ಬೆಂಗಳೂರಿನಲ್ಲಿ ಸಿಡಿದ ಕೊರೊನಾ ಜ್ವಾಲಾಮುಖಿ, ಕಿಲ್ಲರ್ ಹೊಡೆತಕ್ಕೆ 145 ಬಲಿ
ಬೆಂಗಳೂರು: ಸ್ಫೋಟ.. ಕೊರೊನಾ ಬಾಂಬ್ ಸ್ಫೋಟ.. ಬೆಂಗಳೂರಿನಲ್ಲಿ ಸೋಂಕಿನ ಜ್ವಾಲಾಮುಖಿ ಸ್ಫೋಟಗೊಳ್ತಿದೆ. ಸಂಡೇ ಲಾಕ್‌ಡೌನ್‌ಗೂ ಬಗ್ಗುತ್ತಿಲ್ಲ. ಸಿಟಿಯಲ್ಲಿರೋ ಸೀಲ್ಡೌನ್ಗೂ ಜಗ್ಗುತ್ತಿಲ್ಲ. ದಂಡು ದಾಳಿ ಕಟ್ಕೊಂಡು ಸಿಲಿಕಾನ್ ಸಿಟಿ ಮೇಲೆ ಕ್ರೂರಿ ದಾಳಿ ಮಾಡ್ತಿದೆ. ದಾಖಲೆಗಳನ್ನ ಉಡೀಸ್ ಮಾಡಿ ರಕ್ಕಸ ಮುನ್ನುಗ್ತಿರೋ ಏಟಿಗೆ ಬೆಂಗಳೂರು ಬೆದರಿ ಹೋಗಿದೆ. ರಾಜಧಾನಿಯಲ್ಲಿ ಎರಡು ದಿನದಲ್ಲಿ 40 ಮಂದಿಯನ್ನ ಕೊಂದು ಹಾಕಿದೆ. ಎರಡನೇ ದಿನದಲ್ಲಿ 40 ಜನರನ್ನ ಕೊಂದ ಹೆಮ್ಮಾರಿ! ಯೆಸ್.. ಚೀನಾ ನೆಲದ ರಕ್ಕಸ ವೈರಸ್ ಬೆಂಗಳೂರನ್ನ ಬಲಿಪೀಠ ಮಾಡ್ಕೊಂಡಿದೆ. ನಿನ್ನೆ […]
ಬೆಂಗಳೂರು: ಸ್ಫೋಟ.. ಕೊರೊನಾ ಬಾಂಬ್ ಸ್ಫೋಟ.. ಬೆಂಗಳೂರಿನಲ್ಲಿ ಸೋಂಕಿನ ಜ್ವಾಲಾಮುಖಿ ಸ್ಫೋಟಗೊಳ್ತಿದೆ. ಸಂಡೇ ಲಾಕ್‌ಡೌನ್‌ಗೂ ಬಗ್ಗುತ್ತಿಲ್ಲ. ಸಿಟಿಯಲ್ಲಿರೋ ಸೀಲ್ಡೌನ್ಗೂ ಜಗ್ಗುತ್ತಿಲ್ಲ. ದಂಡು ದಾಳಿ ಕಟ್ಕೊಂಡು ಸಿಲಿಕಾನ್ ಸಿಟಿ ಮೇಲೆ ಕ್ರೂರಿ ದಾಳಿ ಮಾಡ್ತಿದೆ. ದಾಖಲೆಗಳನ್ನ ಉಡೀಸ್ ಮಾಡಿ ರಕ್ಕಸ ಮುನ್ನುಗ್ತಿರೋ ಏಟಿಗೆ ಬೆಂಗಳೂರು ಬೆದರಿ ಹೋಗಿದೆ. ರಾಜಧಾನಿಯಲ್ಲಿ ಎರಡು ದಿನದಲ್ಲಿ 40 ಮಂದಿಯನ್ನ ಕೊಂದು ಹಾಕಿದೆ.
ಎರಡನೇ ದಿನದಲ್ಲಿ 40 ಜನರನ್ನ ಕೊಂದ ಹೆಮ್ಮಾರಿ! ಯೆಸ್.. ಚೀನಾ ನೆಲದ ರಕ್ಕಸ ವೈರಸ್ ಬೆಂಗಳೂರನ್ನ ಬಲಿಪೀಠ ಮಾಡ್ಕೊಂಡಿದೆ. ನಿನ್ನೆ ಕೂಡ ಐಟಿ ಸಿಟಿಯಲ್ಲಿ ಸೋಂಕಿನ ಸುಳಿಗಾಳಿ ಗಲ್ಲಿ ಗಲ್ಲಿಗೂ ನುಗ್ಗಿದೆ. ದಿನದಿನಕ್ಕೂ ತನ್ನ ಸಂಚಾರ ವಿಸ್ತರಿಸ್ತಿರೋ ಹೆಮ್ಮಾರಿ ವೈರಸ್ ನಿನ್ನೆ 1235 ಜನರ ದೇಹ ಹೊಕ್ಕಿದೆ. ಆ ಮೂಲಕ ಮಹಾನಗರದಲ್ಲೇ ಸೋಂಕಿತರ ಸಂಖ್ಯೆ 10 ಸಾವಿರದ ಹತ್ತಿರಕ್ಕೆ ಹೋಗಿದೆ. 16 ಜನರನ್ನ ಕೊಂದು ಹಾಕಿದೆ. ಮೊನ್ನೆ 24 ಜನರ ಉಸಿರು ನಿಲ್ಲಿಸಿದ್ದ ಕ್ರೂರಿ ಐಟಿ ಸಿಟಿಯಲ್ಲಿ ಎರಡೇ ದಿನದಲ್ಲಿ 40 ಮಂದಿಯ ಪ್ರಾಣವನ್ನೇ ತೆಗೆದಿದೆ.
ರಾಜಧಾನಿ ಇನ್ ರಿಸ್ಕ್..! ಇನ್ನು ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಸನಿಹದಲ್ಲಿದೆ. ಈವರೆಗೆ 9580 ಮಂದಿಗೆ ಹೆಮ್ಮಾರಿ ವೈರಸ್ ಅಟ್ಯಾಕ್ ಮಾಡಿದೆ. ಅದ್ರಲ್ಲೂ ನಿನ್ನೆ ಒಂದೇ ದಿನ 1235 ಜನರು ಕೊರೊನಾ ಕೂಪಕ್ಕೆ ಬಿದ್ದಿದ್ದಾರೆ. ಐಟಿ ಸಿಟಿಯಲ್ಲಿ ಒಟ್ಟು 8167 ಸಕ್ರಿಯ ಕೊರೊನಾ ಕೇಸ್ಗಳಿದ್ದು ಕೇವಲ 1267 ಜನ ಮಾತ್ರ ಗುಣಮುಖರಾಗಿ ಮನೆಯತ್ತ ಹೆಜ್ಜೆಯೂರಿದ್ದಾರೆ. ಅದ್ರಲ್ಲೂ ಬೆಂಗಳೂರಿನಲ್ಲಿ ಈವರೆಗೆ 145 ಜನ ಕೊರೊನಾದಿಂದ ಪ್ರಾಣ ಬಿಟ್ಟಿರೋದು ಎಲ್ಲರೂ ನಡುಗುವಂತೆ ಮಾಡಿದೆ.
ಅದ್ರಲ್ಲೂ ಬೆಂಗಳೂರಿನಲ್ಲಿ ಕಳೆದ 5 ದಿನದಲ್ಲಿ ಕ್ರೂರಿ ಜರ್ನಿಯೇ ಭಯಾನಕವಾಗಿದೆ. ಅಷ್ಟಕ್ಕೂ ಕಳೆದ 5 ದಿನದಲ್ಲಿ ಬೆಂಗಳೂರಿನಲ್ಲಾಗಿರೋ ಕೊರೊನಾ ಬ್ಲಾಸ್ಟ್ ತೋರಿಸ್ತೀವಿ ನೋಡಿ.
5 ದಿನ.. ‘ಸ್ಫೋಟ’ದ ಆಟ! ಜುಲೈ 1ರಂದು ದಾಳಿ ಆರಂಭಿಸಿರೋ ಕೊರೊನಾ ಅಂದು 735 ಜನರ ಮೇಲೆ ಅಟ್ಯಾಕ್ ಮಾಡಿದ್ರೆ ಇಬ್ಬರನ್ನ ಬಲಿ ಪಡೆದಿತ್ತು. ಆದ್ರೆ ಅಂದು ಆಸ್ಪತ್ರೆಯಿಂದ ಒಬ್ರೇ ಒಬ್ರು ಬಿಡುಗಡೆಯಾಗಿರಲಿಲ್ಲ. ಇನ್ನು ಜುಲೈ 2ರಂದು 889 ಜನರ ಮೇಲೆ ಕ್ರೂರಿ ಸವಾರಿ ಮಾಡಿದ್ರೆ, 3 ಜನರನ್ನ ಕೊಂದು ಹಾಕಿತ್ತು. ಆಂದು ಕೇವಲ 30 ಜನರು ಸೋಂಕಿನಿಂದ ಗುಣಮುಖರಾಗಿದ್ರು. ಅಲ್ಲದೇ, ಜುಲೈ 3ರಂದು 994 ಜನರ ದೇಹ ಹೊಕ್ಕಿದ್ದ ಕ್ರೂರಿ 5 ಮಂದಿಯನ್ನ ಸಾವಿನ ಕೂಪಕ್ಕೆ ತಳ್ಳಿತ್ತು. ಅಂದು 197 ಜನರು ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ರು.
ಇತ್ತ ಜುಲೈ 4ರಂದು ಬರೋಬ್ಬರಿ 1172 ಜನರ ಮೇಲೆ ಕೊರೊನಾ ದಾಳಿ ಮಾಡಿದ್ರೆ, 24 ಮಂದಿಯನ್ನ ನುಂಗಿ ಹಾಕಿತ್ತು. ಆದ್ರೆ, 195 ಜನರು ಮಾತ್ರ ಸೋಂಕಿನಿಂದ ಗುಣಮುಖರಾಗಿದ್ರು. ಜುಲೈ 5 ಅಂದ್ರೆ ನಿನ್ನೆ ಬರೋಬ್ಬರಿ 1235 ಜನರ ದೇಹ ಹೊಕ್ಕಿರೋ ಕ್ರೂರಿ 16 ಜನರನ್ನ ಕೊಂದು ಮರಣಮೃದಂಗ ಬಾರಿಸಿದೆ. ಅದ್ರಲ್ಲೂ ಕೇವಲ 302 ಜನ ಮಾತ್ರ ಸೋಂಕಿನಿಂತ ಗುಣಮುಖರಾಗಿದ್ದಾರೆ. ಕಳೆದ 5 ದಿನದಲ್ಲಿ 5025 ಮಂದಿ ಸೋಂಕಿನ ಸುಳಿಗೆ ಸಿಲುಕಿದ್ರೆ, 50 ಜನರು ಸಾವಿನ ಮನೆ ಸೇರಿದ್ದಾರೆ.. ಕೇವಲ 724 ಜನ ಮಾತ್ರ ಗುಣಮುಖರಾಗಿ ಹೊರ ಬಂದಿರೋದು ಆತಂಕ ಹೆಚ್ಚಿಸಿದೆ.
ಬೆಂಗಳೂರಲ್ಲಿ ನಿನ್ನೆ 18 ಪೊಲೀಸರಿಗೆ ವಕ್ಕರಿಸಿದ ಕ್ರೂರಿ! ಬೆಂಗಳೂರಿನಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದ್ರೆ ಪೊಲೀಸರನ್ನ ಬೆನ್ನು ಬಿಡದೆ ಕಾಡ್ತಿದೆ. ನಿನ್ನೆ 18 ಪೊಲೀಸ್ ಸಿಬ್ಬಂದಿ ಮೇಲೆ ಕೊರೊನಾ ದಾಳಿ ಇಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಈವರೆಗೆ 347 ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದ್ರೆ, ಐವರು ಸಿಬ್ಬಂದಿ ಹೆಮ್ಮಾರಿ ವೈರಸ್ಗೆ ಬಲಿಯಾಗಿದ್ದಾರೆ. ಕ್ರೂರಿ ಆರ್ಭಟದಿಂದಾಗಿ ಬೆಂಗಳೂರಿನಲ್ಲೇ 31 ಪೊಲೀಸ್ ಠಾಣೆ ಸೀಲ್ಡೌನ್ ಆಗಿವೆ. ಸದ್ಯ 737 ಪೊಲೀಸ್ ಸಿಬ್ಬಂದಿಯನ್ನ ಕ್ವಾರಂಟೈನ್ನಲ್ಲಿರಿಸಿ ನಿಗಾ ಇಡಲಾಗಿದೆ.
ಒಟ್ನಲ್ಲಿ, ಕಳೆದ 5 ದಿನದಿಂದ ದೊಡ್ಡ ಪ್ರಮಾಣದಲ್ಲೇ ದಾಳಿ ಮಾಡ್ತಿರೋ ಸೋಂಕು, ರಾಜಧಾನಿಯಲ್ಲೇ 10 ಸಾವಿರದ ಗಡಿಯತ್ತ ಹೆಜ್ಜೆಯೂರಿದೆ. ದಿನದಿಂದ ದಿನಕ್ಕೆ ಮರಣಶಾಸನ ಬಾರಿಸ್ತಿರೋ ರಾಕ್ಷಸ ವೈರಸ್ ಬೆಂಗಳೂರನ್ನೇ ಬಲಿಪೀಠ ಮಾಡ್ಕೊಂಡಿದೆ. ಐಟಿ ಸಿಟಿಯಲ್ಲಿ ಇದೇ ವೇಗದಲ್ಲೇ ಕೊರೊನಾ ತನ್ನ ಓಟ ಮುಂದುವರಿಸಿದ್ರೆ ಈ ತಿಂಗಳ ಅಂತ್ಯಕ್ಕೆ ಮಹಾ ಸಂಕಷ್ಟ ಕಟ್ಟಿಟ್ಟ ಬುತ್ತಿ.. ಒಂದು ಚೂರು ಹೆಚ್ಚು ಕಮ್ಮಿಯಾದ್ರೂ ಆ ದೇವರು ಬಂದ್ರೂ ನಮ್ಮನ್ನ ನಿಮ್ಮನ್ನ ಕಾಪಾಡೋದು ಕಷ್ಟ.. ಬಿ ಅಲರ್ಟ್.