ಲಾರಿ ನುಗ್ಗಿ ಮನೆಯಲ್ಲಿದ್ದ ಬಾಲಕ ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಹಂಚಿನ ಮನೆಯೊಳಗೆ ಲಾರಿ ನುಗ್ಗಿ ಮನೆಯಲ್ಲಿದ್ದ ಬಾಲಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಗ್ರಾಮದಲ್ಲಿ ನಡೆದಿದೆ. ಸುರೇಶ್(10) ಮೃತ ಬಾಲಕ. ಚಿಕ್ಕಮಗಳೂರಿನಿಂದ ಕುಂದಾಪುರ ಮಾರ್ಗವಾಗಿ ತರಕಾರಿ ಹೊತ್ತು ತೆರಳುತ್ತಿದ್ದ ಲಾರಿ ಮನೆಯೊಳಗೆ ನುಗ್ಗಿದೆ. ಲಾರಿ ನುಗ್ಗಿದ ರಭಸಕ್ಕೆ ಮನೆಯ ಅರ್ಧಭಾಗ ಜಖಂ ಆಗಿದ್ದು, ಮನೆ ಬಳಿ ಆಟವಾಡುತ್ತಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಂಜುನಾಥ ಗೌಡ ಎಂಬುವರ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಕುಟುಂಬ ಈಗ ಬಾಲಕನನ್ನು ಕಳೆದುಕೊಂಡು ಕಣ್ಣೀರಿಡುತ್ತಿದೆ. ಬಾಳೆಹೊನ್ನೂರು ಪೊಲೀಸ್ […]

ಲಾರಿ ನುಗ್ಗಿ ಮನೆಯಲ್ಲಿದ್ದ ಬಾಲಕ ಸ್ಥಳದಲ್ಲೇ ಸಾವು
Edited By:

Updated on: Aug 13, 2020 | 3:58 PM

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಹಂಚಿನ ಮನೆಯೊಳಗೆ ಲಾರಿ ನುಗ್ಗಿ ಮನೆಯಲ್ಲಿದ್ದ ಬಾಲಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಗ್ರಾಮದಲ್ಲಿ ನಡೆದಿದೆ. ಸುರೇಶ್(10) ಮೃತ ಬಾಲಕ.

ಚಿಕ್ಕಮಗಳೂರಿನಿಂದ ಕುಂದಾಪುರ ಮಾರ್ಗವಾಗಿ ತರಕಾರಿ ಹೊತ್ತು ತೆರಳುತ್ತಿದ್ದ ಲಾರಿ ಮನೆಯೊಳಗೆ ನುಗ್ಗಿದೆ. ಲಾರಿ ನುಗ್ಗಿದ ರಭಸಕ್ಕೆ ಮನೆಯ ಅರ್ಧಭಾಗ ಜಖಂ ಆಗಿದ್ದು, ಮನೆ ಬಳಿ ಆಟವಾಡುತ್ತಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಂಜುನಾಥ ಗೌಡ ಎಂಬುವರ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಕುಟುಂಬ ಈಗ ಬಾಲಕನನ್ನು ಕಳೆದುಕೊಂಡು ಕಣ್ಣೀರಿಡುತ್ತಿದೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.