ಜಪಾನ್ ತಂತ್ರಜ್ಞಾನಕ್ಕೂ ಸಾಧ್ಯವಾಗ್ತಿಲ್ಲ ಬೆಂಗಳೂರು ಟ್ರಾಫಿಕ್ ನಿಯಂತ್ರಣ! ಕಾರಣ ಇಲ್ಲಿದೆ

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಹಳ ಮಹತ್ವಾಕಾಂಕ್ಷೆಯೊಂದಿಗೆ ಅತ್ಯಾಧುನಿಕ ಜಪಾನ್ ತಂತ್ರಜ್ಞಾನ ಆಧಾರಿತ ಸಿಗ್ನಲ್​ಗಳನ್ನು ಅಳವಡಿಸಲು ಮುಂದಾಗಲಾಗಿತ್ತು. ಆದರೆ, ಅದೀಗ ಪ್ರಾಯೋಗಿಕ ಹಂತದಲ್ಲಿಯೇ ವಿಫಲವಾಗುತ್ತಿದೆ. ಇದಕ್ಕೆ ಕಾರಣವೇನು? ತಂತ್ರಜ್ಞಾನದಲ್ಲಿ ಬದಲಾವಣೆ ಮಾಡಿಕೊಂಡು ಅಳವಡಿಸಲು ಅವಕಾಶ ಇದೆಯಾ? ಇಲ್ಲಿದೆ ಮಾಹಿತಿ.

ಜಪಾನ್ ತಂತ್ರಜ್ಞಾನಕ್ಕೂ ಸಾಧ್ಯವಾಗ್ತಿಲ್ಲ ಬೆಂಗಳೂರು ಟ್ರಾಫಿಕ್ ನಿಯಂತ್ರಣ! ಕಾರಣ ಇಲ್ಲಿದೆ
ಜಪಾನ್ ತಂತ್ರಜ್ಞಾನಕ್ಕೂ ಸಾಧ್ಯವಾಗ್ತಿಲ್ಲ ಬೆಂಗಳೂರು ಟ್ರಾಫಿಕ್ ನಿಯಂತ್ರಣ (ಸಾಂದರ್ಭಿಕ ಚಿತ್ರ)
Follow us
|

Updated on:Jul 03, 2024 | 9:52 AM

ಬೆಂಗಳೂರು, ಜುಲೈ 3: ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಜಪಾನ್​ ತಂತ್ರಜ್ಞಾನ ಅಳವಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಪ್ರಾಯೋಗಿಕವಾಗಿ ಬೆಂಗಳೂರಿನ ಕೆಲವು ಸಿಗ್ನಲ್​ಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಜಪಾನ್ ತಂತ್ರಜ್ಞಾನ ಮೋಡರೇಟೊವನ್ನು (MODERATO) ಅಳವಡಿಸಲಾಗಿತ್ತು. ಈ ಪೈಕಿ ಏಳು ಸಿಗ್ನಲ್​ಗಳಲ್ಲಿ ಪ್ರಯೋಗ ವಿಫಲವಾಗಿದೆ. ಪ್ರಾಯೋಗಿಕ ಅಳವಡಿಕೆ ಯಶಸ್ವಿಯಾಗದ ಕಾರಣ ಮೋಡರೇಟೊವನ್ನು ನಗರದಾದ್ಯಂತ ವಿಸ್ತರಿಸುವುದು ಅನುಮಾನವಾಗಿದೆ.

ನಗರದ ಏಳು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಜಪಾನ್ ತಂತ್ರಜ್ಞಾನ ಚಾಲಿತ ಸ್ಮಾರ್ಟ್ ಸಿಗ್ನಲ್‌ಗಳ ಪ್ರಯೋಗಗಳು ವಿಫಲವಾಗಿವೆ. ದೋಷಗಳು ಇರುವುದರಿಂದ ತಂತ್ರಜ್ಞಾನದ ಪೂರ್ಣ ಅನುಷ್ಠಾನ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮ್ಯಾನೇಜ್‌ಮೆಂಟ್ ಆಫ್ ಒರಿಜಿನ್-ಡೆಸ್ಟಿನೇಶನ್ ರಿಲೇಟೆಡ್ ಅಡಾಪ್ಟೇಶನ್ ಫಾರ್ ಟ್ರಾಫಿಕ್ ಆಪ್ಟಿಮೈಸೇಶನ್’ (MODERATO) ಸಿಗ್ನಲ್‌ಗಳನ್ನು ಜಪಾನ್​ನ ಇಂಟರ್‌ನ್ಯಾಶನಲ್ ಕೋಆಪರೇಷನ್ ಏಜೆನ್ಸಿ (JICA) ಧನಸಹಾಯದೊಂದಿಗೆ ಬೆಂಗಳೂರಿನ ಒಟ್ಟು 28 ಜಂಕ್ಷನ್‌ಗಳಲ್ಲಿ ಅಳವಡಿಸುವುದಾಗಿ ಈ ಹಿಂದೆ ತಿಳಿಸಲಾಗಿತ್ತು.

ಬೆಂಗಳೂರಿನ ಯಾವೆಲ್ಲ ಜಂಕ್ಷನ್​​ಗಳಲ್ಲಿ ನಡೆದಿತ್ತು ಪ್ರಯೋಗ?

ಮೊದಲ ಹಂತದಲ್ಲಿ ಶೋಲೆ ಸರ್ಕಲ್, ಕೆನ್ಸಿಂಗ್ಟನ್ ರಸ್ತೆ ಜಂಕ್ಷನ್ ಮತ್ತು ಇಂದಿರಾನಗರದ 80 ಫೀಟ್ ರಸ್ತೆ ಜಂಕ್ಷನ್ ಸೇರಿದಂತೆ 10 ಜಂಕ್ಷನ್‌ಗಳನ್ನು ಪ್ರಾಯೋಗಿಕ ಅಳವಡಿಕೆಗೆ ತೆಗೆದುಕೊಳ್ಳಲಾಗಿತ್ತು. ಆದಾಗ್ಯೂ, ಮೇಲೆ ತಿಳಿಸಿದ ಜಂಕ್ಷನ್‌ಗಳನ್ನು ಒಳಗೊಂಡಂತೆ ಏಳು ಜಂಕ್ಷನ್‌ಗಳಲ್ಲಿ ಪ್ರಯೋಗಗಳು ವಿಫಲವಾಗಿವೆ ಎಂದು ಟ್ರಾಫಿಕ್ ಪೋಲೀಸ್‌ ಮೂಲಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮೊದಲ ಹಂತದ ಪ್ರಯೋಗಗಳ ವೇಳೆ ಮೂರು ಜಂಕ್ಷನ್‌ಗಳಲ್ಲಿ ಮಾತ್ರ ಜಪಾನ್ ತಂತ್ರಜ್ಞಾನದೊಂದಿಗೆ ಅಳವಡಿಸಿದ ಸಿಗ್ನಲ್ ವ್ಯವಸ್ಥೆ ಯಶಸ್ವಿಯಾಗಿತ್ತು. ಇಂದಿರಾನಗರದ 100 ಫೀಟ್ ರಸ್ತೆ ಜಂಕ್ಷನ್, ರಿಚ್ಮಂಡ್ ರಸ್ತೆಯಲ್ಲಿ ಮದರ್ ತೆರೇಸಾ ಜಂಕ್ಷನ್ ಮತ್ತು ರೆಸಿಡೆನ್ಸಿ ರಸ್ತೆಯಲ್ಲಿ ಒಪೇರಾ ಹೌಸ್ ಜಂಕ್ಷನ್​ಗಳಲ್ಲಿ ಯಶಸ್ವಿಯಾಗಿತ್ತು ಎಂದು ವರದಿ ಉಲ್ಲೇಖಿಸಿದೆ.

ತಂತ್ರಜ್ಞಾನ ಅಳವಡಿಕೆಯ ಸಮಸ್ಯೆಗಳೇನು?

ನಗರದ ಸಂಚಾರ ದಟ್ಟಣೆಗೆ ಅನುಗುಣವಾಗಿ ಸಿಗ್ನಲ್‌ಗಳನ್ನು ಅಪ್​ಡೇಟ್ ಮಾಡದ ಕಾರಣ ಇದು ಪ್ರಾಯೋಗಿಕ ಅಳವಡಿಕೆ ವೇಳೆ ದೋಷಗಳನ್ನು ಉಂಟುಮಾಡುತ್ತಿದೆ. ಆಂಬ್ಯುಲೆನ್ಸ್‌ಗೆ ಚಲಿಸಲು ಪ್ರತ್ಯೇಕ ಕಾರಿಡಾರ್ ಇಲ್ಲವಾದ ಕಾರಣ, ತುರ್ತು ಸಂದರ್ಭಗಳಲ್ಲಿ ಮ್ಯಾನುವಲ್ ಆಗಿ ಸಿಸ್ಟಮ್‌ಗಳನ್ನು ಬದಲಾಯಿಸಲು ಜಪಾನ್ ತಂತ್ರಜ್ಞಾನದಲ್ಲಿ ಪ್ರಸ್ತುತ ಅವಕಾಶ ಇಲ್ಲದಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ.

ಸದ್ಯ 25 ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಜಪಾನ್ ತಂತ್ರಜ್ಞಾನದ ಸಿಗ್ನಲ್ ಅಲವಡಿಕೆಗೆ ವ್ಯವಸ್ಥೆಗಳನ್ನು ಉತ್ತಮಗೊಳಿಸಲಾಗುತ್ತಿದೆ. ಉಳಿದ ಮೂರು ಜಂಕ್ಷನ್‌ಗಳಲ್ಲಿ ಪ್ರಾಯೋಗಿಕ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಜುಲೈ ಅಂತ್ಯದವರೆಗೆ ಪ್ರಯೋಗಗಳು ನಡೆಯಲಿವೆ. ತುರ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಮ್ಯಾನುವಲ್ ಕಂಟ್ರೋಲ್​ಗೆ ಅವಕಾಶ ನೀಡುವಂತೆ ಮಾಡಲು ಯತ್ನಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಜಪಾನ್​ ತಂತ್ರಜ್ಞಾನ ಅಳವಡಿಕೆ: ಏನಿದರ ವಿಶೇಷ, ಇಲ್ಲಿದೆ ವಿವರ

ಕೆನ್ಸಿಂಗ್ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್​ಗಳಲ್ಲಿ ಫೆಬ್ರವರಿಯಲ್ಲಿ ಜಪಾನ್ ತಂತ್ರಜ್ಞಾನ ಅಳವಡಿಕೆ ಮಾಡಲಾಗಿತ್ತು. ಫೆಬ್ರವರಿ ಅಂತ್ಯದಲ್ಲಿ ಅಧಿಕೃತ ಪರೀಕ್ಷಾ ಹಂತದ ಕಾರ್ಯಾಚರಣೆ ಆರಂಭವಾಗಿತ್ತು. ಈ ಬಗ್ಗೆ ಯೋಜನೆಯ ಮೇಲ್ವಿಚಾರಣೆ ವಹಿಸಿರುವ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ದೀಪಾ ಚೋಳನ್ ಮಾಹಿತಿ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:51 am, Wed, 3 July 24

ತಾಜಾ ಸುದ್ದಿ
‘ದರ್ಶನ್ ಆರೋಪಿ , ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ‘
‘ದರ್ಶನ್ ಆರೋಪಿ , ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ‘
ಪ್ರೈಮ್ ಡೇ ವಿಶೇಷ ಆಫರ್ ಸೇಲ್ ದಿನಾಂಕ ಪ್ರಕಟಿಸಿದ ಅಮೆಜಾನ್
ಪ್ರೈಮ್ ಡೇ ವಿಶೇಷ ಆಫರ್ ಸೇಲ್ ದಿನಾಂಕ ಪ್ರಕಟಿಸಿದ ಅಮೆಜಾನ್
ಆಷಾಢ ಮಾಸದಲ್ಲಿ ಮೆಹಂದಿ ಹಚ್ಚಿಕೊಳ್ಳುವುದರ ಮಹತ್ವ ತಿಳಿದುಕೊಳ್ಳಿ
ಆಷಾಢ ಮಾಸದಲ್ಲಿ ಮೆಹಂದಿ ಹಚ್ಚಿಕೊಳ್ಳುವುದರ ಮಹತ್ವ ತಿಳಿದುಕೊಳ್ಳಿ
ಆಷಾಢ ಅಮಾವಾಸ್ಯೆ ದಿನ ಲಕ್ಷ್ಮಿ ದರ್ಶನ, ಗೋವು ಸ್ಪರ್ಶದಿಂದ ಒಳಿತಾಗಲಿದೆ
ಆಷಾಢ ಅಮಾವಾಸ್ಯೆ ದಿನ ಲಕ್ಷ್ಮಿ ದರ್ಶನ, ಗೋವು ಸ್ಪರ್ಶದಿಂದ ಒಳಿತಾಗಲಿದೆ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ