ ಜಾಲ ಭೇದಿಸಿದ ಪೊಲೀಸ್
ಬೀದರ್: ರೈತನ ಹೊಲದಲ್ಲಿ ಬೆಳೆದಿದ್ದ ಅನಧಿಕೃತವಾಗಿ ಶ್ರೀಗಂಧದ ಮರಗಳನ್ನ ಕತ್ತರಿಸಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಜಾಲವೊಂದನ್ನ ಭೇದಿಸುವಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬೀದರ್ ಜಿಲ್ಲಾ ಪೋಲಿಸ್ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಭಾಲ್ಕಿ ತಾಲೂಕಿನ ತಳವಾಡ ಕೆ ಬಳಿ ದಾಳಿಮಾಡಿದ್ದು ಸುಮಾರು 3 ಜನರನ್ನ ಬಂಧಿಸಿದ್ದು 6 ಜನರು ಪರಾರಿಯಾಗಿದ್ದರು.
ಇದನ್ನೂ ಓದಿ: ಧಾರವಾಡ: ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಮೂವರು ಯುವಕರಿಂದ ಹಲ್ಲೆ
ದಾಳಿ ವೇಳೆ ಸುಮಾರು 3 ಲಕ್ಷ ರೂ. ಮೌಲ್ಯದ 60 ಕೆಜಿ. ಶ್ರೀಗಂಧ ಕಟ್ಟಿಗೆ ತುಂಡುಗಳನ್ನ ವಶಕ್ಕೆ ಪಡೆದಿದ್ದರು. ಇದರ ಜೊತೆಗೆ ಶ್ರೀಗಂಧ ಸಾಗಿಸುತ್ತಿದ್ದ ಒಂದು ಕಾರು 5 ಮೊಬೈಲ್, ಶ್ರೀಗಂಧ ಕತ್ತರಿಸುವ ಯಂತ್ರವನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಪತ್ತೆಯಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯ ಪ್ರಶಂಸಿಸಿ ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ ಅವರು ನಗದು ಬಹುಮಾನ ಘೋಷಿಸಿದ್ದರು.
ಈ ಶ್ರೀಗಂಧ ಕಳ್ಳತನ ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಇದು ಕಳವಳಿಕಾರಿ ವಿಚಾರವಾಗಿದ್ದು ಕಾಲೇಜು ವಿದ್ಯಾರ್ಥಿಗಳು ಇಂತಹ ಪ್ರಕರಣದಲ್ಲಿ ಭಾಗಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.