ವಿದೇಶದಿಂದ ಹಾರಿ ಬರುತಿವೆ ಹಕ್ಕಿಗಳು -ಯಾದಗಿರಿಯ ಲುಂಬಿನಿ ವನದ ಕೆರೆಯಲ್ಲಿ ಸಂಭ್ರಮ ಮನೆ ಮಾಡಿದೆ

ವಿದೇಶದಿಂದ ವಲಸೆ ಬಂದಿರುವ ಪ್ರಮುಖ ಪಕ್ಷಿಗಳು ಅಂದ್ರೆ ಕಾಮನ್ ಕೂಟ್, ಪರ್ಪಲ್ ಮೋರ್, ಹೆನ್ ಸ್ಟ್ರೋಕ್, ಪೈಡ್ ಕಿಂಗ್ ಪೀಶರ್, ಪೊಂಡ್ ಹಿರೊನ್, ಇಗ್ರೇಟ್, ಡಾರ್ಟರ್, ಕರ್ಮೋರಾಂಟ್ಸ್, ವಾಟರ್ ಹೆನ್, ಬ್ಲಾಕ್ ಹೆಡೆಡ್ ಐಬಿಸ್, ಲಾಪವಿಂಗ್, ರೀವರ್ ಟರ್ನ್ ಹಾಗೂ ವಾಗ್ಟೈಲ್ ಸೇರಿದಂತೆ ನಾನಾ ತಳಿಯ ಹಕ್ಕಿಗಳು ವಲಸೆ ಬರುತ್ತವೆ.

ವಿದೇಶದಿಂದ ಹಾರಿ ಬರುತಿವೆ ಹಕ್ಕಿಗಳು -ಯಾದಗಿರಿಯ ಲುಂಬಿನಿ ವನದ ಕೆರೆಯಲ್ಲಿ ಸಂಭ್ರಮ ಮನೆ ಮಾಡಿದೆ
ಯಾದಗಿರಿಯ ಲುಂಬಿನಿ ವನದ ಕೆರೆಯತ್ತ ಹಾರಿ ಬರುತಿವೆ ವಿದೇಶಿ ಹಕ್ಕಿಗಳು
Follow us
| Updated By: ಸಾಧು ಶ್ರೀನಾಥ್​

Updated on: Feb 19, 2024 | 2:10 PM

ಪ್ರತಿನಿತ್ಯ ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವರರ ಮನಕ್ಕೆ ಆ ಸ್ಥಳ ಸಾಕಷ್ಟು ಆನಂದ ನೀಡುತ್ತೆ… ತಣ್ಣನೆಯ ಗಾಳಿಯಲ್ಲಿ ನಿತ್ಯ ವಾಯು ವಿಹಾರಕ್ಕೆ ಬರುವರರನ್ನ ಆ ಕೆರೆಯಲ್ಲಿ ಹಕ್ಕಿಗಳ ಆಟ ಸಳೆಯುತ್ತಿದ್ದೆ.. ಹಕ್ಕಿಗಳ ಚಿಲಿಪಿಲಿ ಸದ್ದು ಅಲ್ಲಿ ಬರುವ ಪ್ರಾವಾಸಿಗರ ಕಿವಿಗಳಿಗೆ ಇಂಪು ನೀಡುತ್ತಿದೆ. ಅದರಲ್ಲೂ ವಿದೇಶಿ ಹಕ್ಕಿಗಳು ಆಗಮನ ಜೋರಾಗಿದ್ದರಿಂದ ವಾಯು ವಿಹಾರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಲುಂಬಿನಿ ವನಕ್ಕೆ ಎಂಟ್ರಿ ಕೊಟ್ಟ ವಿದೇಶಿ ಹಕ್ಕಿಗಳು.. ವಾಯು ವಿಹಾರಕ್ಕೆ ಬರುವವರಿಗೆ ಮುದ ನೀಡುತ್ತಿರುವ ಹಕ್ಕಿಗಳ ಕಲರವ.. ಪಾರ್ಕ್ ನಲ್ಲಿ ಹಕ್ಕಿಗಳ ಜೊತೆ ಎಂಜಾಯ್ ಮಾಡುತ್ತಿರುವ ಮಕ್ಕಳು.. ಈ ದೃಶ್ಯಗಳು ಕಂಡು ಬರುವುದು ಗಿರಿನಾಡು ಯಾದಗಿರಿ ನಗರದ ಲುಂಬಿನಿ ವನದ ಕೆರೆಯಲ್ಲಿ.

ಏಳು ವರ್ಷಗಳ ಹಿಂದೆ ನಿರ್ಮಾಣವಾದ ಈ ಲುಂಬಿನ ಉದ್ಯಾನವನ ಬಣ್ಣ ಬಣ್ಣ ಹಕ್ಕಿಗಳ ಪ್ರಸಿದ್ಧ ತಾಣವಾಗಿದೆ.. ವಿಧ ವಿಧವಾದ ಹಕ್ಕಿಗಳು ತುಂಟಾಟ ನೋಡುವುದೆ ಒಂದು ರೀತಿ ಕಣ್ಣಿಗೆ ಆನಂದ ನೀಡುತ್ತೆ. ವಿಶೇಷವಾಗಿ ಈ ಲುಂಬಿನಿ ಕೆರೆಗೆ ಈಗ ಸ್ಥಳೀಯ ಹಕ್ಕಿಗಳಿಗೆ ಸಾಥ್​​ ನೀಡುವುದಕ್ಕೆ ಜೊತೆಗೆ ಫಾರಿನ್ ಹಕ್ಕಿಗಳು ಸಹ ಹಾರುತ್ತಾ ಬಂದಿದೆ. ಹೀಗಾಗಿ ಬೆಳಗ್ಗೆ 5 ಗಂಟೆಯಿಂದಾನೆ ವಾಯು ವಿಹಾರಕ್ಕೆ ಬಂದವರು ಈ ಫಾರಿನ್ ಹಕ್ಕಿಗಳ ತುಂಟಾಟ ನೋಡಿಯೇ ಹೋಗುತ್ತಾರೆ..

ಸುತ್ತಮುತ್ತ ಹಚ್ಚಹಸಿರಿನ ವಾತಾವರಣ ಇರುವುದರಿಂದ ಹಕ್ಕಿಗಳು ಇಲ್ಲಿಯೇ ಆಹಾರ ಸಂಗ್ರಹ ಮಾಡುತ್ತವೆ.. ಇನ್ನು ಈ ಹಕ್ಕಿಗಳ ಕಲರವ ನೋಡಬೇಕಾದ್ರೆ ಲುಂಬಿನಿ ವನಕ್ಕೆ ಸ್ವಲ್ಪ ಬೆಳಗ್ಗೆಯೇ ಬರಬೇಕಾಗುತ್ತೆ. ಬೆಳಗ್ಗೆ ಬಂದ್ರೆ ಸಾಕು ನೂರಾರು ವಿವಿಧ ತಳಿಯ ಬಾನಾಡಿಗಳು ಸ್ವಚ್ಚಂದವಾಗಿ ಆಕಾಶದಲ್ಲಿ ಹಾರುತ್ತಾ ಕೆರೆಯಲ್ಲಿ ಕೂಲ್ ಕೂಲ್ ಆಗಿ ಈಜಾತ್ತಾ ಇರುತ್ತವೆ.

ಹೀಗಾಗಿ ಈ ಮನಮೋಹಕ ದೃಶ್ಯವನ್ನ ನೋಡಿದ್ರೆ ಜೊತೆಗೆ ಈ ಕೆರೆಯಲ್ಲಿ ವಲಸೆ ಬಂದ ವಿದೇಶಿ ಹಕ್ಕಿಗಳನ್ನ ನೋಡಿದ್ರೆ ಪಕ್ಷಿಗಳ ಪ್ರೇಮಿ ಸಲಿಂ ಅಲಿ ಅವರ ನೆನಪಾಗುತ್ತೆ. ಜೊತೆಗೆ ಇಂತಹ ಮನಮೋಹಕ ದೃಶ್ಯ ನೋಡಲು ಕಣ್ಣಿಗೆ ಆನಂದವಾಗುತ್ತೆ ಅಂತಾರೆ ವಾಯು ವಿಹಾರಕ್ಕೆ ಬಂದವರು. ಇನ್ನು ಪ್ರತಿ ವರ್ಷ ನವೆಂಬರನಿಂದ ಪೆಬ್ರುವರಿ ವರೆಗೆ ವಿದೇಶಿ ಹಕ್ಕಿಗಳ ವಲಸೆ ಜೋರಾಗಿರುತ್ತದೆ. ವಿಶೇಷವಾಗಿ ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಿಂದ ಹಕ್ಕಿಗಳು ಆಗಮಿಸುತ್ತವೆ. ಇನ್ನು ತಮ್ಮ ಆರೋಗ್ಯದ ದೃಷ್ಟಿಯಿಂದ ಹಾರುತ್ತ ಬರುವ ವಿದೇಶಿ ಹಕ್ಕಿಗಳು ಇಲ್ಲಿನ ಜನರ ಮನಗೆದ್ದಿವೆ.

ಪುಸ್ತಕದಲ್ಲಷ್ಟೇ ನೋಡಲು ಸಿಗುವ ವಿವಿಧ ತಳಿಯ ಹಕ್ಕಿಗಳನ್ನು ತಮ್ಮೂರಿನಲ್ಲಿಯೇ ನೋಡಲು ಸಿಗ್ತಾಯಿದ್ದರಿಂದ ಜನ ಸಂತೋಷ ವ್ಯಕ್ತಪಡಿಸುತ್ತಾರೆ. ಬೆಳಗ್ಗೆ ಒಂದು ರೌಂಡ್ ಈ ಹಕ್ಕಿಗಳು ಆಟ ನೋಡುವುದಕ್ಕೆಂದೇ ಬರುವ ಜನರೂ ಇದ್ದಾರೆ. ವಲಸೆ ಹಕ್ಕಿಗಳು ಕೆರೆಗೆ ಬಂದಿದ್ದರಿಂದ ಲುಂಬಿನಿ ವನಕ್ಕೆ ಪ್ರವಾಸಿಗರು ಬರುವುದು ಸಹ ಹೆಚ್ಚಾಗಿದೆ.. ವಾರದ ರಜೆ ಹಾಗೂ ಭಾನುವಾರಕ್ಕೆ ಕುಟುಂಬ ಸಮೇತ ನೂರಾರು ಮಂದಿ ಬಂದು ಈ ಸುಂದರವಾದ ನೋಟವನ್ನ ವೀಕ್ಷಿಸಿ ಹೋಗುತ್ತಾರೆ. ಇನ್ನು ಯಾದಗಿರಿಯಲ್ಲಿ ಇಂತಹ ಅದ್ಬುತ ದೃಶ್ಯ ನೋಡ ಸಿಗಲು ನಾವು ಅದೃಷ್ಟ ಮಾಡಿದ್ದೇವೆ. ವಿದೇಶಗಳನ್ನ ನೋಡುವುದು ಸಾಧ್ಯವಾಗದಿದ್ದಲ್ಲಿ ಇಲ್ಲೆ ನೋಡಲು ಸಿಕ್ಕಿದ್ದಕ್ಕಾಗಿ ಖುಷಿ ಅನ್ನಿಸುತ್ತೆ ಅಂತಾರೆ ಶಾಲಾ ಮಕ್ಕಳನ್ನ ಕರೆದುಕೊಂಡು ಬಂದ ಶಿಕ್ಷಕರು.

ಒಟ್ನಲ್ಲಿ ಬಾನಾಡಿಗಳ ಕಲರಫುಲ್ ಲುಕ್ ಹಾಗೂ ತುಂಟಾಟ ನೋಡುವುದು ಒಂದು ರೀತಿ ಮನಸಿಗೆ ಸಂತೋಷ. ತಣ್ಣನೆಯ ಗಾಳಿಯಲ್ಲಿ ವಾಯು ವಿಹಾರಕ್ಕೆನಾದರೂ ಈ ವನಕ್ಕೆ ಬಂದ್ರೆ ಇಂತಹ ಮನಮೋಹಕ ದೃಶ್ಯಗಳನ್ನ ನೀವು ಸಹ ಕಣ್ತುಂಬಿಕೊಂಡು ಹೋಗಿ.

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು