ರಾಜ್ಯ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ, ತೆರಿಗೆ ಏರುತ್ತಾ.. ನೀರಾವರಿ, ರೈತರಿಗೆ ಸಿಗುತ್ತಾ ಬಂಪರ್ ಗಿಫ್ಟ್ ?

ಸಾಧು ಶ್ರೀನಾಥ್​

|

Updated on:Mar 05, 2020 | 10:52 AM

ಬೆಂಗಳೂರು: ಮಹತ್ವಾಕಾಂಕ್ಷೆಯ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರು ಆಗಿದೆ. ಹೀಗಾಗಿಯೇ ಇಂದು ಸಿಎಂ ಯಡಿಯೂರಪ್ಪ ಮಂಡಿಸಲಿರೋ ಬಜೆಟ್ ಮೇಲೆ ರಾಜ್ಯದ ಜನ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಷ್ಟಕ್ಕೂ ಸಿಎಂ ಬಿಎಸ್​ವೈ ಜನರ ನಿರೀಕ್ಷೆ ಈಡೇರಿಸ್ತಾರಾ..? ಯಾವ ಯೋಜನೆಗಳಿಗೆ ಆದ್ಯತೆ ನೀಡಬಹುದು ಅಂತಾ ನೊಡೋದಾದ್ರೆ.. ಬಹುನಿರೀಕ್ಷಿತ ರಾಜ್ಯ ಬಜೆಟ್ ಮಂಡನೆಗೆ ಕೌಂಟ್​ಡೌನ್ ಶುರುವಾಗಿದೆ. ರಾಜ್ಯದ ಆರ್ಥಿಕ ಪರಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ ಅನ್ನೋ ಅನುಮಾನಗಳ ನಡುವೆ. ಸಿಎಂ ಯಡಿಯೂರಪ್ಪ ಇಂದು ಬಜೆಟ್ ಮಂಡಿಸಲಿದ್ದಾರೆ. ಸಿಎಂ ಬಿಎಸ್​ವೈ ಮಂಡಿಸೋ ಈ […]

ರಾಜ್ಯ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ, ತೆರಿಗೆ ಏರುತ್ತಾ.. ನೀರಾವರಿ, ರೈತರಿಗೆ ಸಿಗುತ್ತಾ ಬಂಪರ್ ಗಿಫ್ಟ್ ?
ಸಿಎಂ ಯಡಿಯೂರಪ್ಪ

ಬೆಂಗಳೂರು: ಮಹತ್ವಾಕಾಂಕ್ಷೆಯ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರು ಆಗಿದೆ. ಹೀಗಾಗಿಯೇ ಇಂದು ಸಿಎಂ ಯಡಿಯೂರಪ್ಪ ಮಂಡಿಸಲಿರೋ ಬಜೆಟ್ ಮೇಲೆ ರಾಜ್ಯದ ಜನ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಷ್ಟಕ್ಕೂ ಸಿಎಂ ಬಿಎಸ್​ವೈ ಜನರ ನಿರೀಕ್ಷೆ ಈಡೇರಿಸ್ತಾರಾ..? ಯಾವ ಯೋಜನೆಗಳಿಗೆ ಆದ್ಯತೆ ನೀಡಬಹುದು ಅಂತಾ ನೊಡೋದಾದ್ರೆ..

ಬಹುನಿರೀಕ್ಷಿತ ರಾಜ್ಯ ಬಜೆಟ್ ಮಂಡನೆಗೆ ಕೌಂಟ್​ಡೌನ್ ಶುರುವಾಗಿದೆ. ರಾಜ್ಯದ ಆರ್ಥಿಕ ಪರಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ ಅನ್ನೋ ಅನುಮಾನಗಳ ನಡುವೆ. ಸಿಎಂ ಯಡಿಯೂರಪ್ಪ ಇಂದು ಬಜೆಟ್ ಮಂಡಿಸಲಿದ್ದಾರೆ. ಸಿಎಂ ಬಿಎಸ್​ವೈ ಮಂಡಿಸೋ ಈ ಬಜೆಟ್​ನತ್ತ ಎಲ್ಲರ ಚಿತ್ತ ನೆಟ್ಟಿದೆ. ಬಜೆಟ್​ನಲ್ಲಿ ಯಾಱರಿಗೆ ಏನೇನು ಸಿಗಬಹುದು..? ತೆರಿಗೆ ಏರಿಸಿ ಜನರಿಗೆ ಹೊರೆ ಹೇರ್ತಾರಾ..? ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಕೊಡ್ತಾರಾ..? ಮೂಲ ಸೌಕರ್ಯ ಕ್ಷೇತ್ರಕ್ಕೆ ಸಂಪನ್ಮೂಲ ಹೆಚ್ಚು ಮಾಡ್ತಾರಾ ಅನ್ನೋ ಪ್ರಶ್ನೆಗಳು ತಲೆ ಎತ್ತಿವೆ. ಇದರ ನಡುವೆ, ಈ ಬಾರಿಯ ಬಜೆಟ್ ಗಾತ್ರ ಭಾರಿ ಏರಿಕೆ ಕಾಣಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಬಜೆಟ್​ನಲ್ಲಿ ಜನಪ್ರಿಯ ಯೋಜನೆಗಳಿಗೆ ಬೀಳುತ್ತಾ ಬ್ರೇಕ್​..? ಸಿಎಂ ಯಡಿಯೂರಪ್ಪ ಇಂದು ಬಜೆಟ್ ಮಂಡನೆ ಮಾಡಲು ಸೂಕ್ತ ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ನಾನಾ ಇಲಾಖೆಗಳ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆಗಳನ್ನ ನಡೆಸಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು, ಆರ್ಥಿಕ ಶಿಸ್ತಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ ಅಂತಾ ಬಜೆಟ್ ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಹೇಳಿದ್ದಾರೆ.

ಹೀಗಾಗಿ ಬಜೆಟ್​ನಲ್ಲಿ ಜನಪ್ರಿಯ ಯೋಜನೆಗಳಿಗೆ ಬ್ರೇಕ್ ಬೀಳೋ ಸಾಧ್ಯತೆಗಳು ದಟ್ಟವಾಗಿ ಕಂಡು ಬರ್ತಿವೆ. ಇದರ ಬದಲಿಗೆ ಕೃಷಿಕರು ಮತ್ತು ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ.

ಕಳೆದ ಬಾರಿ ಬಜೆಟ್ ಮಂಡನೆ ಮಾಡಿದ್ದ ಅಂದಿನ ಸಿಎಂ ಹೆಚ್​.ಡಿ.ಕುಮಾರಸ್ವಾಮಿ, 2 ಲಕ್ಷ 34 ಸಾವಿರ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ರು. ಈ ಬಾರಿ ಬಜೆಟ್ ಗಾತ್ರದಲ್ಲಿ ಅಲ್ಪ ಏರಿಕೆಯಾಗೋ ಸಾಧ್ಯತೆ ಇದೆ. ಹೀಗಾಗಿ ಬಜೆಟ್​ 2 ಲಕ್ಷ 40 ಸಾವಿರ ರೂಪಾಯಿ ಆಸುಪಾಸಿನಲ್ಲಿರಬಹುದು ಅನ್ನೋ ಲೆಕ್ಕಾಚಾರ ಇದೆ. ಕೃಷಿ, ನೀರಾವರಿ, ಲೋಕೋಪಯೋಗಿ, ಸಮಾಜ ಕಲ್ಯಾಣಕ್ಕೆ ಬಜೆಟ್​ನಲ್ಲಿ ಹೆಚ್ಚಿನ ಆದ್ಯತೆ ನೀಡೋ ಸಾಧ್ಯತೆ ಇದೆ. ಹೀಗಾಗಿ ಬಜೆಟ್​ನಿಂದ ಏನನ್ನ ನಿರೀಕ್ಷಿಸಬಹುದು ಅನ್ನೋದನ್ನ ನೋಡೋದಾದ್ರೆ,

ಬಜೆಟ್ ನಿರೀಕ್ಷೆಗಳೇನು..? ಯಡಿಯೂರಪ್ಪ ಇಂದು ಮಂಡಿಸಲಿರೋ ಬಜೆಟ್​ನಲ್ಲಿ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಂಬಲ ಬೆಲೆ ನೀಡುವ ಘೋಷಣೆ ಮಾಡೋ ಸಾಧ್ಯತೆ ಇದೆ. ಇದರ ಜೊತೆಗೆ ನೀರಾವರಿಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಎತ್ತಿನಹೊಳೆ ಯೋಜನೆ ಬೇಗ ಪೂರ್ಣಗೊಳಿಸಲು ಅನುದಾನ ಘೋಷಿಸುವ ಸಾಧ್ಯತೆ ಇದೆ. ಜೊತೆ ಜೊತೆಗೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡೋ ಸಾಧ್ಯತೆ ಇದೆ.

ಬಡವರ ಹಸಿವು ನೀಗಿಸ್ತಿರೋ ಅನ್ನಭಾಗ್ಯ ಯೋಜನೆ‌ ಅಡಿ ಅಕ್ಕಿ ಜೊತೆಗೆ ಗೋಧಿ ವಿತರಣೆ ಮಾಡುವುದಕ್ಕೂ ಬಜೆಟ್​ನಲ್ಲಿ ಒತ್ತು ನೀಡೋ ಸಾಧ್ಯತೆ ಇದೆ. ಅಲ್ದೆ, ಮಕ್ಕಳು ಹಾಗೂ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ ರೂಪಿಸಿರೋ ಜೊತೆಗೆ ಹೊಸ ಸ್ವರೂಪದಲ್ಲಿ ಭಾಗ್ಯ ಲಕ್ಷ್ಮಿ ಯೋಜನೆ ಜಾರಿ ಮಾಡುವ ಸಾಧ್ಯತೆ ಇದೆ. ಬಜೆಟ್​ನಲ್ಲಿ ಅತ್ಯಂತ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣಕ್ಕೆ ಒತ್ತು ನೀಡಬಹುದು ಅನ್ನೋ ಮಾತುಗಳು ಕೇಳಿ ಬರ್ತಿವೆ.

ಬಜೆಟ್ ತಯಾರಿ ವೇಳೆ ಸಿಎಂ ಆರ್ಥಿಕ ಇಲಾಖೆ ಅಧಿಕಾರಿಗಳ ಮಾತಿಗೆ ಹೆಚ್ಚಿನ ಮನ್ನಣೆ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ. ಇದರ ಪ್ರಕಾರ, ಬೊಕ್ಕಸಕ್ಕೆ ಹೊರೆಯಾಗೋ ಜನಪ್ರಿಯ ಯೋಜನೆಗಳ ಘೋಷಿಸುವ ಬದಲು, ಜನಪರ ಯೋಜನೆಗಳಿಗೆ ಆದ್ಯತೆ ಕೊಡಬಹುದು ಅನ್ನೋ ಮಾತುಗಳು ಕೇಳಿ ಬರ್ತಿವೆ. ಒಟ್ನಲ್ಲಿ, ಆರ್ಥಿಕ ಸಂಕಷ್ಟದ ನಡುವೆ ಕೃಷಿಕರಿಗೆ ಹಿತವಾಗುವ, ಬಡವರಿಗೆ ಖುಷಿ ನೀಡುವ ಮತ್ತು ಮಧ್ಯಮ ವರ್ಗದವರಿಗೆ ಹೊರೆ ಆಗದ ಬಜೆಟ್ ತಯಾರಿ ಮಾಡಿದ್ದಾರೆ ಎನ್ನಲಾಗ್ತಿದೆ. ಇದು ನಿಜವೇ ಅನ್ನೋದು ಬಜೆಟ್ ಮಂಡನೆ ಬಳಿಕ ಗೊತ್ತಾಗಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada