ಬೆಂಗಳೂರು ರಸ್ತೆಗುಂಡಿಗಳಿಗೆ ಕೊನೆಗೂ ಮುಕ್ತಿ? 150 ಕಿಮೀ ವೈಟ್ ಟಾಪಿಂಗ್ ಆರಂಭಿಸಲು ಬಿಬಿಎಂಪಿ ಸಜ್ಜು

ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗುಂಡಿಗಳಿಂದ ಸುಸ್ತಾಗಿದ್ದ ಜನರಿಗೆ ಇದೀಗ ಈ ಸಮಸ್ಯೆಯಿಂದ ಮುಕ್ತಿ ಸಿಗುವ ಸೂಚನೆ ಸಿಗುತ್ತಿದೆ. ಬೆಂಗಳೂರಿನ 43 ರಸ್ತೆಗಳಿಗೆ 15 ಪ್ಯಾಕೇಜ್​​​ನಲ್ಲಿ ವೈಟ್ ಟಾಪಿಂಗ್ ಮಾಡಲು ಪಾಲಿಕೆ ಸಜ್ಜಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲು ತಯಾರಿ ನಡೆಸಿದೆ. ಯಾವೆಲ್ಲ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲಾಗುತ್ತದೆ ಎಂಬ ವಿವರ ಇಲ್ಲಿದೆ.

ಬೆಂಗಳೂರು ರಸ್ತೆಗುಂಡಿಗಳಿಗೆ ಕೊನೆಗೂ ಮುಕ್ತಿ? 150 ಕಿಮೀ ವೈಟ್ ಟಾಪಿಂಗ್ ಆರಂಭಿಸಲು ಬಿಬಿಎಂಪಿ ಸಜ್ಜು
150 ಕಿಮೀ ವೈಟ್ ಟಾಪಿಂಗ್ ಆರಂಭಿಸಲು ಬಿಬಿಎಂಪಿ ಸಜ್ಜು
Follow us
| Updated By: ಗಣಪತಿ ಶರ್ಮ

Updated on: Jul 03, 2024 | 8:08 AM

ಬೆಂಗಳೂರು, ಜುಲೈ 3: ಬೆಂಗಳೂರಿನ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಸಜ್ಜಾಗಿರುವ ಬಿಬಿಎಂಪಿ, ಶೀಘ್ರದಲ್ಲೇ ಕಾಮಗಾರಿ ಶುರು ಮಾಡಲು ತಯಾರಿ ನಡೆಸಿದೆ. ನಗರದ 43 ರಸ್ತೆಗಳಿಗೆ 1,700 ಕೋಟಿ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ನಡೆಸೋಕೆ ತಯಾರಿ ನಡೆದಿದ್ದು, ಈ ಬಗ್ಗೆ ಬಿಬಿಎಂಪಿ ಸಭೆ ನಡೆಸಿದೆ. ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಪೈಪ್ ಲೈನ್, ಕೇಬಲ್ ಅಳವಡಿಕೆ ಇದ್ದರೆ ಕಾಮಗಾರಿಗೂ ಮೊದಲೇ ಮುಗಿಸುವಂತೆ ಬಿಡಿಎ, ಜಲಮಂಡಳಿ ಹಾಗೂ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.

ಬಜೆಟ್​​​ನಲ್ಲಿ ಘೋಷಣೆಯಾದ ಬಳಿಕ ಟೆಂಡರ್ ಆಹ್ವಾನ ಮಾಡಿದ್ದರೂ ಕೂಡ ಗುತ್ತಿಗೆದಾರರ ಅಲಭ್ಯತೆಯಿಂದ ಕಾಮಗಾರಿ ನಡೆಸಲು ಪಾಲಿಕೆ ವಿಳಂಬ ಮಾಡಿತ್ತು. ಇದೀಗ ವೈಟ್ ಟಾಪಿಂಗ್ ಕಾಮಗಾರಿಯನ್ನು ಬಿಬಿಎಂಪಿ ವಿಂಗಡಿಸಿ ಐದು ಗುತ್ತಿಗೆ ಕಂಪೆನಿಗಳಿಗೆ ಹಂಚಿ, ಕಾಮಗಾರಿ ನಡೆಸಲು ಮುಂದಾಗಿದೆ. ಈ ಪೈಕಿ 800 ಕೋಟಿ ರೂಪಾಯಿ ಕಾಮಗಾರಿಯನ್ನ ಬಿಬಿಎಂಪಿಯ ಯೋಜನಾ ವಿಭಾಗದ ಉಸ್ತುವಾರಿಯಲ್ಲಿ ನಡೆದರೆ, ಉಳಿದಂತೆ 900 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದಿಂದ ನಡೆಸಲಿದೆ.

ಸದ್ಯ ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿ ಕಂಟಕಕ್ಕೂ ವೈಟ್ ಟಾಪಿಂಗ್​ನಿಂದ ಮುಕ್ತಿ ಸಿಗುವ ನಿರೀಕ್ಷೆಯಲ್ಲಿ ಸಿಟಿಜನ ಕಾದು ಕುಳಿತಿದ್ದಾರೆ.

ಎಲ್ಲೆಲ್ಲಿ ವೈಟ್ ಟಾಪಿಂಗ್?

  • ಟ್ಯಾನರಿ ರಸ್ತೆ, ದೊಡ್ಡಿ ಸರ್ಕಲ್ ಕಡೆಗೆ
  • ಲೋವರ್ ಅಗರಂ ರಸ್ತೆ, ಈಜೀಪುರ ಕಡೆಗೆ
  • ಎಸ್​​ಪಿ ರಸ್ತೆಯಿಂದ ಹಡ್ಸನ್ ಸರ್ಕಲ್ ವರೆಗೆ
  • ಸಿಬಿಐ ರಸ್ತೆ, ಆರ್​ಟಿ ನಗರ ಕಡೆಗೆ
  • ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ ಕಡೆಗೆ
  • ಮೌರ್ಯ ಜಂಕ್ಷನ್ ನಿಂದ ಹರೆ ಕೃಷ್ಣ ಜಂಕ್ಷನ್ ವರೆಗೆ

ಇದನ್ನೂ ಓದಿ: ಡೆಂಗ್ಯೂ ಹೆಚ್ಚಳ ಪರಿಣಾಮ; ಬೆಂಗಳೂರಿನಲ್ಲಿ ಪ್ಲೇಟ್​​ಲೆಟ್​​ಗೆ ಹೆಚ್ಚಿದ ಬೇಡಿಕೆ

ಒಟ್ಟಿನಲ್ಲಿ ಗುಂಡಿ ಗಂಡಾಂತರಕ್ಕೆ ಪರಿಹಾರ ಕಂಡುಹಿಡಿಯಲು ಸುಸ್ತಾಗಿದ್ದ ಪಾಲಿಕೆ, ಇದೀಗ ರಾಜಧಾನಿಯ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಕೊನೆಗೂ ಸಿದ್ಧವಾಗಿದೆ. ಶುಕ್ರವಾರದಿಂದ ಕಾಮಗಾರಿಗಳಿಗೆ ಚಾಲನೆ ನೀಡಲು ಪಾಲಿಕೆ ಸಿದ್ಧತೆ ನಡೆಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
‘ದರ್ಶನ್ ಆರೋಪಿ , ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ‘
‘ದರ್ಶನ್ ಆರೋಪಿ , ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ‘
ಪ್ರೈಮ್ ಡೇ ವಿಶೇಷ ಆಫರ್ ಸೇಲ್ ದಿನಾಂಕ ಪ್ರಕಟಿಸಿದ ಅಮೆಜಾನ್
ಪ್ರೈಮ್ ಡೇ ವಿಶೇಷ ಆಫರ್ ಸೇಲ್ ದಿನಾಂಕ ಪ್ರಕಟಿಸಿದ ಅಮೆಜಾನ್
ಆಷಾಢ ಮಾಸದಲ್ಲಿ ಮೆಹಂದಿ ಹಚ್ಚಿಕೊಳ್ಳುವುದರ ಮಹತ್ವ ತಿಳಿದುಕೊಳ್ಳಿ
ಆಷಾಢ ಮಾಸದಲ್ಲಿ ಮೆಹಂದಿ ಹಚ್ಚಿಕೊಳ್ಳುವುದರ ಮಹತ್ವ ತಿಳಿದುಕೊಳ್ಳಿ
ಆಷಾಢ ಅಮಾವಾಸ್ಯೆ ದಿನ ಲಕ್ಷ್ಮಿ ದರ್ಶನ, ಗೋವು ಸ್ಪರ್ಶದಿಂದ ಒಳಿತಾಗಲಿದೆ
ಆಷಾಢ ಅಮಾವಾಸ್ಯೆ ದಿನ ಲಕ್ಷ್ಮಿ ದರ್ಶನ, ಗೋವು ಸ್ಪರ್ಶದಿಂದ ಒಳಿತಾಗಲಿದೆ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ