Cyber Crime ಕಾಲೇಜು ಯುವತಿಯರೇ ಹುಷಾರ್! ಫೋಟೋಗಳಾಗುತ್ತಿವೆ ದುರ್ಬಳಕೆ..
ಬೆಂಗಳೂರು: ಸಿಲಿಕಾನ್ ಸಿಟಿ ಕಾಲೇಜು ಯುವತಿಯರೇ ಹುಷಾರ್! ದೆಹಲಿ ಬಾಯ್ಸ್ ರೂಂ ಪ್ರಕರಣ ಮಾಸೊ ಮುನ್ನವೇ ಬೆಂಗಳೂರಿನಲ್ಲಿ ಕಾಲೇಜು ಯುವತಿಯರಿಗೆ ಆತಂಕ ಶುರುವಾಗಿದೆ. ಯಾಕಂದ್ರೆ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರ ಫೋಟೋಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಹೊರ ಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಫೋಟೋ ಕದ್ದು ಅದನ್ನು ಯುವತಿಯರಿಗೆ ಗೊತ್ತಾಗದಂತೆ ಅಶ್ಲೀಲ ವೆಬ್ ಸೈಟ್ಗಳಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಈ ರೀತಿ ಅಪ್ಲೋಡ್ ಆದ ಫೋಟೋಗಳಿಂದ ವಿದ್ಯಾರ್ಥಿನಿಯರಿಗೆ ಆತಂಕ ಹೆಚ್ಚಾಗಿದೆ. ಸುಮಾರು ಮೂರಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿನಿಯರಲ್ಲಿ ಈ […]

ಬೆಂಗಳೂರು: ಸಿಲಿಕಾನ್ ಸಿಟಿ ಕಾಲೇಜು ಯುವತಿಯರೇ ಹುಷಾರ್! ದೆಹಲಿ ಬಾಯ್ಸ್ ರೂಂ ಪ್ರಕರಣ ಮಾಸೊ ಮುನ್ನವೇ ಬೆಂಗಳೂರಿನಲ್ಲಿ ಕಾಲೇಜು ಯುವತಿಯರಿಗೆ ಆತಂಕ ಶುರುವಾಗಿದೆ. ಯಾಕಂದ್ರೆ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರ ಫೋಟೋಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಹೊರ ಬಿದ್ದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಫೋಟೋ ಕದ್ದು ಅದನ್ನು ಯುವತಿಯರಿಗೆ ಗೊತ್ತಾಗದಂತೆ ಅಶ್ಲೀಲ ವೆಬ್ ಸೈಟ್ಗಳಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಈ ರೀತಿ ಅಪ್ಲೋಡ್ ಆದ ಫೋಟೋಗಳಿಂದ ವಿದ್ಯಾರ್ಥಿನಿಯರಿಗೆ ಆತಂಕ ಹೆಚ್ಚಾಗಿದೆ. ಸುಮಾರು ಮೂರಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿನಿಯರಲ್ಲಿ ಈ ಸಮಸ್ಯೆಯುಂಟಾದ ಬಗ್ಗೆ ಚರ್ಚೆಗಳಿವೆ.
ಆತಂಕಕ್ಕೆ ಒಳಗಾದ ಕಾಲೇಜು ವಿದ್ಯಾರ್ಥಿಗಳು ವಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ತಮಗೆ ಗೊತ್ತಾಗದ ರೀತಿ ಅಶ್ಲೀಲ ವೆಬ್ ಸೈಟ್ನಲ್ಲಿ ಯುವತಿಯರ ಫೋಟೋ ಕಾಣಿಸಿಕೊಂಡಿದೆ. ಪ್ರತಿಷ್ಠಿತ ಕಾಲೇಜುಗಳ ಯುವತಿಯರ ಫೋಟೊಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಮೊದಲಿಗೆ ಮಾನ್ವಿತ ಹಾಗೂ ವೀಣಾ ಎಂಬ ಹೆಸರಿನ ನಕಲಿ ಖಾತೆಯಲ್ಲಿ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ಗಳಲ್ಲಿ ರಿಕ್ವೆಸ್ಟ್ ಬಂದಿದೆ ಬಳಿಕ ಫೋಟೋಗಳಿರುವ ಲಿಂಕ್ಗಳನ್ನು ಶೇರ್ ಮಾಡಲಾಗಿದೆ. ಕೆಲವು ಕಾಲೇಜಿನ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ಪೊಲೀಸರಿಂದ ತನಿಖೆ ಮುಂದುವರೆದಿದೆ.
Published On - 7:49 am, Wed, 29 July 20