ಚಿಕ್ಕಬಳ್ಳಾಪುರ: ಹೆಚ್ಚೇನೂ ಕೊರೊನಾ ಕಾಟವಿಲ್ಲದೆ ಆರಂಭದಿಂದಲೂ ಪ್ರಶಾಂತವಾಗಿದ್ದ ಚಿಕ್ಕಬಳ್ಳಾಪುರ ದಿಢಿಗ್ಗನೆ ಬೆಚ್ಚಿಬಿದ್ದಿದೆ. ಕಾರಣ ದೂರದ ರಾಜ್ಯಗಳಿಂದ ನೂರಾರು ಮಂದಿ ಜಿಲ್ಲೆಯ ಗಡಿಯೊಳಕ್ಕೆ ಪ್ರವೇಶಿಸಿ, ಅವಾಂತರವೆಬ್ಬಸಿದ್ದಾರೆ. ಈ ಬೆಳವಣಿಗೆಗಳು ಖುದ್ದು ಆರೋಗ್ಯ ಸಚಿವರೂ ಆದ ಚಿಕ್ಕಬಳ್ಳಾಪುರದ ಡಾ. ಸುಧಾಕರ್ಗೂ ಸಹ್ಯವಾಗಿಲ್ಲ; ಜಿಲ್ಲಾಧಿಕಾರಿಗೂ ಪಥ್ಯವಾಗಿಲ್ಲ.
ಇನ್ನೂ ಆತಂಕದ ಸಂಗತಿಯೆಂದ್ರೆ ಅನ್ಯ ರಾಜ್ಯಗಳಿಂದ ಇಲ್ಲಿಗೆ ಬಂದ ಕೊರೊನಾ ಶಂಕಿತರ ಪೈಕಿ ಯಾರಿಗೂ ಕೊರೊನಾ ಸೋಂಕಿನ ಲಕ್ಷಣಗಳೇ ಇರಲಿಲ್ಲ! ಸಾಮಾನ್ಯರಂತೆ ಎಲ್ಲರೂ ಜಾಲಿಯಾಗಿ ವಿಶ್ರಾಂತಿ ಪಡೆಯುತ್ತಿದ್ರು. ಕೊವಿಡ್ ಟೆಸ್ಟ್ ರಿಪೋರ್ಟ್ ಬಂದಾಗಲೇ ಗೊತ್ತಾಗಿದ್ದು ಸೋಂಕಿನ ಮರ್ಮ! ಇದು ನಿನ್ನೆ ಕೊರೊನಾ ದೃಢಪಟ್ಟ 45 ಜನರ ಕುರಿತಾದ ಆಶ್ಚರ್ಯಕರ ಸಂಗತಿ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆವರೇ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದ್ರೆ ಎಲ್ಲರೂ ಕೊರೊನಾ ಸೋಂಕಿನಿಂದ ಗುಣಮುಖರಾಗುವ ವಿಶ್ವಾಸವನ್ನೂ ಅವರು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.