
ಯಾದಗಿರಿ, ಮೇ 22: ಇತ್ತೀಚೆಗೆ ನಗರದ ಜೈನ್ ಬಡಾವಣೆಯ ನಿವಾಸಿ ನಿಖಿತಾ ಎಂಬ ಯುವತಿ ಕೇವಲ ತನ್ನ 26ನೇ ವಯಸ್ಸಿಗೆ ಜೈನ ಮುನಿ (monasticism) ಆಗಿದ್ದರು. ಕೋಟ್ಯಾಧೀಶ್ವರರ ಮನೆಯಲ್ಲಿ ಬಾಯಿಯಲ್ಲಿ ಬಂಗಾರದ ಚಮಟ ಇಟ್ಟುಕೊಂಡು ಹುಟ್ಟಿ, ಬೆಳೆದಿದ್ದ ಯುವತಿ ಐಷಾರಾಮಿ ಜೀವನವನ್ನು ತ್ಯಜಿಸಿದ್ದರು. ಇದೀಗ ಇಂತಹದ್ದೆ ಮತ್ತೊಂದು ಘಟನೆ ನಡೆದಿದೆ. 100 ಕೋಟಿ ರೂ ಆಸ್ತಿ ಒಡೆಯ, ಮೂವರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಬಿಟ್ಟು ಇದೀಗ ಜೈನ ಮುನಿ (Jain monk) ಆಗಲು ಹೊರಟಿದ್ದಾರೆ.
ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದ ನಿವಾಸಿ ದಿಲೀಪ್ ಕುಮಾರ್ ದೋಖಾ ಎಂಬುವವರು ಜೈನ್ ದೀಕ್ಷೆ ಪಡೆದಿದ್ದಾರೆ. ಆ ಮೂಲಕ ಪತ್ನಿ ಮಕ್ಕಳನ್ನ ಬಿಟ್ಟು ಜೈನ ಮುನಿಯಾಗಲು ಹೊರಟಿದ್ದಾರೆ. ನೂರು ಕೋಟಿ ಆಸ್ತಿ ಐಷಾರಾಮಿ ಬಂಗಲೆ, ಕಾರು, ವ್ಯಾಮೋಹದ ಜೀವನ ತ್ಯಜಿಸಿ ಸನ್ಮಾರ್ಗದ ಕಡೆ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: ಕೂಲಿಗೆ ಬೈ ಬ್ಯುಸಿನೆಸ್ಗೆ ಜೈ: ಗೃಹ ಲಕ್ಷ್ಮೀ ಯೋಜನೆಯಿಂದ ಬದಲಾದ ಮಹಿಳೆಯ ಬದುಕು
ದಿಲೀಪ್ ಕುಮಾರ್ ದೋಖಾ ಅವರು ಕಳೆದ 12 ವರ್ಷಗಳಿಂದ ಅಮೆರಿಕಾದಲ್ಲಿ ಮೆಡಿಸಿನ್ ಉತ್ಪಾದನಾ ವ್ಯವಹಾರ ಮಾಡುತ್ತಿದ್ದರು. ಬೆಂಗಳೂರಿನಲ್ಲೂ ಆಸ್ತಿ ಹೊಂದಿದ್ದಾರೆ. ದಿಲೀಪ್ ಕುಮಾರ್ ದೋಖಾ ಅವರಿಗೆ ಮದುವೆ ಕೂಡ ಆಗಿದ್ದು, ಮೂರು ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ. ಮಕ್ಕಳ ಮದುವೆ ಮಾಡಿ ಇದೀಗ ಪತ್ನಿಯನ್ನ ಒಬ್ಬೊಂಟಿಯಾಗಿ ಬಿಟ್ಟು ಜೈನ ಮುನಿ ಆಗಿ ಪರಿವರ್ತನೆ ಆಗಿದ್ದಾರೆ.
ಅದ್ದೂರಿ ಮೆರವಣಿಗೆ
55 ವರ್ಷದ ದಿಲೀಪ್ ಕುಮಾರ್ ದೋಖಾ ಅವರು 14 ವರ್ಷದಲ್ಲೇ ಜೈನ್ ದೀಕ್ಷೆ ಪಡೆಯಲು ಹೋಗಿದ್ದರು. ಪೋಷಕರು ಬೇಡ ಅಂದಿದ್ದಕ್ಕೆ ವಾಪಸ್ ಆಗಿದ್ದರು. ಆದರೆ ಇದೀಗ ಜೈನ್ ದೀಕ್ಷೆ ಪಡೆದುಕೊಳ್ಳುವ ಮೂಲಕ ಬರೋಬ್ಬರಿ 41 ವರ್ಷದ ಬಳಿಕ ತಾವು ಹಿಂದೆ ಮಾಡಲು ಆಗದ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಯಾದಗಿರಿ: ತಾಪಮಾನ ಏರಿಕೆ ಪರಿಣಾಮ ನವಜಾತ ಶಿಶುಗಳಲ್ಲಿ ಕಿಡ್ನಿ ಬಾವು, ಆರೋಗ್ಯ ಸಮಸ್ಯೆ ಹೆಚ್ಚಳ
ಇನ್ನು ಜೈನ್ ದೀಕ್ಷೆ ಪಡೆದಿದ್ದಕ್ಕೆ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಕೊನೆಯದಾಗಿ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಬಿಳ್ಕೋಡುಗೆ ನೀಡಲಾಗಿದೆ. ಸೈದಾಪುರ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾರೋಟದಲ್ಲಿ ಮೆರವಣಿಗೆ ಮಾಡಿದ್ದಾರೆ.
ಜೈನ್ ದೀಕ್ಷೆ ಬಳಿಕ ಐಷಾರಾಮಿ ಕಾರು ಬಿಟ್ಟು ಓಡಾಡಬೇಕು. ಕಾಲಿಗೆ ಚಪ್ಪಲಿ ಸಹ ಹಾಕದೇ ಬರಿಗಾಲಲ್ಲಿ ಊರಿಂದ ಊರಿಗೆ ನಡೆದುಕೊಂಡೆ ಸಾಗಬೇಕು. ತಲೆ ಕೂದಲು ಕಿತ್ತಿಕೊಳ್ಳಬೇಕು, ಬಿಳಿ ಬಟ್ಟೆ ಮಾತ್ರ ಧರಿಸಬೇಕು. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿಕೊಂಡು ಊಟ ಮಾಡಬೇಕು. ಇಂತಹ ಕಠಿಣ ಹಾದಿಯಲ್ಲಿ ಸಾಗಲು ದಿಲೀಪ್ ಅವರು ಮುಂದಾಗಿದ್ದು, ಇತ್ತ ಪತ್ನಿ ಕಣ್ಣೀರು ಹಾಕಿದ್ದಾರೆ. ಬೇಡ ಅಂತ ಹೇಳಿದರು ನನನ್ನು ಒಬ್ಬಂಟಿ ಮಾಡಿ ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:44 am, Thu, 22 May 25