BBMP ಯಲ್ಲಿ ‘ಮೇಯರ್ ಮುತ್ತಣ್ಣ’ ಪುತ್ಥಳಿ ಅನಾವರಣ : ಫಂಕ್ಷನ್ನಲ್ಲಿ ಶಿವಣ್ಣ ಹಾಡು-ಡ್ಯಾನ್ಸ್ ಮೋಡಿ!
BBMP ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಅದ್ದೂರಿ ಸಮಾರಂಭದಲ್ಲಿ ಡಾ.ರಾಜ್ಕುಮಾರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.

ಬೆಂಗಳೂರು: BBMP ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಅದ್ದೂರಿ ಸಮಾರಂಭದಲ್ಲಿ ಡಾ.ರಾಜ್ಕುಮಾರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. ನಟಸಾರ್ವಭೌಮರ ಸುಪುತ್ರ ನಟ ಶಿವರಾಜ್ ಕುಮಾರ್ ಪುತ್ಥಳಿ ಅನಾವರಣಗೊಳಿಸಿದರು.
ಒಬ್ಬ ಸಾಮನ್ಯ ಹಳ್ಳಿ ಹೈದ ಛಲವೆತ್ತಿ ಬೆಂಗಳೂರು ಮಹಾನಗರದ ಮೇಯರ್ ಆಗಿ ಯಶಸ್ಸು ಕಾಣುವ ಮೇಯರ್ ಮುಟ್ಟಣ್ಣ ಸಿನಿಮಾದಲ್ಲಿ ಅಣ್ಣಾವ್ರ ಮನೋಜ್ಞ ನಟನೆ ಮತ್ತು ಮುಗ್ಧತೆ ಎಲ್ಲರ ಮನಗೆದ್ದಿತ್ತು. ಅದೇ ಚಿತ್ರದಲ್ಲಿ ರಾಜ್ಕುಮಾರ್ರ ಪಾತ್ರದ ರೂಪದಲ್ಲಿರುವ ಪುತ್ಥಳಿಯೊಂದನ್ನು ಬಿಬಿಎಂಪಿ ನೌಕರರ ಸಂಘದಿಂದ ಇಂದು ಲೋಕಾರ್ಪಣೆ ಮಾಡಲಾಯಿತು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಜೊತೆ ಪುತ್ಥಳಿ ಅನಾವರಣಗೊಳಿಸಿದ ಶಿವಣ್ಣ ಬಳಿಕ ಸಂಘದ ಪ್ರಮುಖ ಸದಸ್ಯರನ್ನು ಸನ್ಮಾನಿಸಿದರು. ಜೊತೆಗೆ, ನೆರೆದಿದ್ದವರು ಕೋರಿಕೆ ಮೇರೆಗೆ ಎರಡು ಹಾಡುಗಳನ್ನು ಸಹ ಹಾಡಿದರು. ಆದರೆ, ನಮ್ಮ ಕರುನಾಡ ಚಕ್ರವರ್ತಿ ಅಷ್ಟಕ್ಕೇ ನಿಲ್ಲದೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿ ಎಲ್ಲರ ಮನಗೆದ್ದರು.
Published On - 8:24 pm, Fri, 27 November 20