ಹುಡುಗಿಗೆ‌ ಕೈ ಕೊಟ್ಟವನ ಮನೆ ಅಡ್ರೆಸ್​ ತೋರಿಸಿದ್ದಕ್ಕೆ ಬೆಳೀತು ದುಶ್ಮನಿ.. ಸಕ್ಕರೆ ನಾಡಲ್ಲಿ ಬಿತ್ತು ಯುವಕನ ಹೆಣ!

|

Updated on: Jan 25, 2021 | 5:24 PM

ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಅಪಹರಿಸಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ MES ಬಡಾವಣೆಯಲ್ಲಿ ನಡೆದಿದೆ. 23 ವರ್ಷದ ಶರತ್ ಎಂಬ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಹುಡುಗಿಗೆ‌ ಕೈ ಕೊಟ್ಟವನ ಮನೆ ಅಡ್ರೆಸ್​ ತೋರಿಸಿದ್ದಕ್ಕೆ ಬೆಳೀತು ದುಶ್ಮನಿ.. ಸಕ್ಕರೆ ನಾಡಲ್ಲಿ ಬಿತ್ತು ಯುವಕನ ಹೆಣ!
ಶರತ್
Follow us on

ಮಂಡ್ಯ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಅಪಹರಿಸಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ MES ಬಡಾವಣೆಯಲ್ಲಿ ನಡೆದಿದೆ. 23 ವರ್ಷದ ಶರತ್ ಎಂಬ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶರತ್‌ನನ್ನು ಆಟೋದಲ್ಲಿ ಅಪಹರಿಸಿದ ನಾಲ್ವರು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.

ಶರತ್​ ಮೇಲೆ ಅಷ್ಟೊಂದು ಹಗೆ ಯಾಕೆ?
ಅಂದ ಹಾಗೆ, ಯಾವುದೋ ಲವ್ ಧೋಖಾ ವಿಚಾರವಾಗಿ ಮೋಸ ಹೋಗಿದ್ದ ಹುಡುಗಿಯೊಬ್ಬಳು ಒಂದು ವಾರದ ಹಿಂದೆ ತನಗೆ ಕೈಕೊಟ್ಟ ಹುಡುಗನ ಫೋಟೋ ಹಿಡಿದು ಬಡಾವಣೆಗೆ ಬಂದಿದ್ದಳಂತೆ. ಕಾಣೆಯಾಗಿರುವ ಹುಡುಗನ ಮನೆ ತೋರಿಸಿ ಎಂದು ಕೇಳಿಕೊಂಡಿದ್ದಳಂತೆ.

ಈ ವೇಳೆ, ಶರತ್ ಕೈಕೊಟ್ಟಿದ್ದ ಹುಡುಗನ ಮನೆ ವಿಳಾಸ ತೋರಿಸಿದ್ದನಂತೆ. ಇದರಿಂದ ಸಿಟ್ಟಿಗೆದ್ದ ಲವರ್​ ಬಾಯ್​, ಶರತ್​ ಮೇಲೆ ದ್ವೇಷ ಬೆಳೆಸಿಕೊಂಡಿದ್ದನಂತೆ. ಹಾಗಾಗಿ, ಇಂದು ಆತ 4ಜನರೊಂದಿಗೆ ಸೇರಿ ಶರತ್ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಹುಣಸೋಡು ಸ್ಪೋಟ ಪ್ರಕರಣ; ವಾಹನಗಳ ದೃಶ್ಯ ಸೆರೆ