ಬಾಡಿ ಬಿಲ್ಡ್ ಮಾಡಿ ಯುವತಿಯರ ಮುಂದೆ ಪ್ರದರ್ಶಿಸುತ್ತಿದ್ದ ಯುವಕನಿಗೆ ಪೊಲೀಸರು ವರ್ಕೌಟ್ ಮಾಡಿಸಿದರು!
ಯುವಕರಲ್ಲಿ ಇದೊಂದು ಟ್ರೆಂಡ್ ಆಗಿಬಿಟ್ಟಿದೆ. ಜಿಮ್ ಗಳಲ್ಲಿ ದೇಹವನ್ನು ಮಾಡಿಕೊಂಡು ಪೂರ್ತಿ ಅಂಗಿ ಬಿಚ್ಚಿ ಅಲ್ಲದಿದ್ರೂ ಮೇಲಿನ ಎರಡು ಗುಂಡಿ ಬಿಚ್ಚಿ ತಮ್ಮ ಎದೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು! ದೇಹವನ್ನು ಸಾಮು ಮಾಡಿಕೊಂಡರೆ ಯುವತಿಯರು ಇಂಪ್ರೆಸ್ ಆಗುತ್ತಾರೆಂಬ ತಪ್ಪು ಮತ್ತು ಮೂರ್ಖ ಕಲ್ಪನೆ ಅವರ ಮನಸ್ಸಿನಲ್ಲಿ ಸೇರಿಕೊಂಡಿದೆ!
ಬೆಳಗಾವಿ: ಜಿಮ್ ಹೋಗೋದು, ವ್ಯಾಯಾಮ, ಕಸರತ್ತು ಮಾಡಿ ದೇಹವನ್ನು ಸಾಮು ಮಾಡಿಕೊಳ್ಳುವುದು ತಪ್ಪಲ್ಲ. ಅದರೆ ನಾನು ದೇಹವನ್ನು ಸಾಮು ಮಾಡಿಕೊಂಡಿದ್ದೇನೆ, ನನ್ನ ದೇಹ ನೋಡಿ ಅಂತ ಎದೆ ಮೇಲಿನ ಕೂದಲು ಬೋಳಿಸಿಕೊಂಡು ಶರ್ಟ್ ಬಿಚ್ಚಿ ಕಾಲೇಜು ಯವತಿಯರ ಮುಂದೆ ನಿಂತುಕೊಳ್ಳೋದು ಖಂಡಿತ ತಪ್ಪು. ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ಗ್ರಾಮದ ಬಾಳೇಶ್ ಹೆಸರಿನ ಯುವಕನಿಗೆ ಇಂಥ ತಪ್ಪು ಅರ್ಥಮಾಡಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಇವನು ನನ್ನ ದೇಹ ಸಲ್ಮಾನ್ ಖಾನ್ ನಂತಿದೆ ಅಂತ ಹುಡುಗಿಯರಿಗೆ ತೋರಿಸಲು ಅಥಣಿ ಬಸ್ ನಿಲ್ದಾಣದಲ್ಲಿ ಶರ್ಟ್ ಬಿಚ್ಚಿ ಬರಿ ಮೈಯಲ್ಲಿ ಓಡಾಡುತ್ತಿದ್ದನಂತೆ. ಸಜ್ಜನೊಬ್ಬರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ನಮಗೂ ನಿನ್ನ ಬಾಡಿ ತೋರಿಸು ಬಾ ಅಂತ ಸ್ಟೇಷನ್ ಗೆ ಕರೆದೊಯ್ದು ಶರ್ಟ್ ಜೊತೆ ಪ್ಯಾಂಟ್ ಕೂಡ ಬಿಚ್ಚಿಸಿ ಸತ್ಕಾರ ಮಾಡಿದ್ದಾರೆ ಮತ್ತು ತಾನು ಮಾಡಿದ್ದು ತಪ್ಪು ಅಂತ ಅವನಿಂದಲೇ ಹೇಳಿಸಿ ಆ ವಿಡಿಯೋವನ್ನು ಅಪ್ಲೋಡ್ ಮಾಡಿಸಿದ್ದಾರೆ. ಆಗಲೇ ಬಾಳೇಶ್ ಗೆ ಅ ತನ್ನ ಬಾಡಿ ಪ್ರದರ್ಶನದ ವಸ್ತು ಅಲ್ಲ ಅನ್ನೋದು ಭಾಳ ಚೆನ್ನಾಗಿ ಗೊತ್ತಾಗಿದೆ. ಅವನು ಕ್ಷಮೆ ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಥಣಿ ಶಾಸಕ ಲಕ್ಷ್ಮಣ ಸವದಿಯಿಂದ ಮೋಸವಾಯಿತು ಅಂತ ಸತೀಶ್ ಜಾರಕಿಹೊಳಿ ಹೇಳೋದ್ಯಾಕೆ?