ಕಳ್ಳತನ, ಕೊರೊನಾ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಲು ವಿನೂತನ ಪ್ರಯತ್ನ; ಅಶರೀರ ವಾಣಿಯಿಂದ ಬರುತ್ತೆ ಎಚ್ಚರಿಕೆ

| Updated By: ಆಯೇಷಾ ಬಾನು

Updated on: Aug 22, 2021 | 10:59 AM

ಆ ನಗರದಲ್ಲಿ ಕಳ್ಳತನ, ಬೈಕ್ ಆಕ್ಸಿಡೆಂಟ್ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದವು. ಘಟನೆ ನಡೆದು ದಿನಗಳೇ ಕಳೆದ್ರು ಸಹ ಆರೋಪಿಗಳನ್ನ ಹಿಡಿಯಲು ಪೊಲೀಸರ ಕೈಯಿಂದ ಆಗ್ತಾಯಿರಲಿಲ್ಲ. ಇದೇ ಕಾರಣಕ್ಕೆ ಪೊಲೀಸರು ಆ ನಗರದಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ಈಗ ಯಾರ್ ಏನೇ ಮಾಡಿದ್ರೂ ಪೊಲೀಸರ ಕೈಯಲ್ಲೇ ಗೊತ್ತಾಗುತ್ತೆ.

ಕಳ್ಳತನ, ಕೊರೊನಾ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಲು ವಿನೂತನ ಪ್ರಯತ್ನ; ಅಶರೀರ ವಾಣಿಯಿಂದ ಬರುತ್ತೆ ಎಚ್ಚರಿಕೆ
ಕಳ್ಳತನ, ಕೊರೊನಾ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಲು ವಿನೂತನ ಪ್ರಯತ್ನ; ಅಶರೀರ ವಾಣಿಯಿಂದ ಬರುತ್ತೆ ಎಚ್ಚರಿಕೆ
Follow us on

ಯಾದಗಿರಿ: ಜಿಲ್ಲೆಯ ಸುರಪುರ ಪೊಲೀಸರು ಹಾಗೂ ನಗರಸಭೆ ವಿನೂತನ ಪ್ರಯತ್ನಕ್ಕೆ ನಾಂದಿ ಹಾಡಲಾಗಿದೆ. ಸುರಪುರ ನಗರದಲ್ಲಿ ಹೈಟೆಕ್ ಸಿಸಿಟಿವಿ ಕ್ಯಾಮರಾಗಳನ್ನ ಅಳವಡಿಸಿ ಕ್ರೈಂ ಕಂಟ್ರೋಲ್ ಗೆ ಪ್ಲ್ಯಾನ್ ಮಾಡಿದ್ದಾರೆ. ನಗರದ ಪ್ರಮುಖ 12 ಕಡೆ ಸಿಸಿಟಿವಿ ಕ್ಯಾಮರಾಗಳನ್ನ ಅಳವಡಿಸಲಾಗಿದೆ. ಕ್ಯಾಮರಾಗಳ ಜೊತೆಗೆ ಮೈಕ್ ಕೂಡ ಅಳವಡಿಸಿದ್ದು ಕಚೇರಿಯಲ್ಲೇ ಕುಳಿತು ಟ್ರಾಫಿಕ್ ಕಂಟ್ರೋಲ್ ಮಾಡಲಾಗುತ್ತೆ. ಮಾಸ್ಕ್ ಹಾಕಿಲ್ಲ ಅಂದ್ರೆ.. ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸಿದ್ರೆ ಸಿಸಿ ಕ್ಯಾಮರಾದಲ್ಲಿ ನೋಡಿ ಮೈಕ್ ಮೂಲಕ ಎಚ್ಚರಿಸಲಾಗುತ್ತಿದೆ.

ವಿಶೇಷ ಅಂದ್ರೆ ಸುರಪುರ ಕಚೇರಿಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಮೊಬೈಲ್‌ನಲ್ಲಿ ಆ್ಯಪ್ ಓಪನ್ ಮಾಡಿದ್ರೆ ಸಾಕು ಪ್ರತಿಯೊಂದು ಸಿಸಿಟಿವಿಯ ದೃಶ್ಯಗಳನ್ನ ವೀಕ್ಷಣೆ ಮಾಡಬಹುದಾಗಿದೆ. ಇದರ ಜೊತೆಗೆ ಮೊಬೈಲ್ ಮೂಲಕವೇ ಅನೌನ್ಸ್ ಕೂಡ ಮಾಡಬಹುದಾಗಿದೆ. ಎಲ್ಲಾ 12 ಸಿಸಿಟಿವಿ ಕ್ಯಾಮರಾಗಳು ಹೈಟೆಕ್ ಕ್ವಾಲಿಟಿ ಕ್ಯಾಮರಾಗಳಾಗಿವೆ. ನಗರದಲ್ಲಿ ಎಲ್ಲೇ ಕಳ್ಳತನವಾದ್ರು ಸಿಸಿಟಿವಿ ಅಳವಡಿಸಿರುವ ಸರ್ಕಲ್‌ಗಳಿಂದಾನೆೇ ಪಾಸ್ ಆಗಬೇಕು. ಇದೇ ಕಾರಣಕ್ಕೆ ಸಾಕಷ್ಟು ದಿನಗಳಿಂದ ಸುರಪುರದಲ್ಲಿ ಕಳ್ಳತನ ಕೇಸ್‌ಗಳು, ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಇದು ಜನರ ಮೆಚ್ಚುಗೆಗೆ ಕಾರಣವಾಗಿದೆ.

ಒಟ್ನಲ್ಲಿ ಸುರಪುರದಂತ ಸಣ್ಣ ನಗರದಲ್ಲಿ ಪೊಲೀಸರು ಕೈಗೊಂಡ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು, ಹೀಗೆ ಜಿಲ್ಲೆಯಾದ್ಯಂತ ಸಿಸಿ ಕ್ಯಾಮರಾ ಅಳವಡಿಸಿದ್ರೆ ಅಪರಾಧ ಕೃತ್ಯಕ್ಕೆ ಬ್ರೇಕ್‌ ಬೀಳಲಿದೆ.

ಇದನ್ನೂ ಓದಿ: Coronavirus cases in India: ದೇಶದಲ್ಲಿ 30,948 ಹೊಸ ಕೊವಿಡ್ ಪ್ರಕರಣ ಪತ್ತೆ, 403 ಮಂದಿ ಸಾವು