ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಪ್ರಮುಖ ಕಾರಣಕರ್ತರಾಗಿದ್ದ ಚಿಮೂ
ಬೆಂಗಳೂರು: ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರು ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಕನ್ನಡ ಭಾಷೆಯ ಐತಿಹಾಸಿಕತೆಯ ಕುರಿತು ಚಿಮೂ ಸಂಶೋಧನೆ ನಡೆಸಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಚಿಮೂ ಪ್ರಮುಖ ಕಾರಣರಾಗಿದ್ದರು. 1953ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಚಿಮೂ ಪದವಿ ಪಡೆದಿದ್ದಾರೆ. 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸ್ನಾತಕೋತ್ತರ ಪದವಿ ಓದುತ್ತಿದ್ದ ವೇಳೆಯೇ ಪಂಪ ಕವಿ ಮತ್ತು ಮೌಲ್ಯ ಪ್ರಸಾರದ ಕುರಿತು ಚಿಮೂ ಪ್ರಬಂಧ ರಚಿಸಿದ್ದಾರೆ. ಚಿಮೂಗೆ ಮೈಸೂರು ವಿವಿಯಲ್ಲಿ ಕುವೆಂಪು, […]
ಬೆಂಗಳೂರು: ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರು ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಕನ್ನಡ ಭಾಷೆಯ ಐತಿಹಾಸಿಕತೆಯ ಕುರಿತು ಚಿಮೂ ಸಂಶೋಧನೆ ನಡೆಸಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಚಿಮೂ ಪ್ರಮುಖ ಕಾರಣರಾಗಿದ್ದರು.
1953ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಚಿಮೂ ಪದವಿ ಪಡೆದಿದ್ದಾರೆ. 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸ್ನಾತಕೋತ್ತರ ಪದವಿ ಓದುತ್ತಿದ್ದ ವೇಳೆಯೇ ಪಂಪ ಕವಿ ಮತ್ತು ಮೌಲ್ಯ ಪ್ರಸಾರದ ಕುರಿತು ಚಿಮೂ ಪ್ರಬಂಧ ರಚಿಸಿದ್ದಾರೆ. ಚಿಮೂಗೆ ಮೈಸೂರು ವಿವಿಯಲ್ಲಿ ಕುವೆಂಪು, ಪುತಿನ ಸಂಪರ್ಕ ಸಿಕ್ಕಿತ್ತು. ತೀ.ನಂ.ಶ್ರೀಕಂಠಯ್ಯ ಮಾರ್ಗದರ್ಶನಲ್ಲಿ ಕನ್ನಡ ಶಾಸನಗಳ ಕುರಿತು ಪಿಹೆಚ್ಡಿ ಪಡೆದಿದ್ದರು. 1964ರಲ್ಲಿ ಬೆಂಗಳೂರು ವಿವಿಯಿಂದ ಚಿಮೂ ಪಿಹೆಚ್ಡಿ ಪಡೆದಿದ್ದರು.
ಪ್ರಮುಖ ಪುಸ್ತಕಗಳು ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. 2000ರಲ್ಲಿ ವೀರಶೈವ ಧರ್ಮ, ವಾಗರ್ಥ, 1975ರಲ್ಲಿ ವಚನ ಸಾಹಿತ್ಯ, 1966ರಲ್ಲಿ ಸಂಶೋಧನಾ ತರಂಗ ಪುಸ್ತಕವನ್ನು ಪ್ರಕಟಿಸಿದ್ದಾರೆ. ಪುರಾಣ ಸೂರ್ಯಗ್ರಹಣ, 1985ರಲ್ಲಿ ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ ಬಗ್ಗೆ ಪುಸ್ತಕ ಬರೆದಿದ್ದರು. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಹೊಸತು ಹೊಸತು, ಗ್ರಾಮೀಣ, ಚಿದಾನಂದ ಸಮಗ್ರ ಸಂಪುಟ, ಬಸವಣ್ಣ ಸೇರಿದಂತೆ ಹಲವು ಕೃತಿಗಳನ್ನು ಚಿಮೂ ರಚಿಸಿದ್ದಾರೆ.
ಚಿಮೂಗೆ ಸಿಕ್ಕ ಗೌರವಗಳು ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿಗೆ ರಾಜ್ಯೋತ್ಸವ ಪ್ರಶಸ್ತಿ, 2002ರಲ್ಲಿ ಪಂಪ ಪ್ರಶಸ್ತಿ ಲಭಿಸಿದೆ. ‘ಹೊಸತು ಹೊಸತು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 2006ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.