ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ದಾವಣಗೆರೆ ಯುವಕ; ನಗರಕ್ಕೆ ಸ್ಯಾನಿಟೈಜರ್ ಸಿಂಪಡಣೆ

ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ದಾವಣಗೆರೆ ಯುವಕ; ನಗರಕ್ಕೆ ಸ್ಯಾನಿಟೈಜರ್ ಸಿಂಪಡಣೆ
ನಗರಕ್ಕೆ ಸ್ಯಾನಿಟೈಜರ್ ಸಿಂಪಡಣೆ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ

ನಾನು ಮತ್ತು ನನ್ನ ಸ್ನೇಹಿತರು ಸೇರಿ ಈ ನಿರ್ಣಯ ಕೈಗೊಂಡಿದ್ದು, ಅರಸ್ ಹಾಗೂ ಜಾಲಿ ನಗರಕ್ಕೆ ಸ್ಯಾನಿಟೈಜ್​ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದೇನೆ ಎಂದು ಶ್ರೀಕಾಂತ ನೀಲಗುಂದ ತಿಳಿಸಿದ್ದಾರೆ.

TV9kannada Web Team

| Edited By: preethi shettigar

Jun 04, 2021 | 1:42 PM

ದಾವಣಗೆರೆ: ಸಾಮಾನ್ಯವಾಗಿ ಹುಟ್ಟುಹಬ್ಬವನ್ನು ದುಂದು ವೆಚ್ಚ ಮಾಡಿ, ಅತ್ಯಂತ ವಿಜೃಂಭಣೆಯಿಂದ ಕೆಕ್​ ಕತ್ತರಿಸಿ ಆಚರಣೆ ಮಾಡುತ್ತಾರೆ. ಆದರೆ ದಾವಣಗೆರೆಯ ಯುವಕನೊಬ್ಬ ತನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾನೆ. ಅನಗತ್ಯವಾಗಿ ಹಣ ವ್ಯಯಿಸುವ ಬದಲು ಊರಿಗೆ ನೆರವಾಗುವ ಯೋಜನೆಗೆ ಮುಂದಾಗಿದ್ದು, ಸೋಂಕು ಹೆಚ್ಚಾಗಿರುವ ನಗರಗಳಿಗೆ ಸ್ಯಾನಿಟೈಜರ್ ಮಾಡುವ ಮೂಲಕ ಜನ್ಮ ದಿನವನ್ನು ಆಚರಣೆ ಮಾಡಿಕೊಂಡಿದ್ದಾ‌ನೆ.

ದಾವಣಗೆರೆ ನಗರದ ದೇವರಾಜ್‌ ಅರಸ್ ಬಡಾವಣೆಯ ಶ್ರೀಕಾಂತ್ ನೀಲಗುಂದ ಎನ್ನುವ ಯುವಕ ತನ್ನ ಹುಟ್ಟುಹಬ್ಬದ ಪ್ರಯುಕ್ತ ಜನರಿಗೆ ಅದರಲ್ಲೂ ಈ ಕೊರೊನಾ ಸಂಕಷ್ಟ ಕಾಲದಲ್ಲಿ ಏನಾದರು ಒಂದು ಉಪಯೋಗವಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ನಿರ್ಧರಿಸಿ, ಟೆಂಪೋ ಒಂದರಲ್ಲಿ ಟ್ಯಾಂಕ್ ಇರಿಸಿ ದೇವರಾಜ್ ಅರಸ್ ಬಡಾವಣೆ, ಜಾಲಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ ಮಾಡಲು ಮುಂದಾಗಿದ್ದಾನೆ.

ಎರಡು ದಿನಗಳ ಕಾಲ ನಿರಂತರವಾಗಿ ಎರಡು ನಗರಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ ಮಾಡುತ್ತೇವೆ, ಹುಟ್ಟು ಹಬ್ಬದಂದು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಈ ರೀತಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾನು ಮತ್ತು ನನ್ನ ಸ್ನೇಹಿತರು ಸೇರಿ ಈ ನಿರ್ಣಯ ಕೈಗೊಂಡಿದ್ದು, ಅರಸ್ ಹಾಗೂ ಜಾಲಿ ನಗರಕ್ಕೆ ಸ್ಯಾನಿಟೈಜ್​ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದೇನೆ ಎಂದು ಶ್ರೀಕಾಂತ ನೀಲಗುಂದ ತಿಳಿಸಿದ್ದಾರೆ.

ಪ್ರತಿ ವರ್ಷ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತೇನೆ. ಕಳೆದ ವರ್ಷ ಸಂಕಷ್ಟದಲ್ಲಿದ್ದ ಜನರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದು, ಕುಟುಂಬಗಳಿಗೆ ಆಹಾರ ಕಿಟ್ ಕೊಟ್ಟಿದೆ. ಈ ಸಲ ನಮ್ಮ ಪ್ರದೇಶವನ್ನೇ ಸ್ಯಾನಿಟೈಜ್ ಮಾಡುವುದು ಮತ್ತು ಸ್ವಚ್ಛಗೊಳಿಸುವ ಕಾರ್ಯನಿರ್ವಹಿಸಿದ್ದು, ಕೊರೊನಾ ಸೋಂಕು ಹರಡುವಿಕೆಗೆ ತಡೆವೊಡ್ಡಲು ಪ್ರಯತ್ನಿಸಿದ್ದೇವೆ ಎಂದು ಶ್ರೀಕಾಂತ ನೀಲಗುಂದ ಹೇಳಿದ್ದಾರೆ.

ಇದನ್ನೂ ಓದಿ:

ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಾಗರದ ಯುವಕ; ಜನುಮದಿನಕ್ಕೂ ಮೊದಲು ಸ್ವಚ್ಛತಾ ಕಾರ್ಯ

ಲಾಕ್​ಡೌನ್ ಸಂಕಷ್ಟ; ಕೊ​ಪ್ಪಳದ 100 ಕುಟುಂಬಗಳ ನೆರವಿಗೆ ನಿಂತ ಇಂಗ್ಲೆಂಡ್ ದೇಶದ ಸಹೋದರರು

Follow us on

Related Stories

Most Read Stories

Click on your DTH Provider to Add TV9 Kannada