ಬೆಂಗಳೂರಲ್ಲಿ ಧರಾಶಾಯಿಯಾದ ಮತ್ತೊದು ಮರ, ಕಾರು ಜಖಂ ಇಬ್ಬರಿಗೆ ಗಂಭೀರ ಗಾಯ

|

Updated on: Sep 02, 2024 | 10:25 AM

ನಗರದಲ್ಲಿರುವ ಮರಗಳ ಸಮೀಕ್ಷೆ ನಡೆಸಿ ಅವುಗಳ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳುವುದು ಬಿಬಿಎಂಪಿಯ ಕೆಲಸ. ಅದರೆ, ಪ್ರತಿ ಮಳೆಗಾಲದಲ್ಲಿ ಮರಗಳು ಉರುಳಿ ಅನಾಹುತಗಳು ಸಂಭವಿಸುತ್ತಿದ್ದರೂ ಪಾಲಿಕೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಪ್ರದರ್ಶಿಸುತ್ತಿರೋದು ನಗರ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರು: ಮಹಾನಗರದಲ್ಲಿ ಅದರಲ್ಲೂ ವಿಶೇಷವಾಗಿ ಮಳೆಗಾಲದ ದಿನಗಳಲ್ಲಿ ಮರಗಳು ಧರೆಗುರುಳುವುದು ಹೊಸತಲ್ಲ ಮತ್ತು ನಿಲ್ಲೋದು ಇಲ್ಲ. ನಿನ್ನೆ ಸಾಯಂಕಾಲ ಚಿನ್ನಸ್ವಾಮಿ ಸ್ಟೇಡಿಯಂಗೆ ಹತ್ತಿರದ ಅನಿಲ್ ಕುಂಬ್ಳೆ ವೃತ್ತದಲ್ಲಿ ಭಾರಿ ಗಾತ್ರದ ಮರವೊಂದು ಬುಡಸಮೇತ ಉರುಳಿಬಿದ್ದಿದೆ. ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ ಮರದ ಒಂದು ಭಾಗ ಕಾರೊಂದರ ಮೇಲೆ ಬಿದ್ದಿದ್ದರಿಂದ ವಾಹನ ನಜ್ಜುಗುಜ್ಜಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡು ಅಸ್ಪತ್ರೆ ಸೇರಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಡಾ.ಜಿ ಪರಮೇಶ್ವರ ಬರ್ತ್​ಡೇ ಆಚರಣೆ ವೇಳೆ ಉರುಳಿದ ತೆಂಗಿನಮರ; ತಪ್ಪಿದ ಅನಾಹುತ