Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊಂದಲ ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕ: ಕೊಡೇಕಲ್ ಬಸವಣ್ಣನ ಅಚ್ಚರಿ ಭವಿಷ್ಯ!

Yadagir Kodekal Basavanna prediction: ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್​ನಲ್ಲಿ ನಾಯಕರ ಮಧ್ಯೆಯೇ ಗೊಂದಲಗಳು ಏರ್ಪಟ್ಟಿವೆ. ಅದರಲ್ಲೂ ಆಡಳಿತರೂಢ ಕಾಂಗ್ರೆಸ್​ನಲ್ಲಿ ಬಣ ರಾಜಕೀಯ ಜೋರಾಗಿದೆ. ರಾಜ್ಯದಲ್ಲಿ ಏರ್ಪಟ್ಟಿರುವ ಪಕ್ಷದಲ್ಲಿನ ಗೊಂದಲಗಳ ಮಧ್ಯೆ ಕಾಲಜ್ಞಾನಿ ಕೊಡೇಕಲ್ ಬಸವಣ್ಣನ ಅಚ್ಚರಿ ಭವಿಷ್ಯ ಹೊರಬಿದ್ದಿದೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೊಲ‌ ಕಲ್ಲೊಲ ಸೃಷ್ಟಿಯಾಗುತ್ತಾ? ಹಾಗಾದ್ರೆ, ಕಾಲಜ್ಞಾನಿ ಕೊಡೇಕಲ್ ಬಸವಣ್ಣನ ಭವಿಷ್ಯದಲ್ಲೇನಿದೆ? ಇಲ್ಲಿದೆ ವಿವರ

Follow us
ಅಮೀನ್​ ಸಾಬ್​
| Updated By: ರಮೇಶ್ ಬಿ. ಜವಳಗೇರಾ

Updated on:Nov 12, 2023 | 6:03 PM

ಯಾದಗಿರಿ, (ನವೆಂಬರ್ 12): ದೀಪಾವಳಿ ನರಕ ಚತುರ್ದಶಿದಂದು ಯಾದಗಿರಿಯ ಕಾಲಜ್ಞಾನಿ ಕೊಡೇಕಲ್ ಬಸವಣ್ಣನ ಭವಿಷ್ಯ(Kodekal Basavanna prediction:) ನುಡಿ ಹೊರಬಿದ್ದಿದೆ. ಪಕ್ಷಗಳಲ್ಲಿನ ಗೊಂದಲಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕ ಎದುರಾಗಲಿದೆ. ಒಂದು ವೇಳೆ ಎಲ್ಲರೂ ವಿಶ್ವಾದಿಂದ ಹೋಗದಿದ್ರೆ ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ. ಇದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಕಾಲಜ್ಞಾನಿ ಬಸವಣ್ಣನ ಭವಿಷ್ಯ ನುಡಿಯಾಗಿದೆ. ರಾಜ್ಯದಲ್ಲಿ ಏರ್ಪಟ್ಟಿರುವ ಪಕ್ಷಗಳಲ್ಲಿನ ಗೊಂದಲಗಳ ಮಧ್ಯೆ ಈ ಕಾಲಜ್ಞಾನಿ ಕೊಡೇಕಲ್ ಬಸವಣ್ಣನ ಭವಿಷ್ಯ ಅಚ್ಚರಿ ಮೂಡಿಸಿದೆ.

ಹಲವು ಪಕ್ಷಗಳು(ಮನಸ್ಥಿತಿ) ಸೇರಿ ಅಧಿಕಾರ ಪಡೆಯಲು ಯತ್ನಿಸಿವೆ. ಹಲವರು ಸೇರಿ ಅಧಿಕಾರ ಪಡೆಯಲು ಮುಂದಾಗಿರುವವರು ಸಹ ಎಚ್ಚರಿಕೆ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಅವರವರೇ ಘಾತಕತನ(ಮೋಸ) ಮಾಡುವವರು. ರಾಜಕೀಯದಲ್ಲಿ ಮುಂದಿನ ದಿ‌ನಗಳಲ್ಲಿ ಯಾರನ್ನು ಸಹ ನಂಬದಂತಹ ದಿನಮಾನಗಳು ನಡೆಯುತ್ತವೆ. ಎಂದು ದೀಪಾವಳಿ ಹಬ್ಬದಂದು ಕಾಲಜ್ಞಾನಿ ಭವಿಷ್ಯ ನುಡಿದಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಮೊದಲೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್​ನಲ್ಲಿ ನಾಯಕರ ಮಧ್ಯೆಯೇ ಗೊಂದಲಗಳು ಏರ್ಪಟ್ಟಿವೆ. ಅದರಲ್ಲೂ ಆಡಳಿತರೂಢ ಕಾಂಗ್ರೆಸ್​ನಲ್ಲಿ ಬಣ ರಾಜಕೀಯ ಜೋರಾಗಿದೆ. ಒಂದು ಕಡೆ ಡಿಕೆ ಶಿವಕುಮಾರ್ ಬಣ ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬಣ ರಾಜಕೀಯ ನಡೆಯುತ್ತಿದ್ದು, ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಶುರುವಾಗಿದೆ. ಇದರ ಮಧ್ಯೆ ಶಾಸಕ ಹಾಗೂ ಸಚಿವರ ಅಸಮಾಧಾನ ಸಹ ಭುಗಿಲೆದ್ದಿದೆ. ಅದರಲ್ಲೂ ಪ್ರಮುಖವಾಗಿ ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದು, ಕಾಂಗ್ರೆಸ್​ನಲ್ಲಿ ಕಂಪನ ಸೃಷ್ಟಿಸಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಆಪರೇಷನ್ ಕಮಲದ ಮಾತುಗಳು ಕೇಳಿಬರುತ್ತಿವೆ.

ಹತ್ತು ಹದಿನೈದು ಜನ ಶಾಸಕರು ಕಾಂಗ್ರೆಸ್ ತೊರೆದ ಸರ್ಕಾರಕ್ಕೆ ಏನು ಪೆಟ್ಟು ಬೀಳುವುದಿಲ್ಲ. ಬದಲಿಗೆ ಪಕ್ಷ ವಿಬ್ಭಾಗವಾಗಿ ಮಹಾರಾಷ್ಟ್ರ ರಾಜಕೀಯದಂತೆ ಬದಲಾವಣೆ ಸುದ್ದಿ ಹರಿದಾಡುತ್ತಿದೆ. ಇದೆಲ್ಲದರ ಮಧ್ಯೆ ಈ ಬಗ್ಗೆಯೇ ಕಾಲಜ್ಞಾನಿ ಬಸವಣ್ಣನ ಭವಿಷ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಗೊಂದಲಗಳು ಬಗೆಹರಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕ ಎನ್ನುವ ಭವಿಷ್ಯ ಹೊರಬಿದ್ದಿದೆ. ಅಲ್ಲದೇ ಅಧಿಕಾರಕ್ಕೇರಲು ಪ್ರಯತ್ನಿಸುವವರಿಗೂ ಕಾಲಜ್ಞಾನಿ ಬಸವಣ್ಣನ ಭವಿಷ್ಯವಾಣಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:26 pm, Sun, 12 November 23

ನನಗೆ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ
ನನಗೆ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ
ವಿರೋಧದ ಮಧ್ಯೆಯೂ ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕ ಅಂಗೀಕಾರ
ವಿರೋಧದ ಮಧ್ಯೆಯೂ ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕ ಅಂಗೀಕಾರ
ಕೆಲಸದ ವಿಷಯದಲ್ಲಿ ಶಿವಕುಮಾರ್​ಗೆ ಸದನದಲ್ಲಿ ಸವಾಲೆಸೆದ ಅಶ್ವಥ್ ನಾರಾಯಣ
ಕೆಲಸದ ವಿಷಯದಲ್ಲಿ ಶಿವಕುಮಾರ್​ಗೆ ಸದನದಲ್ಲಿ ಸವಾಲೆಸೆದ ಅಶ್ವಥ್ ನಾರಾಯಣ
ಟ್ರೋಲಿಂಗ್: ರಶ್ಮಿಕಾ ಮಂದಣ್ಣ ಪರ ನಿಂತ ನಟಿ ರಮ್ಯಾ
ಟ್ರೋಲಿಂಗ್: ರಶ್ಮಿಕಾ ಮಂದಣ್ಣ ಪರ ನಿಂತ ನಟಿ ರಮ್ಯಾ
ಮಾನಸ ಗಂಗೋತ್ರಿ ಒಂದೇ ಸಾಕಿತ್ತಲ್ಲ, ಬೇರೆ ಯಾಕೆ ಬೇಕಿತ್ತು? ಅಶ್ವಥ್ ನಾರಾಯಣ
ಮಾನಸ ಗಂಗೋತ್ರಿ ಒಂದೇ ಸಾಕಿತ್ತಲ್ಲ, ಬೇರೆ ಯಾಕೆ ಬೇಕಿತ್ತು? ಅಶ್ವಥ್ ನಾರಾಯಣ
ಬಜೆಟ್​ನಲ್ಲಿ ಬೇಡಿಕೆ ಈಡೇರಿಸುವಂತೆ 4 ಸಾರಿಗೆ ನಿಗಮಗಳ ಒತ್ತಾಯ
ಬಜೆಟ್​ನಲ್ಲಿ ಬೇಡಿಕೆ ಈಡೇರಿಸುವಂತೆ 4 ಸಾರಿಗೆ ನಿಗಮಗಳ ಒತ್ತಾಯ
ಇಂಟರ್​ವಲ್ ತನಕ ಕಥೆ ಕೇಳಿ ಎಕ್ಸ್​ಕ್ಯೂಸ್​ ಮಿ’ ಒಪ್ಪಿಕೊಂಡಿದ್ದ ರಮ್ಯಾ
ಇಂಟರ್​ವಲ್ ತನಕ ಕಥೆ ಕೇಳಿ ಎಕ್ಸ್​ಕ್ಯೂಸ್​ ಮಿ’ ಒಪ್ಪಿಕೊಂಡಿದ್ದ ರಮ್ಯಾ
ಪರಿಶಿಷ್ಟ ಜಾತಿ/ ಪಂಗಡಗಳ ಏಳ್ಗೆಗೆ ಸಿದ್ದರಾಮಯ್ಯ ಬಹಳ ಮಾಡಿದ್ದಾರೆ: ಸಚಿವ
ಪರಿಶಿಷ್ಟ ಜಾತಿ/ ಪಂಗಡಗಳ ಏಳ್ಗೆಗೆ ಸಿದ್ದರಾಮಯ್ಯ ಬಹಳ ಮಾಡಿದ್ದಾರೆ: ಸಚಿವ
ಸರಳವಾಗಿ ನೆರವೇರಿತು ಸಂಸದ ತೇಜಸ್ವಿ ಸೂರ್ಯ ಮದ್ವೆ: ವಿಡಿಯೋ ನೋಡಿ
ಸರಳವಾಗಿ ನೆರವೇರಿತು ಸಂಸದ ತೇಜಸ್ವಿ ಸೂರ್ಯ ಮದ್ವೆ: ವಿಡಿಯೋ ನೋಡಿ
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಯಾರು ಬಲಿಷ್ಠರು ವಿಷಯದ ಮೇಲೆ ವಾಗ್ವಾದ
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಯಾರು ಬಲಿಷ್ಠರು ವಿಷಯದ ಮೇಲೆ ವಾಗ್ವಾದ