ಈ ಸಲದ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ

ಜಗತ್ತಿನಾದ್ಯಂತ ಕೊವಿಡ್-19 ಸೃಷ್ಟಿಸಿರುವ ಅವಾಂತರದಿಂದಾಗಿ ಮತ್ತೊಂದು ಟೂರ್ನಮೆಂಟ್ ಮುಂದೂಡಲ್ಪಟ್ಟಿದೆ. ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್​ನ ಆಯೋಜಕರು ಈ ವರ್ಷದ ಟೂರ್ನಮೆಂಟನ್ನು ಮುಂದಿನ ವರ್ಷ ನಡೆಸಲು ನಿರ್ಧರಿಸಿದ್ದಾರೆ.

ಈ ಸಲದ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ

Updated on: Nov 27, 2020 | 9:44 PM

ಈ ವರ್ಷ ನಡೆಯಬೇಕಿದ್ದ ಆರನೇ ಆವೃತ್ತಿಯ ಪ್ರತಿಷ್ಠಿತ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಕೊವಿಡ್​-19 ಮಹಾಮಾರಿಯು ಭಾರತದಲ್ಲಿ ಸೃಷ್ಟಿಸಿರುವ ಭಯಾನಕ ವಾತಾವಾರಣದ ಹಿನ್ನೆಲೆಯಲ್ಲಿ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಕಳೆದ 5 ವರ್ಷಗಳಿಂದ ನಡೆಯುತ್ತಾ ಬಂದಿರುವ ಪಿಬಿಎಲ್ ಟೂರ್ನಿಯು ವಿಶ್ವದಲ್ಲೇ ಅತ್ಯಂತ ಶ್ರೀಮಂತ ಬ್ಯಾಡ್ಮಿಂಟನ್ ಟೂರ್ನಿ ಎನಿಸಿಕೊಂಡಿದೆ.

ಪಸಕ್ತ ವರ್ಷದ ಟೂರ್ನಿಯು ಡಿಸೆಂಬರ್ ಕೊನೆಯ ವಾರದಲ್ಲಿ ದೆಹಲಿ ಮತ್ತು ಪುಣೆಯಲ್ಲಿ ನಡೆಯಬೇಕಿತ್ತು. ಆದರೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ಪಿಬಿಎಲ್ ಟೂರ್ನಿಯನ್ನು ಆಯೋಜಿಸಲು ಅಧಿಕೃತ ಪರವಾನಗಿ ಹೊಂದಿರುವ ಸ್ಪೋರ್ಟ್ಸ್​ಲಿವ್ ಸಂಸ್ಥೆಯು ಇಂದು ಮಾಧ್ಯಮ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿ, ಕೊರೊನಾ ಸೋಂಕಿನಿಂದಾಗಿ ಈ ಸಲದ ಪಂದ್ಯಾವಳಿಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆಯೆಂದು ತಿಳಿಸಿದೆ.

ಮುಂದಿನ ವರ್ಷದಿಂದ ಕೇವಲ ಪಿಬಿಎಲ್ ಮಾತ್ರವಲ್ಲ ಹಲವಾರು ಕ್ರೀಡಾ ಈವೆಂಟ್​​ಗಳು ನಡೆಯಲಿವೆ. ಹಾಗಾಗಿ ಭಾರತೀಯ ಮತ್ತು ವಿದೇಶೀ ಆಟಗಾರರಿಗೆ ಕೊವಿಡ್-19 ಸೋಂಕಿನ ಭೀತಿಯಲ್ಲಿ ಆಡಿಸುವುದು ಬೇಡವೆಂದು ಆಯೋಜಕರು ನಿರ್ಧರಿಸಿದ್ದಾರೆ.