ಬೆಂಗಳೂರು ಸುತ್ತ 110 ಕಿ.ಮೀ. ರಿಂಗ್ ರೋಡ್ ಆಗಲಿದೆ: ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಘೋಷಣೆ
ಕಾರ್ನರ್ ಸೈಟ್ ಹೆಸರಲ್ಲೂ ಭಾರೀ ಗೋಲ್ಮಾಲ್ ಆಗಿದೆ. ಒಬ್ಬೊಬ್ಬ ಏಜೆಂಟ್ 200 ಕೋಟಿಗೂ ಹೆಚ್ಚು ಭ್ರಷ್ಟಚಾರ ಮಾಡಿದ್ದಾರೆ. ಇನ್ನು BDA ಲೀಗಲ್ ಸೆಲ್ನಲ್ಲೂ ಕೆಲವರು ಸಮರ್ಥವಾಗಿ ಬಿಡಿಎ ಪರವಾಗಿ ಕೇಸ್ ನಡೆಸ್ತಿಲ್ಲ. ಅಂಥವರನ್ನ ವಾಪಸ್ ಕಳುಹಿಸುತ್ತೇವೆ - BDA ಅಧ್ಯಕ್ಷ ಎಸ್. ಆರ್ ವಿಶ್ವನಾಥ್
ಬೆಂಗಳೂರು: ಇನ್ನು ಎರಡು ತಿಂಗಳವೊಳಗೆ PRR ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ. ಬೆಂಗಳೂರು ಸುತ್ತಲೂ ಸುಮಾರು 110 ಕಿಮೀ ರಿಂಗ್ ರೋಡ್ ಆಗಲಿದೆ ಎಂದು BDA ಅಧ್ಯಕ್ಷ ಎಸ್. ಆರ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ರಿಂಗ್ ರೋಡ್ ಪಕ್ಕದಲ್ಲಿ ವಾಣಿಜ್ಯ ಕಟ್ಟಡಗಳು ಬಂದರೇ ಆದಾಯ ಬರುತ್ತದೆ. ಅಲ್ಲದೆ ರೈತರಿಗೆ ಶೀಘ್ರವೇ ಪರಿಹಾರಸಸ ಸಿಗಲಿದೆ. ಬಿಡಿಎನಲ್ಲಿ ಅವ್ಯವಹಾರ ಆಗಿದೆ. ಅದರಲ್ಲೂ ಸಗಟು ಹಂಚಿಕೆಗಳಲ್ಲಿ ಆದ ಅಕ್ರಮವನ್ನ ತನಿಖೆ ನಡೆಸಲು ತೀರ್ಮಾನವಾಗಿದೆ. ಬಿನ್ನಿ ಮಿಲ್ ಸಗಟು ಹಂಚಿಕೆ ಹೆಸರಲ್ಲಿ ಭಾರೀ ಅಕ್ರಮವಾಗಿದೆ.
ಬಿಡಿಎ ಅಧಿಕಾರಿಗಳು 20 X 30 ನಿವೇಶನ ನೀಡಬೇಕು. ಆದ್ರೆ 25 ಗುಂಟೆ ಜಾಗ ಮಂಜೂರು ಮಾಡಿಕೊಡ್ತಾರೆ. ಜೊತೆಗೆ 40 X 60, 50 X 80 ಹೀಗೆ ಜಾಗ ಹಂಚಿಕೆ ಮಾಡಿದ್ದಾರೆ. ಹೀಗೆ ಸಾಕಷ್ಟು ಅವ್ಯವಹಾರಗಳನ್ನ ಮಾಡಿದ್ದಾರೆ. ಇವುಗಳನ್ನ ಎಸ್ಐಟಿಗೆ ಕೊಡಲು ಸಿಎಂ ಸಹ ಒಪ್ಪಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಭ್ರಷ್ಟಾಚಾರದ ಮಾಹಿತಿ ನೀಡಿದ್ದಾರೆ.
BDA ಕಾರ್ನರ್ ಸೈಟ್ ಹೆಸರಿನಲ್ಲೂ ಭಾರಿ ಗೋಲ್ಮಾಲ್.. ಜೊತೆಗೆ ಕಾರ್ನರ್ ಸೈಟ್ ಹೆಸರಲ್ಲೂ ಭಾರೀ ಗೋಲ್ಮಾಲ್ ಆಗಿದೆ. ಒಬ್ಬೊಬ್ಬ ಏಜೆಂಟ್ 200 ಕೋಟಿಗೂ ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ. ಈ ಹಿಂದೆ ವರಲಕ್ಷ್ಮಿ ಹಬ್ಬದಲ್ಲಿ ಇದು ಬಹಿರಂಗವಾಗಿದ್ದನ್ನ ನೋಡಿದ್ದೇವೆ. ಅಭಿಯಂತರರ ಸಿ.ಡಿ. ಹೆಸರಲ್ಲಿ ಭಾರೀ ಭ್ರಷ್ಟಾಚಾರ ನಡೆಸುತ್ತಿದ್ದಾರೆ.
BDA ಲೀಗಲ್ ಸೆಲ್ನಿಂದಲೂ ಅಕ್ರಮ ಅಲಾಟೀಸ್ಗೆ ಒಳ್ಳೇ ಸೈಟ್ ತೋರಿಸಲು ಕೂಡ ಹಣ ಪಡೆಯುತ್ತಿದ್ದಾರೆ. ಇನ್ನು BDA ಲೀಗಲ್ ಸೆಲ್ನಲ್ಲೂ ಕೆಲವರು ಸಮರ್ಥವಾಗಿ ಬಿಡಿಎ ಪರವಾಗಿ ಕೇಸ್ ನಡೆಸ್ತಿಲ್ಲ. ಅಂಥವರನ್ನ ವಾಪಸ್ ಕಳುಹಿಸುತ್ತೇವೆ. ಬೆಳ್ಳಳ್ಳಿ, ಕೋಗಿಲು ಹಾಗೂ ಮಿಟಗಾನಹಳ್ಳಿಯಲ್ಲಿ ಸುಮಾರು 380 ಎಕರೆ ಭೂ ಸ್ವಾಧೀನ ಮಾಡಲಾಗುತ್ತೆ ಅಂತಾ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಶಿವರಾಮ ಕಾರಂತ್ ಲೇಔಟ್ ವಿಚಾರವಾಗಿ ರೈತರ ಪರ ಈ ಹಿಂದೆ ನಾನು ಕೂಡ ಹೋರಾಟ ಮಾಡಿದ್ದೆ. ಆದ್ರೆ ಸುಪ್ರೀಂ ಕೋರ್ಟ್ ಆದೇಶಕ್ಕಿಂತ ನಾವು ದೊಡ್ಡವರಲ್ಲ. ಹಾಗಾಗಿ ಅಲ್ಲಿಯೇ ಲೇಔಟ್ ನಿರ್ಮಾಣ ಮಾಡಲೇಬೇಕು. ಹೀಗಾಗಿ ಅಲ್ಲಿ ಯಾರು ಕೂಡ ಮನೆಗಳನ್ನ ಕಟ್ಟಬಾರದು ಅಂತಾ ಜನರಲ್ಲಿ ಮನವಿ ಮಾಡಿದ್ದಾರೆ.
ಇಂದು ಸಿಎಂ ಬಿ ಎಸ್ ಯಡಿಯೂರಪ್ಪನವರ ಸಮ್ಮುಖದಲ್ಲಿ ನಡೆದ ಮೀಟಿಂಗ್ನಲ್ಲಿ ಮಹತ್ತರ ವಿಷಯಗಳ ಬಗ್ಗೆ ಚರ್ಚೆಗಳಾಗಿದ್ದು, ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳ ಬಗ್ಗೆ BDA ಅಧ್ಯಕ್ಷ ಎಸ್. ಆರ್ ವಿಶ್ವನಾಥ್ ಮಾತಾನಾಡಿದರು. ಬೆಂಗಳೂರು ಮಹಾನಗರ ವಿಶ್ವಮಾನ್ಯ ನಗರಗಳಲ್ಲಿ ಒಂದಾಗಿದೆ. ವಿಶ್ವದ 4 ತಾಂತ್ರಿಕ ನೆಲೆಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನ ಪಡೆದಿದೆ. ವಿಶ್ವ ಮಾನ್ಯ ಬೆಂಗಳೂರು ಮಹಾನಗರಕ್ಕೆ ಅಗತ್ಯ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಕುರಿತಂತೆ ಆಗಾಗ ಸಲಹೆ ಮಾರ್ಗದರ್ಶನ ನೀಡುತ್ತಲೇ ಬಂದಿದ್ದಾರೆ. ಅದರಂತೆ ಕಳೆದ ತಿಂಗಳು ಬೆಂಗಳೂರು ಮಿಷನ್ 2022 ಯೋಜನೆಯನ್ನು ಘೋಷಿಸಲಾಗಿದೆ.
ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಕೈಗೊಂಡಿದ್ದೇನೆ. ಬಡಾವಣೆ ನಿಮಾಣಕ್ಕೆ ರೈತರಿಂದ ಪಡೆದ ಜಮೀನಿಗೆ ಬದಲಾಗಿ ಶೇ. 40 ರಷ್ಟು ಅಭಿವೃದ್ಧಿ ಹೊಂದಿದ ಜಮೀನು ನೀಡುವಂತೆ ಸೂಚಿಸಲಾಗಿದೆ. ರೈತರು ಬಯಸುವ ಕಡೆಯಲ್ಲೇ ಈ ನಿವೇಶನಗಳನ್ನು ನೀಡಲಾಗುವುದು. ಬಿಡಿಎ ನಲ್ಲಿ ಸುಮಾರು 24 ಮಂದಿ ಎಂಜಿನಿಯರ್ಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯಭಾರವನ್ನು ಪರಿಶೀಲಿಸಿ, ಅಗತ್ಯವಿಲ್ಲದಿದ್ದರೆ ಅವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸಲಾಗುವುದು.
ಅದೇ ರೀತಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. 196 ಮಂದಿ ವಕೀಲರು ಇದ್ದಾರೆ. ಹೆಚ್ಚಿನ ಕಾರ್ಯಭಾರ ಇಲ್ಲದ ವಕೀಲರನ್ನು ಪ್ಯಾನೆಲ್ನಿಂದ ಕೈ ಬಿಡಲಲು ಸೂಚನೆ ನೀಡಲಾಗಿದೆ. ಪೆರಿಫೆರಲ್ ರಿಂಗ್ ರಸ್ತೆಯನ್ನು 21,091 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಅನುಮೋದನೆ ದೊರೆತಿದ್ದು, ಕಾಲಮಿತಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ನಿರ್ಮಿಸಲಾಗಿರುವ ನಿವೇಶನಗಳು, ವಸತಿ ಯೋಜನೆಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಹಾಗೇಯೇ ಏಜೆಂಟರ ಹಾವಳಿ ನಿಯಂತ್ರಿಸಲು ಸೂಚನೆ ನೀಡಿದ್ದೇನೆ ಎಂದರು.
ಅಕ್ರಮ ಆಸ್ತಿ ಗಳಿಕೆ ಆರೋಪ: BDA ಭ್ರಷ್ಟ ಅಧಿಕಾರಿ ತಲೆದಂಡ, ಕೆಎಎಸ್ ಅಧಿಕಾರಿ ಸುಧಾ SUSPEND
Published On - 2:16 pm, Mon, 18 January 21