ಯಾದಗಿರಿ: ನಿಂತ ಲಾರಿಗೆ ಟಂಟಂ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು
ಯಾದಗಿರಿ: ರಸ್ತೆಬದಿ ನಿಂತಿದ್ದ ಲಾರಿಗೆ ಟಂಟಂ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ವಡಗೇರ ತಾಲೂಕಿನ ಹಾಲಗೇರ ಗ್ರಾಮದ ಬಳಿ ಸಂಭವಿಸಿದೆ. ಘಟನೆಯಲ್ಲಿ ಸಿದ್ದಮ್ಮ (50) ರಮೇಶ (25) ಭಾಷಪ್ಪ (55) ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಹಾಗೂ ಐವರಿಗೆ ಗಾಯಗಳಾಗಿದ್ದು, ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತಪಟ್ಟ ತಾಯಿ ಸಿದ್ದಮ್ಮ ಮಗ ರಮೇಶ್ ಇಬ್ಬರು ಹಲಕರ್ಟಿ ನಿವಾಸಿಗಳು. ಬೆಳಗ್ಗೆಯೇ ತಾಯಿ ಸಿದ್ದಮ್ಮ ತಮ್ಮ ಮಗನಿಗೆ ಕುಡಿತ ಬಿಡಿಸಲು ಹಾಲಗೇರಕ್ಕೆ ಹೊರಟಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದ್ದು, ವಡಗೇರ […]
ಯಾದಗಿರಿ: ರಸ್ತೆಬದಿ ನಿಂತಿದ್ದ ಲಾರಿಗೆ ಟಂಟಂ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ವಡಗೇರ ತಾಲೂಕಿನ ಹಾಲಗೇರ ಗ್ರಾಮದ ಬಳಿ ಸಂಭವಿಸಿದೆ. ಘಟನೆಯಲ್ಲಿ ಸಿದ್ದಮ್ಮ (50) ರಮೇಶ (25) ಭಾಷಪ್ಪ (55) ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಹಾಗೂ ಐವರಿಗೆ ಗಾಯಗಳಾಗಿದ್ದು, ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತಪಟ್ಟ ತಾಯಿ ಸಿದ್ದಮ್ಮ ಮಗ ರಮೇಶ್ ಇಬ್ಬರು ಹಲಕರ್ಟಿ ನಿವಾಸಿಗಳು. ಬೆಳಗ್ಗೆಯೇ ತಾಯಿ ಸಿದ್ದಮ್ಮ ತಮ್ಮ ಮಗನಿಗೆ ಕುಡಿತ ಬಿಡಿಸಲು ಹಾಲಗೇರಕ್ಕೆ ಹೊರಟಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದ್ದು, ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.