ಬೆಂಗಳೂರಲ್ಲಿ ನಿತ್ಯ ಪತ್ತೆಯಾಗಲಿದ್ದಾರೆ 4 ಸಾವಿರ ಸೋಂಕಿತರು!

ಬೆಂಗಳೂರಲ್ಲಿ ನಿತ್ಯ ಪತ್ತೆಯಾಗಲಿದ್ದಾರೆ 4 ಸಾವಿರ ಸೋಂಕಿತರು!

ಬೆಂಗಳೂರು: ಕೊರೊನಾ ಕೂಪಕ್ಕೆ ಬಿದ್ದು ಒದ್ದಾಡುತ್ತಿರುವ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಶಾಕಿಂಗ್ ನ್ಯೂಸ್. ಬೆಂಗಳೂರಲ್ಲಿ ನಿತ್ಯ 4 ಸಾವಿರ ಸೋಂಕಿತರು ಪತ್ತೆಯಾಗಬಹುದೆಂದು ಅಂದಾಜಿಸಲಾಗಿದೆ. ಹೆಚ್ಚು ಹೆಚ್ಚು ಕೊವಿಡ್ ಟೆಸ್ಟ್ ಮಾಡಲು ಬಿಬಿಎಂಪಿ ನಿರ್ಧಾರ ಮಾಡಿದೆ. ಬಿಬಿಎಂಪಿ ನಗರದಲ್ಲಿ ಪ್ರತಿದಿನ 20 ಸಾವಿರ ಌಂಟಿಜೆನ್ ಟೆಸ್ಟ್ ಮಾಡುವ ಗುರಿ ಹೊಂದಿದ್ದು, ಪ್ರತಿದಿನ RT -PCR ಟೆಸ್ಟ್ ಮಾಡಲು ಸಜ್ಜಾಗುತ್ತಿದೆ. ಇದ್ರಿಂದ ನಿತ್ಯ 4 ಸಾವಿರ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆಯಂತೆ. ಹೆಚ್ಚು ಟೆಸ್ಟ್ ಮಾಡುವುದರಿಂದ ಹೆಚ್ಚಿನ ಸೋಂಕಿತರು […]

Ayesha Banu

| Edited By:

Jul 30, 2020 | 8:40 PM

ಬೆಂಗಳೂರು: ಕೊರೊನಾ ಕೂಪಕ್ಕೆ ಬಿದ್ದು ಒದ್ದಾಡುತ್ತಿರುವ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಶಾಕಿಂಗ್ ನ್ಯೂಸ್. ಬೆಂಗಳೂರಲ್ಲಿ ನಿತ್ಯ 4 ಸಾವಿರ ಸೋಂಕಿತರು ಪತ್ತೆಯಾಗಬಹುದೆಂದು ಅಂದಾಜಿಸಲಾಗಿದೆ. ಹೆಚ್ಚು ಹೆಚ್ಚು ಕೊವಿಡ್ ಟೆಸ್ಟ್ ಮಾಡಲು ಬಿಬಿಎಂಪಿ ನಿರ್ಧಾರ ಮಾಡಿದೆ.

ಬಿಬಿಎಂಪಿ ನಗರದಲ್ಲಿ ಪ್ರತಿದಿನ 20 ಸಾವಿರ ಌಂಟಿಜೆನ್ ಟೆಸ್ಟ್ ಮಾಡುವ ಗುರಿ ಹೊಂದಿದ್ದು, ಪ್ರತಿದಿನ RT -PCR ಟೆಸ್ಟ್ ಮಾಡಲು ಸಜ್ಜಾಗುತ್ತಿದೆ. ಇದ್ರಿಂದ ನಿತ್ಯ 4 ಸಾವಿರ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆಯಂತೆ. ಹೆಚ್ಚು ಟೆಸ್ಟ್ ಮಾಡುವುದರಿಂದ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಾರೆ ಎನ್ನಲಾಗುತ್ತಿದೆ.

ಇಲ್ಲಿಯವರೆಗೆ 23,640 ಌಂಟಿಜೆನ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ 5186 ಸೋಂಕಿತರು ಪತ್ತೆಯಾಗಿದ್ದಾರೆ. 20 ಸಾವಿರ ಟೆಸ್ಟ್ ಮಾಡಿದ್ರೆ, 4 ಸಾವಿರ ಸೋಂಕಿತರು ಪತ್ತೆಯಾಗಬಹುದು ಎನ್ನಲಾಗುತ್ತಿದೆ. ಬಿಬಿಎಂಪಿ ಇದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ವಿಧಾನಸಭಾವಾರು ಕೋವಿಡ್ ಸೆಂಟರ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ. ಆಯಾ ವಲಯದ ಸೋಂಕಿತರು ಸ್ಥಳೀಯ ಸೆಂಟರ್​ಗೆ ಹೋಗ್ಬಹುದು. ಆಗ ನಿತ್ಯ 4 ಸಾವಿರ ಸೋಂಕಿತರು ಪತ್ತೆಯಾದ್ರೆ ಅದನ್ನ ಎದುರಿಸಲು ಬಿಬಿಎಂಪಿ ತಯಾರಿ ಮಾಡಿಕೊಳ್ಳುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada