ಚಂದ್ರಗಿರಿ ಬಳಿ ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡಿಗೆ ಬಲಿ

ಕೊಡಗು: ಬೇಟೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ, ಬೇಟೆಗಾರ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚಂದ್ರಗಿರಿ ಗ್ರಾಮದ ಉದಯಗಿರಿ ಕಾಫಿ ತೋಟದಲ್ಲಿ ಈ ಘಟನೆ ಸಂಭವಿಸಿದ್ದು, ಮಡಿಕೇರಿ ತಾಲೂಕಿನ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಕೆ. ಶಿವಬೋಪಣ್ಣ(37) ಮೃತ ದುರ್ದೈವಿ ಎನ್ನಲಾಗಿದೆ. ತಡರಾತ್ರಿ ಮಕ್ಕಂದೂರು ಬಳಿಯ ಉದಯಗಿರಿ ಕಾಫಿ ತೋಟದಲ್ಲಿ ಬೇಟೆಗೆಂದು, ಕೆ.ಕೆ. ಶಿವ ಬೋಪಣ್ಣ, ಶರಣ್ ಹಾಗೂ ದೇವಯ್ಯ ಬೇಟೆಗೆಂದು ತೆರಳಿದ್ದಾರೆ. ಈ ವೇಳೆ […]

ಚಂದ್ರಗಿರಿ ಬಳಿ ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡಿಗೆ ಬಲಿ

Updated on: Aug 15, 2020 | 10:29 AM

ಕೊಡಗು: ಬೇಟೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ, ಬೇಟೆಗಾರ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚಂದ್ರಗಿರಿ ಗ್ರಾಮದ ಉದಯಗಿರಿ ಕಾಫಿ ತೋಟದಲ್ಲಿ ಈ ಘಟನೆ ಸಂಭವಿಸಿದ್ದು, ಮಡಿಕೇರಿ ತಾಲೂಕಿನ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಕೆ. ಶಿವಬೋಪಣ್ಣ(37) ಮೃತ ದುರ್ದೈವಿ ಎನ್ನಲಾಗಿದೆ.

ತಡರಾತ್ರಿ ಮಕ್ಕಂದೂರು ಬಳಿಯ ಉದಯಗಿರಿ ಕಾಫಿ ತೋಟದಲ್ಲಿ ಬೇಟೆಗೆಂದು, ಕೆ.ಕೆ. ಶಿವ ಬೋಪಣ್ಣ, ಶರಣ್ ಹಾಗೂ ದೇವಯ್ಯ ಬೇಟೆಗೆಂದು ತೆರಳಿದ್ದಾರೆ. ಈ ವೇಳೆ ಮಡಿಕೇರಿಯ ರಾಜೇಶ್ವರಿ ನಗರದ ದೇವಯ್ಯ ಎಂಬುವವರ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು, ಶಿವ ಬೋಪಯ್ಯ ಹಾಗೂ ಶರಣ್ ಎಂಬುವವರಿಗೆ ತಗುಲಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಿವ ಬೋಪಯ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದ ಶರಣ್ ಎಂಬುವವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ನಂತರ ಗುಂಡು ಹಾರಿಸಿದ್ದ ದೇವಯ್ಯ ಪೊಲೀಸರಿಗೆ ಶರಣಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.