ಯಾದಗಿರಿ, ಆಗಸ್ಟ್ 16: ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ (Anganwadi) ಮಕ್ಕಳಿಗೆ ವಿತರಿಸುವ ಮೊಟ್ಟೆಯಲ್ಲಿ ಗೋಲ್ಮಾಲ್ ನಡೆದ ಬಗ್ಗೆ ಆರೋಪ ಕೇಳಿಬಂದಿತ್ತು. ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿದ ನಂತರ ಮೊಟ್ಟೆಯನ್ನು ಕಸಿದುಕೊಂಡಿದ್ದ ವಿಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೊಂದು ಅಂಗನವಾಡಿಯ ಕರ್ಮಕಾಂಡ ಬಯಲಾಗಿದೆ. ಮೂಟೆಗಟ್ಟಲೇ ಆಹಾರ ಪದಾರ್ಥ ಕಾಳಸಂತೆಯಲ್ಲಿ ಮಾರಾಟವಾಗಿರುವಂತಹ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದಲ್ಲಿ ನಡೆದಿದೆ.
ಹಗರಟಗಿ ಗ್ರಾಮದ ಅಂಗನವಾಡಿ ಕೇಂದ್ರ-2ರ ಅಕ್ರಮ ಬಯಲಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಉಮಾರಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಅಕ್ಕಿ, ಬೇಳೆ, ಶೇಂಗಾ, ಬೆಲ್ಲ, ಚಿಕ್ಕೆ ಹಾಗೂ ಅಡುಗೆ ಎಣ್ಣೆ ಸೇರಿದಂತೆ ಸರ್ಕಾರದಿಂದ ಬರುವ ಆಹಾರ ಪದಾರ್ಥಗಳನ್ನು ಮೂಟೆಯಲ್ಲಿ ಉಮಾ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಸ್ಥಳೀಯರ ಮೊಬೈಲ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯ ಕಳ್ಳಾಟ ಬಯಲಾಗಿದೆ.
ಧಾರವಾಡ: ಅವಳಿ ನಗರದ ಅಂಗನವಾಡಿ ಶಿಕ್ಷಕಿಯರಿಗೆ ಐದು ತಿಂಗಳಿನಿಂದ ಗೌರವ ಧನವೇ ಬಂದಿಲ್ಲ. ಅಂಗನವಾಡಿಯಿಂದ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೂರೈಕೆ ಮಾಡಲಾಗುವ ಮೊಟ್ಟೆಯನ್ನು ಅಂಗನವಾಡಿ ಶಿಕ್ಷಕಿಯರೇ ತಮ್ಮ ಕೈಯಿಂದ ದುಡ್ಡು ಹಾಕಿ ಪೂರೈಕೆ ಮಾಡಿದ್ದಾರೆ. ಕಳೆದ ಐದು ತಿಂಗಳಿನಿಂದ ತಮ್ಮ ಕೈಯಿಂದ ದುಡ್ಡು ಹಾಕಿ ತೆಗೆದುಕೊಂಡು ಬಂದ ಮೊಟ್ಟೆಯ ಬಿಲ್ ಕೂಡ ಆಗಿಲ್ಲ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ: ಯಾರನ್ನೂ ಕೆಲಸದಿಂದ ತೆಗೆಯೋಲ್ಲ ಎಂದ ಹೆಬ್ಬಾಳ್ಕರ್
ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 494 ಅಂಗನವಾಡಿ ಕೇಂದ್ರಗಳಿವೆ. ಅವುಗಳ ಬಾಡಿಗೆ ಕೂಡ ಕೊಡಲು ಸಾಧ್ಯವಾಗಿಲ್ಲ. ಇಲಾಖೆಯ ನಿರ್ದೇಶಕರಿಗೆ ಕೇಳಿದರೆ, ಅವರು ಪ್ರತಿ ತಿಂಗಳಿಗೆ ಎಷ್ಟು ಅನುದಾನ ಇದೆಯೋ, ಅದನ್ನು ಕೊಡುತ್ತಲೇ ಬಂದಿದ್ದೆವೆ ಅನ್ನುತ್ತಿದ್ದಾರಂತೆ. ಹಾಗಾದರೆ ಅಂಗನವಾಡಿ ಶಿಕ್ಷಕಿಯರಿಗೆ ಏಕೆ ಹಣ ಮುಟ್ಟಿಲ್ಲ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ: ಟಿವಿ9 ರಿಯಾಲಿಟಿ ಚೆಕ್: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಳುಗಳ ಪಾಲಾದ ಲಕ್ಷಾಂತರ ರೂ. ಮೌಲ್ಯದ ಅಕ್ಕಿ, ಗೋಧಿ
ಈ ಶಿಕ್ಷಕಿಯರು ಕೈಯಿಂದ ಹಣ ಹಾಕಿ ಮೊಟ್ಟೆ ತಂದು ಸುಸ್ತಾಗಿ ಹೋಗಿದ್ದಾರೆ. ಇತ್ತ ಮೊಟ್ಟೆಗೆ ಹಣವನ್ನೂ ಕೊಡಬೇಕು, ಅತ್ತ ಗೌರವ ಧನ ಇಲ್ಲದೆ ಕೆಲಸ ಮಾಡಬೇಕು. ಹೀಗಾಗಿ ಬೇಗ ಹಣ ಬಿಡುಗಡೆ ಮಾಡದೇ ಇದ್ದರೆ, ಅಂಗನವಾಡಿ ಬಂದ್ ಮಾಡಿ ಹೋರಾಟ ಮಾಡುವ ನಿರ್ಧಾರ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.