ಕೃಷ್ಣಾ, ಮಲಪ್ರಭಾ ಅಬ್ಬರ: ಜಿಲ್ಲೆಯಾದ್ಯಂತ 3 ಸಾವಿರ ಹೆಕ್ಟೇರ್ ಪ್ರದೇಶ ಜಲಾವೃತ
ಬಾಗಲಕೋಟೆ: ಭಾರಿ ಮಳೆಯಿಂದ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ತುಂಬಿ ಹರಿದಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ನದಿಪಾತ್ರದ ಬೆಳೆಗಳು ಜಲಾವೃತಗೊಂಡಿವೆ. ಸುಮಾರು 3,825 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಜಲಾವೃತವಾಗಿದೆ. ಕಬ್ಬು, ಸೂರ್ಯಕಾಂತಿ, ಸೋಯಾಬೀನ್, ಉದ್ದು, ಗೋವಿನಜೋಳ ಸೇರಿದಂತೆ ಹಲವು ಬೆಳೆಗಳು ನೀರುಪಾಲಾಗಿವೆ. ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ನೀಡವಂತೆ ಬಾಗಲಕೋಟೆ ಜಿಲ್ಲಾಡಳಿತದ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಬೆಳೆ ನಷ್ಟದ ಪರಿಹಾರವೇ ಇನ್ನೂ ಸಿಕ್ಕಿಲ್ಲ. ನಷ್ಟಕ್ಕೊಳಗಾದ ರೈತರನ್ನ ಬಿಟ್ಟು ಬೇರೆಯವರಿಗೆ ಪರಿಹಾರ ನೀಡಲಾಗುತ್ತಿದೆ. […]

ಬಾಗಲಕೋಟೆ: ಭಾರಿ ಮಳೆಯಿಂದ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ತುಂಬಿ ಹರಿದಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ನದಿಪಾತ್ರದ ಬೆಳೆಗಳು ಜಲಾವೃತಗೊಂಡಿವೆ.
ಸುಮಾರು 3,825 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಜಲಾವೃತವಾಗಿದೆ. ಕಬ್ಬು, ಸೂರ್ಯಕಾಂತಿ, ಸೋಯಾಬೀನ್, ಉದ್ದು, ಗೋವಿನಜೋಳ ಸೇರಿದಂತೆ ಹಲವು ಬೆಳೆಗಳು ನೀರುಪಾಲಾಗಿವೆ. ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ನೀಡವಂತೆ ಬಾಗಲಕೋಟೆ ಜಿಲ್ಲಾಡಳಿತದ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಬೆಳೆ ನಷ್ಟದ ಪರಿಹಾರವೇ ಇನ್ನೂ ಸಿಕ್ಕಿಲ್ಲ. ನಷ್ಟಕ್ಕೊಳಗಾದ ರೈತರನ್ನ ಬಿಟ್ಟು ಬೇರೆಯವರಿಗೆ ಪರಿಹಾರ ನೀಡಲಾಗುತ್ತಿದೆ. ಸಮರ್ಪಕವಾಗಿ ಸರ್ವೆ ನಡೆಸಿ ನದಿತೀರದ ರೈತರಿಗೆ ಪರಿಹಾರ ನೀಡಿ ಎಂದು ರೈತರು ಆಗ್ರಹಿಸಿದ್ದಾರೆ. ಜುಲೈ ತಿಂಗಳಿನಲ್ಲಿ ಸುರಿದ ಭಾರಿ ಮಳೆಗೆ ಅಪಾರ ಬೆಳೆ ನಾಶವಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 3,592 ಹೆಕ್ಟೇರ್‌ನಲ್ಲಿದ್ದ ಬೆಳೆ ನಾಶ ಎಂದು ಬಾಗಲಕೋಟೆಯ ಜಂಟಿ ಕೃಷಿ ನಿರ್ದೇಶಕರು ವರದಿ ಮಾಡಿದ್ದಾರೆ.

Published On - 8:23 am, Tue, 11 August 20




