AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಂತವೈದ್ಯೆ ಎಡವಟ್ಟಿನಿಂದ ಯುವಕನಿಗೆ ಮೂರು ಬಾರಿ ಆಪರೇಷನ್​?

ಬೆಂಗಳೂರು: ದಂತವೈದ್ಯೆ ಎಡವಟ್ಟಿನಿಂದ ಯುವಕನಿಗೆ ಮೂರು ಬಾರಿ ಆಪರೇಷನ್ ಮಾಡಿರುವ ಆರೋಪ ಕೇಳಿಬಂದಿದೆ. ಕಿಯಾರಾ ಡೆಂಟಲ್ ಕ್ಲಿನಿಕ್​ನ ದಂತವೈದ್ಯೆ ಡಾ.ಮೋನಿಕಾ ವಿರುದ್ಧ ಆರೋಪ ಮಾಡಲಾಗಿದೆ. ಡಿ.24ರಂದು ಹಲ್ಲು ನೋವಿನ ಚಿಕಿತ್ಸೆಗೆ ಕಿಯಾರಾ ಡೆಂಟಲ್ ಕ್ಲಿನಿಕ್​ಗೆ 19 ವರ್ಷದ ವೇಣು ತೆರಳಿದ್ದ. ದಂತವೈದ್ಯೆ ಡಾ.ಮೋನಿಕಾ ಅವರು ವೇಣು ದವಡೆಗೆ ಇಂಜೆಕ್ಷನ್​ ಕೊಟ್ಟು ಚಿಕಿತ್ಸೆ ನೀಡಿದ್ದರು. ಇದಾದ ಬಳಿಕ ವೇಣು ಗಂಟಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಊತದಿಂದ ಆಹಾರ ಸೇವಿಸಲು, ಮಾತನಾಡಲು ಆಗತ್ತಿರಲಿಲ್ಲ. ಕೂಡಲೇ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ವೇಣುಗೆ 3 […]

ದಂತವೈದ್ಯೆ ಎಡವಟ್ಟಿನಿಂದ ಯುವಕನಿಗೆ ಮೂರು ಬಾರಿ ಆಪರೇಷನ್​?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jan 10, 2020 | 5:12 PM

Share

ಬೆಂಗಳೂರು: ದಂತವೈದ್ಯೆ ಎಡವಟ್ಟಿನಿಂದ ಯುವಕನಿಗೆ ಮೂರು ಬಾರಿ ಆಪರೇಷನ್ ಮಾಡಿರುವ ಆರೋಪ ಕೇಳಿಬಂದಿದೆ. ಕಿಯಾರಾ ಡೆಂಟಲ್ ಕ್ಲಿನಿಕ್​ನ ದಂತವೈದ್ಯೆ ಡಾ.ಮೋನಿಕಾ ವಿರುದ್ಧ ಆರೋಪ ಮಾಡಲಾಗಿದೆ.

ಡಿ.24ರಂದು ಹಲ್ಲು ನೋವಿನ ಚಿಕಿತ್ಸೆಗೆ ಕಿಯಾರಾ ಡೆಂಟಲ್ ಕ್ಲಿನಿಕ್​ಗೆ 19 ವರ್ಷದ ವೇಣು ತೆರಳಿದ್ದ. ದಂತವೈದ್ಯೆ ಡಾ.ಮೋನಿಕಾ ಅವರು ವೇಣು ದವಡೆಗೆ ಇಂಜೆಕ್ಷನ್​ ಕೊಟ್ಟು ಚಿಕಿತ್ಸೆ ನೀಡಿದ್ದರು. ಇದಾದ ಬಳಿಕ ವೇಣು ಗಂಟಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಊತದಿಂದ ಆಹಾರ ಸೇವಿಸಲು, ಮಾತನಾಡಲು ಆಗತ್ತಿರಲಿಲ್ಲ. ಕೂಡಲೇ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ವೇಣುಗೆ 3 ಆಪರೇಶನ್ ಮಾಡಲಾಗಿದೆ.

ಡೆಂಟಲ್ ಡಾಕ್ಟರ್​ ಮೋನಿಕಾ ನೀಡಿದ್ದ ಚಿಕಿತ್ಸೆಯಲ್ಲಿ ಎಡವಟ್ಟು ಆಗಿದೆ ಎಂದು ವೇಣು ತಂದೆ ಶ್ರೀನಿವಾಸ್‌ ಗಂಭೀರವಾಗಿ ಆರೋಪಿಸಿದ್ದಾರೆ. ಡಾ.ಮೋನಿಕಾ ವಿರುದ್ಧ ಹೆಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು