ಬೆಂಗಳೂರು: ಕರ್ನಾಟಕಕ್ಕೆ ಬಹು ದೊಡ್ಡ ಸಮಾಧಾನಕರ ಸುದ್ದಿಯೊಂದು ಇದೀಗತಾನೇ ಹೊರಬಂದಿದೆ. ಇದು ಡ್ರ್ಯಾಗನ್ ವೈರಸ್ ಕಾಯಿಲೆಗೆ ಸಂಬಂಧಪಟ್ಟಿದ್ದು, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾದ ನಾಲಕ್ಕೂ ಪ್ರಕರಣಗಳು ನೆಗೆಟೀವ್ ಆಗಿವೆ. ಅಂದ್ರೆ ಯಾರಿಗೂ ಕೊರೊನಾ ವೈರಸ್ ಸೋಂಕು ಆಗಿಲ್ಲ! ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ ಯಾವುದೇ ಕೊರೊನಾ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.
ಪ್ರತ್ಯೇಕ ಕೊರೊನಾ ವಾರ್ಡ್ ನಲ್ಲಿ ದಾಖಲಾಗಿದ್ದ ಶಂಕಿತರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಒಟ್ಟು 5 ಜನ ಕೊರೊನಾ ವೈರಸ್ ಶಂಕಿತರನ್ನ ದಾಖಲು ಮಾಡಿಕೊಳ್ಳಲಾಗಿತ್ತು. ನಿನ್ನೆ ನಾಲ್ಕು ಜನರ ವರದಿ ಬಂದಿದೆ. ನಾಲ್ಕು ಜನರ ವರದಿ ನೆಗೆಟಿವ್ ಆಗಿದೆ. ನೆಗಟಿವ್ ವರದಿ ಬಂದ ಬೆನ್ನಲ್ಲೇ ನಿನ್ನೆಯೇ 3 ಜನರನ್ನ ಡಿಸ್ ಚಾರ್ಜ್ ಮಾಡಲಾಗಿದೆ. ಇನ್ನುಳಿದ ಇಬ್ಬರ ಪೈಕಿ ಇಂದು ಬೆಳಗ್ಗೆ ಒಬ್ಬರನ್ನ ಡಿಸ್ಚಾರ್ಚ್ ಮಾಡಲಾಗಿದೆ. ಉಳಿದ ಒಬ್ಬರನ್ನ ಮಾತ್ರ ಇನ್ನೂ ಡಿಸ್ಚಾರ್ಜ್ ಮಾಡಿಲ್ಲ ಎಂದು ಆಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ.