Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ತವ್ಯ ನಿರ್ಲಕ್ಷ್ಯ: 4 ಅಧಿಕಾರಿಗಳ ವಿರುದ್ಧ ಕೆಎನ್​ ಫಣೀಂದ್ರರಿಂದ ಸ್ವಯಂ ಪ್ರೇರಿತ ದೂರು

ಯಾದಗಿರಿ ನಗರದ ಸರ್ಕ್ಯೂಟ್ ಹೌಸ್ ಹತ್ತಿರದ, ಸರಕಾರಿ ಮೆಟ್ರಿಕ್ ನಂತರದ ಬಾಲಕರ ಹೊಸ ಹಾಗೂ ಹಳೆಯ ವಸತಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದ ನ್ಯೂನತೆ ಸರಿಪಡಿಸುವಲ್ಲಿ ನಿರ್ಲಕ್ಷ್ಯತೆ ತೋರಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ರಾಜ್ಯ ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.

ಕರ್ತವ್ಯ ನಿರ್ಲಕ್ಷ್ಯ: 4 ಅಧಿಕಾರಿಗಳ ವಿರುದ್ಧ ಕೆಎನ್​ ಫಣೀಂದ್ರರಿಂದ ಸ್ವಯಂ ಪ್ರೇರಿತ ದೂರು
ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ
Follow us
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2023 | 10:04 PM

ಯಾದಗಿರಿ, ನವೆಂಬರ್​​ 30: ನಗರದ ಸರ್ಕ್ಯೂಟ್ ಹೌಸ್ ಹತ್ತಿರದ, ಸರಕಾರಿ ಮೆಟ್ರಿಕ್ ನಂತರದ (ಪರಿಶಿಷ್ಟ ಜಾತಿ) ಬಾಲಕರ ಹೊಸ ಹಾಗೂ ಹಳೆಯ ವಸತಿ ನಿಲಯಗಳಿಗೆ ರಾಜ್ಯ ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ (KN Phaneendra) ಅವರು ಭೇಟಿ ನೀಡಿದ್ದರು. ಈ ವೇಳೆ ಕಂಡುಬಂದ ನ್ಯೂನತೆ ಸರಿಪಡಿಸುವಲ್ಲಿ ನಿರ್ಲಕ್ಷ್ಯತೆ ತೋರಿದ ನಾಲ್ವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸರೋಜಾ, ತಾಲೂಕು ಯಾದಗಿರಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಿ.ರಾಜ್‌ಕುಮಾರ್, ಸರಕಾರಿ ಮೆಟ್ರಿಕ್ ನಂತರದ ಬಾಲಕರ ಹೊಸ ಹಾಗೂ ಹಳೆಯ ವಸತಿ ನಿಲಯಗಳ ವಾರ್ಡನ್ ವೀರೇಶ್, ಹಾಗೂ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಕರ ವಿರುದ್ಧ ದೂರು ದಾಖಲಾಗಿದೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ 7(2)ಸಹವಾಚಕ ಕಲಂ 9 (3)(ಎ) ರ ಅಡಿಯಲ್ಲಿನ ಅಧಿಕಾರದಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾಗಿ ತಿಳಿದು ಬಂದಿದೆ. ವರ್ತನೆಯು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 2 (10)ರ ಪರಿಭಾಷೆ, ದುರಾಡಳಿತದ ವ್ಯಾಪ್ತಿಗೆ ಒಳಪಡುವುದರಿಂದ ಲೋಕಾಯುಕ್ತ ಕಾಯ್ದೆ 1984ರ ಕಲಂ 7 (2)ರ ಅಡಿಯಲ್ಲಿ ಈ ಅಧಿಕಾರಿ ಹಾಗೂ ನೌಕರರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದು, ಈ ಕುರಿತು ಆದೇಶ ಹೊರಡಿಸಿ 20 ದಿನಗಳ ಒಳಗಾಗಿ ಪೂರಕ ದಾಖಲಾತಿಗಳೊಂದಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ಒಂದೆ ಕುರ್ಚಿಗಾಗಿ ಇಬ್ಬರು ಸರ್ಕಾರಿ ಅಧಿಕಾರಿಗಳ ಗುದ್ದಾಟ, ನಾನೇ ಇಲ್ಲಿಯ ಅಧಿಕಾರಿ ಎಂದು ಪ್ರತ್ಯೇಕ ಕುರ್ಚಿಗಳನ್ನು ಹಾಕಿಕೊಂಡು ಕುಳಿತ ಅಧಿಕಾರಿಗಳು!

ಅದರಂತೆ ಈ ಆದೇಶ ಪ್ರತಿಯನ್ನು ಯಾದಗಿರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ ಕುಮಾರ ಇವರಿಗೆ ಆದೇಶದ ಪ್ರತಿಯನ್ನು ಮಾಹಿತಿಗಾಗಿ ಕಳುಹಿಸಿ, ಗಮನಿಸಿರುವ ಲೋಪದೋಷಗಳು, ಸಮಸ್ಯೆಗಳಿಗೆ ನಿಯಮಾನುಸಾರ ಕ್ರಮಕೈಗೊಂಡು ಆದೇಶ ಪ್ರತಿ ತಲುಪಿದ ಒಂದು ತಿಂಗಳ ಒಳಗಾಗಿ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.

ನ. 20ರಂದು ಭೇಟಿ ನೀಡಿದ್ದ ಉಪಲೋಕಾಯುಕ್ತ

ಯಾದಗಿರಿ ನಗರದ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ ಹೊಸ ಹಾಗೂ ಹಳೆ ವಸತಿ ನಿಲಯಗಳಿಗೆ ನ.20ರಂದು ಸಂಜೆ 6:30 ಗಂಟೆಗೆ ರಾಜ್ಯ ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ ಅವರು ಭೇಟಿ ನೀಡಿದ್ದರು. ಈ ವೇಳೆ ಅಡುಗೆ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ವೇತನ ನೀಡುತ್ತಿಲ್ಲ. ಅಡುಗೆ ಕಿಟಕಿಗಳಲ್ಲಿ ಜಿರಲೆಗಳು ತುಂಬಿದ್ದವು. ಕಿಟಕಿಯ ಮೆಸ್ ಸರಿಯಾಗಿ ಇರಲಿಲ್ಲ, ಸರಿಯಾಗಿ ಗಾಳಿ ಹೊರಗೆ ಹೋಗುವ ಎಕ್ಸಾಸ್ಟ್ ಫ್ಯಾನ್ ಕೆಟ್ಟು ಹೋಗಿತ್ತು, ರೊಟ್ಟಿಗಳನ್ನು ಸಂರಕ್ಷಿಸಿಡದೆ ಮೂಲೆಯಲ್ಲಿ ಇಡಲಾಗಿತ್ತು. ಅಡುಗೆ ಮನೆಯಲ್ಲಿ ಸ್ವಚ್ಛತೆ ಇರಲಿಲ್ಲ.

ಇದನ್ನೂ ಓದಿ: ಗೊಂದಲ ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕ: ಕೊಡೇಕಲ್ ಬಸವಣ್ಣನ ಅಚ್ಚರಿ ಭವಿಷ್ಯ!

ಸ್ಟೋರ್ ರೂಮ್‌ನ ದವಸ, ಧಾನ್ಯಗಳು ಸ್ವಚ್ಛತೆ ಇದ್ದಿದ್ದಿಲ್ಲ. ವಿದ್ಯಾರ್ಥಿಗಳ ಹರಿದ ಹಾಸಿಗೆ ಕಂಡು ಬಂದಿದ್ದಲ್ಲದೆ ತಲೆದಿಂಬು, ಮಂಚಗಳು ಇರಲಿಲ್ಲ. ಮುರಿದ ಶೌಚಾಲಯ ಬಾಗಿಲು, ನೀರಿನ ಸಮಸ್ಯೆ, ಸೇರಿದಂತೆ ಕಳೆದ 2 ವರ್ಷಗಳಿಂದ ಹಾಸಿಗೆ, ಮಂಚ ಹಾಗೂ ಸರಿಯಾದ ಹೊದಿಕೆ ನೀಡಿಲ್ಲವೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಅದರಂತೆ ಇನ್ವರ್ಟರ್ ಕೆಟ್ಟಿತ್ತು, ಕುಡಿಯಲು ನೀರು ಸಮರ್ಪಕವಾಗಿಲ್ಲ, ಬಿಸಿ ನೀರು ಇಲ್ಲ, ನೀರನ ಟ್ಯಾಂಕ್ ಶುಚಿಗೊಳಿಸಿಲ್ಲ, ಸೋಲಾರ್ ಕೆಟ್ಟಿತು, ಮೆನು ಚಾರ್ಟ್ ಪ್ರಕಾರ ಆಹಾರ ನೀಡುತ್ತಿಲ್ಲ, ಅನ್ನದಲ್ಲಿ ಹುಳುಗಳು ಕಂಡಿವೆ, ತರಕಾರಿ ಹಾಕಿಲ್ಲ, ಊಟ ರುಚಿಯಾಗಿಲ್ಲ, ಬಸ್ ವ್ಯವಸ್ಥೆ ಇಲ್ಲ, ಮಳೆ ಬಂದಾಗ ವಸತಿ ನಿಲಯ ಸೋರುತ್ತಿವೆ.

ಕ್ರೀಡಾ ಸಾಮಾಗ್ರಿ ಸರಬರಾಜು ಆಗಿಲ್ಲ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಗಳನ್ನು ಸರಿಯಾಗಿ ಆಚರಣೆ ಮಾಡುತ್ತಿಲ್ಲ, ಗ್ರಂಥಾಲಯ ಇಲ್ಲ ಎಂಬಿತ್ಯಾದಿ ಸಮಸ್ಯೆಗಳಿದ್ದರೂ ವಸತಿ ನಿಲಯದ ವಾರ್ಡನ್ ಬರದೆ ಸಮಸ್ಯೆಗಳನ್ನು ಸರಿಯಾಗಿ ಆಲಿಸುತ್ತಿಲ್ಲ ಎಂಬುದನ್ನು ಗಮನಿಸಿ ಲೋಕಾಯುಕ್ತ ಕಾಯ್ದೆ 1984ರ ಕಲಂ 2ರ ಅನ್ವಯ ಈ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ