ಎಸಿಬಿ ಅಧಿಕಾರಿಗಳೆಂದು ಹೇಳಿ ವಂಚನೆ, ಐವರ ಬಂಧನ
ಚಿತ್ರದುರ್ಗ: ಎಸಿಬಿ ಅಧಿಕಾರಿಗಳೆಂದು ಹೇಳಿ ಹೆದರಿಸಿ ಹಣ ಪಡೆದು ವಂಚನೆ ಮಾಡಿದ್ದ ಐವರು ಆರೋಪಿಗಳನ್ನ ಹಿರಿಯೂರು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮೂಲದ ಮುರಿಗೆಪ್ಪ, ಹಾಸನ ಮೂಲದ ರಜನಿ, ಚಿದಾನಂದ, ತಮಿಳುನಾಡಿನ ಅರುಳ್ ರೇಗನ್ ಮತ್ತು ಹೇದರ್ ಬಂಧಿತ ಆರೋಪಿಗಳು. ಇವರು ಎಸಿಬಿ ಅಧಿಕಾರಿಗಳೆಂದು ಹೇಳಿ ನಂಬಿಸಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿರುವ ಎಲ್.ಟಿ.ರಂಗಪ್ಪಗೆ ವಂಚನೆ ಮಾಡಿದ್ದಾರೆ. 1ಲಕ್ಷ 24 ಸಾವಿರ ರೂಪಾಯಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾರೆ. ಬಂಧಿತರಿಂದ ಮೊಬೈಲ್, ಚಿನ್ನಾಭರಣ, 52 ಸಾವಿರ ನಗದು […]
ಚಿತ್ರದುರ್ಗ: ಎಸಿಬಿ ಅಧಿಕಾರಿಗಳೆಂದು ಹೇಳಿ ಹೆದರಿಸಿ ಹಣ ಪಡೆದು ವಂಚನೆ ಮಾಡಿದ್ದ ಐವರು ಆರೋಪಿಗಳನ್ನ ಹಿರಿಯೂರು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮೂಲದ ಮುರಿಗೆಪ್ಪ, ಹಾಸನ ಮೂಲದ ರಜನಿ, ಚಿದಾನಂದ, ತಮಿಳುನಾಡಿನ ಅರುಳ್ ರೇಗನ್ ಮತ್ತು ಹೇದರ್ ಬಂಧಿತ ಆರೋಪಿಗಳು.
ಇವರು ಎಸಿಬಿ ಅಧಿಕಾರಿಗಳೆಂದು ಹೇಳಿ ನಂಬಿಸಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿರುವ ಎಲ್.ಟಿ.ರಂಗಪ್ಪಗೆ ವಂಚನೆ ಮಾಡಿದ್ದಾರೆ. 1ಲಕ್ಷ 24 ಸಾವಿರ ರೂಪಾಯಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾರೆ. ಬಂಧಿತರಿಂದ ಮೊಬೈಲ್, ಚಿನ್ನಾಭರಣ, 52 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 8:28 am, Fri, 27 December 19