ಬೆಂಗಳೂರಿಗೆ ಬಿಎಸ್ವೈ ಭರ್ಜರಿ ಕೊಡುಗೆ
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಏಳನೇ ಬಜೆಟ್ ಮಂಡಿಸುತ್ತಿದ್ದಾರೆ. 2020-2021 ನೇ ಸಾಲಿನ ಬಹುನಿರೀಕ್ಷಿತ ಬಜೆಟ್ನಲ್ಲಿ ಬಿಎಸ್ವೈ ನಗರಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ನವನಗರೋತ್ಥಾನ ಯೋನೆಗೆ 8,344 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಬೆಂಗಳೂರು ಸುತ್ತಲಿನ 110 ಹಳ್ಳಿಗಳಿಗೆ 2 ವರ್ಷಕ್ಕೆ 1000 ಕೋಟಿ ಮೀಸಲು ಇಡಲಾಗಿದೆ. ಸಿಲ್ಕ್ಬೋರ್ಡ್ ಜಂಕ್ಷನ್ನಿಂದ ಏರ್ಪೋರ್ಟ್ವರೆಗೆ ಒಟ್ಟು 56 ಕಿ.ಮೀ ಔಟರ್ರಿಂಗ್ರೋಡ್ಗೆ 14,500 ಕೋಟಿ ರೂಪಾಯಿ ಮೀಸಲಿಡಲಾಗುವುದು. ಬಿಎಂಟಿಸಿ 1500 ಬಸ್ಗಳ ಖರೀದಿಗೆ ಒಟ್ಟು 600ಕೋಟಿ ರೂಪಾಯಿ ಮೀಸಲಿಡಲಾಗುತ್ತೆ. ಮೆಟ್ರೋ ನಿಲ್ದಾಣ […]
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಏಳನೇ ಬಜೆಟ್ ಮಂಡಿಸುತ್ತಿದ್ದಾರೆ. 2020-2021 ನೇ ಸಾಲಿನ ಬಹುನಿರೀಕ್ಷಿತ ಬಜೆಟ್ನಲ್ಲಿ ಬಿಎಸ್ವೈ ನಗರಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ನವನಗರೋತ್ಥಾನ ಯೋನೆಗೆ 8,344 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.
ಬೆಂಗಳೂರು ಸುತ್ತಲಿನ 110 ಹಳ್ಳಿಗಳಿಗೆ 2 ವರ್ಷಕ್ಕೆ 1000 ಕೋಟಿ ಮೀಸಲು ಇಡಲಾಗಿದೆ. ಸಿಲ್ಕ್ಬೋರ್ಡ್ ಜಂಕ್ಷನ್ನಿಂದ ಏರ್ಪೋರ್ಟ್ವರೆಗೆ ಒಟ್ಟು 56 ಕಿ.ಮೀ ಔಟರ್ರಿಂಗ್ರೋಡ್ಗೆ 14,500 ಕೋಟಿ ರೂಪಾಯಿ ಮೀಸಲಿಡಲಾಗುವುದು.
ಬಿಎಂಟಿಸಿ 1500 ಬಸ್ಗಳ ಖರೀದಿಗೆ ಒಟ್ಟು 600ಕೋಟಿ ರೂಪಾಯಿ ಮೀಸಲಿಡಲಾಗುತ್ತೆ. ಮೆಟ್ರೋ ನಿಲ್ದಾಣ ಬಸ್ ನಿಲ್ದಾಣ ಸಂಪರ್ಕಕ್ಕೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಗೆ ಮುಂದಾಗಿದೆ. ಟ್ರಾಫಿಕ್ ಕಡಿಮೆ ಮಾಡಲು ಇಂಟಿಗ್ರೇಟೆಡ್ ಮಲ್ಟಿ ಮಾಡೆಲ್ ಟ್ರಾನ್ಸ್ಪೋರ್ಟ್ಹಬ್ಗೆ ಚಾಲನೆ ನೀಡಲಾಗುವುದು.
ರಸ್ತೆ ಅಪಘಾತ ತಡೆಗೆ 200 ಕೋಟಿ ರೂಪಾಯಿ ಮೀಸಲಿಡಲಾಗುವುದು. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಅಂಡರ್ಗ್ರೌಂಡ್ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಹೀಗೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 8772 ಕೋಟಿ ರೂಪಾಯಿ ಮೀಸಲಿಡಲು ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಮಂಡಿಸಿದೆ.
4 ದಿಕ್ಕಿನಲ್ಲೂ ತಲೆ ಎತ್ತಲಿವೆ ಕಲಾ ಕ್ಷೇತ್ರಗಳು: ಜನವರಿ 1ರಂದು ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಆಚರಿಸಲು ಒತ್ತು ನೀಡಲಾಗಿದೆ. ಬೆಂಗಳೂರು ನಗರದ 4 ದಿಕ್ಕಿನಲ್ಲಿ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ಕಲಾ ಕ್ಷೇತ್ರಗಳ ನಿರ್ಮಾಣ ಮಾಡಲು 60 ಕೋಟಿ ರೂಪಾಯಿ ಮೀಸಲಿಡಲಾಗುವುದು.
KIALನಲ್ಲಿ ಕೆಂಪೇಗೌಡರ 100 ಅಡಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ನಿರ್ಮಾಣಕ್ಕೆ 60 ಕೋಟಿ ರೂಪಾಯಿ ಮೀಸಲಿಡಲಾಗುವುದು. ಸಂತ ಶಿಶುನಾಳ ಶರೀಫರ ಸಮಾಧಿ ಅಭಿವೃದ್ಧಿ ಮಾಡಲಾಗುವುದು. ಸಮಾಧಿ ಅಭಿವೃದ್ಧಿಗಾಗಿ 5 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಬಜೆಟ್ನಲ್ಲಿ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿರುವ ಬಿಎಸ್ವೈ ತಿಳಿಸಿದ್ದಾರೆ.
ಇನ್ನು ಚಿತ್ರದುರ್ಗದಲ್ಲಿರುವ ಎಸ್.ನಿಜಲಿಂಗಪ್ಪರ ಮನೆ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 5 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಎಸ್.ಎಲ್.ಭೈರಪ್ಪನವರ ಹುಟ್ಟೂರು ಸಂತೆಶಿವಾರ ಗ್ರಾಮದ ಅಭಿವೃದ್ಧಿಗೆ 5 ಕೋಟಿ ರೂಪಾಯಿ ನೀಡಲಾಗುವುದು. ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸ್ಥಾಪನೆ ಮಾಡಲು 50 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು. ಚಿತ್ರಸಂತೆಗೆ ಸರ್ಕಾರದಿಂದ 1 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಮಂಡಿಸಿದ್ದಾರೆ.
Published On - 12:24 pm, Thu, 5 March 20