ಹೆಚ್ಚು ಬಾಡಿಗೆಗೆ ಒತ್ತಾಯ, 35 ಆಟೋ ಪೊಲೀಸ್ ವಶ
ಮೈಸೂರು: ಹೆಚ್ಚು ಬಾಡಿಗೆ ನೀಡುವಂತೆ ಒತ್ತಾಯಿಸಿದ ಹಿನ್ನೆಲೆ 35 ಆಟೋಗಳನ್ನು ಎನ್‌ಆರ್ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೀಲ್ಡಿಗಿಳಿದಿದ್ದ ಪೊಲೀಸರು ಸಿವಿಲ್ ಡ್ರೆಸ್‌ನಲ್ಲಿ ಸಾರ್ವಜನಿಕರಂತೆ ಹೋಗಿ ಆಟೋ ಹತ್ತಿದ್ದಾರೆ. ಈ ವೇಳೆ ಹೆಚ್ಚು ಬಾಡಿಗೆ ನೀಡುವಂತೆ ಚಾಲಕರು ಒತ್ತಾಯಿಸಿದ್ದಾರೆ. ಈ ರೀತಿ ಹೆಚ್ಚು ಬಾಡಿಗೆ ನೀಡುವಂತೆ ಒತ್ತಾಯಿಸಿದವರ ಆಟೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕರಿಂದ 13 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ಎನ್‌ಆರ್ ಸಂಚಾರ ಠಾಣೆ ಇನ್ಸಪೆಕ್ಟರ್ ದಿವಾಕರ್ ನೇತೃತ್ವದಲ್ಲಿ ರೈಲು ನಿಲ್ದಾಣ, ಕೆ.ಆರ್ […]
ಮೈಸೂರು: ಹೆಚ್ಚು ಬಾಡಿಗೆ ನೀಡುವಂತೆ ಒತ್ತಾಯಿಸಿದ ಹಿನ್ನೆಲೆ 35 ಆಟೋಗಳನ್ನು ಎನ್‌ಆರ್ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೀಲ್ಡಿಗಿಳಿದಿದ್ದ ಪೊಲೀಸರು ಸಿವಿಲ್ ಡ್ರೆಸ್‌ನಲ್ಲಿ ಸಾರ್ವಜನಿಕರಂತೆ ಹೋಗಿ ಆಟೋ ಹತ್ತಿದ್ದಾರೆ. ಈ ವೇಳೆ ಹೆಚ್ಚು ಬಾಡಿಗೆ ನೀಡುವಂತೆ ಚಾಲಕರು ಒತ್ತಾಯಿಸಿದ್ದಾರೆ.
ಈ ರೀತಿ ಹೆಚ್ಚು ಬಾಡಿಗೆ ನೀಡುವಂತೆ ಒತ್ತಾಯಿಸಿದವರ ಆಟೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕರಿಂದ 13 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ಎನ್‌ಆರ್ ಸಂಚಾರ ಠಾಣೆ ಇನ್ಸಪೆಕ್ಟರ್ ದಿವಾಕರ್ ನೇತೃತ್ವದಲ್ಲಿ ರೈಲು ನಿಲ್ದಾಣ, ಕೆ.ಆರ್ ಆಸ್ಪತ್ರೆ, ಮಿಲಾದ್ ಪಾರ್ಕ್, ಆರ್.ಎಂ.ಸಿ ವೃತ್ತ ಸೇರಿದಂತೆ ಹಲವು ಕಡೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಪ್ರಯಾಣಿಕರು ಹೇಳಿದ ಸ್ಥಳಕ್ಕೆ ಬಾರದ ಆಟೋ ಚಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.