ಸುಟ್ಟು ಕರಕಲಾದ ಠಾಣೆ-ಶಾಸಕರ ಮನೆಯ ಎದುರೇ ದೇಶಪ್ರೇಮ ಮೆರೆದ DJ ಹಳ್ಳಿ ನಿವಾಸಿಗಳು
ಬೆಂಗಳೂರು: ಗಲಭೆಯ ನಂತರ ಶಾಂತವಾಗಿರುವ ಡಿಜೆ ಹಳ್ಳಿಯಲ್ಲೂ 74ನೇ ಸ್ವಾತಂತ್ರ್ಯೋತ್ಸವವನ್ನ ಆಚರಿಸಲಾಯಿತು. ಗಲಾಟೆಯಲ್ಲಿ ಅತಿಹೆಚ್ಚು ಹಾನಿಗೆ ಒಳಗಾಗಿ ದಳ್ಳುರಿಯಲ್ಲಿ ಸುಟ್ಟು ಕರಕಲಾದ ಠಾಣೆಯಲ್ಲೂ ಸ್ವಾತಂತ್ರ್ಯೋತ್ಸವ ಸಮಾರಂಭವನ್ನ ನೆರವೇರಿಸಲಾಯಿತು. ಡಿಜೆ ಹಳ್ಳಿ ಪೊಲೀಸ್ ಠಾಣೆ ಅಂಗಳವನ್ನ ಸ್ವಚ್ಛಗೊಳಿಸಿದ ಸಿಬ್ಬಂದಿ ಹಾನಿಯಾಗಿದ್ದ ಧ್ವಜ ಸ್ತಂಭವನ್ನೂ ಸಹ ಸಿದ್ಧಪಡಿಸಿ ಧ್ವಜಾರೋಹಣ ನೆರವೇರಿಸಿದರು. ಇತ್ತ ಕಾವಲ್ ಭೈರಸಂದ್ರದಲ್ಲಿ ಸಹ ಜನರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಗಲಭೆಯಲ್ಲಿ ಹಾನಿಗೀಡಾದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆಯ ಎದುರು ರಸ್ತೆಯಲ್ಲಿ ಧ್ವಜಾರೋಹಣ ಮಾಡಲಾಯಿತು. ಗಲಭೆಯಿಂದ ಕಹಿಯ ನಡುವೆಯೂ […]
ಬೆಂಗಳೂರು: ಗಲಭೆಯ ನಂತರ ಶಾಂತವಾಗಿರುವ ಡಿಜೆ ಹಳ್ಳಿಯಲ್ಲೂ 74ನೇ ಸ್ವಾತಂತ್ರ್ಯೋತ್ಸವವನ್ನ ಆಚರಿಸಲಾಯಿತು. ಗಲಾಟೆಯಲ್ಲಿ ಅತಿಹೆಚ್ಚು ಹಾನಿಗೆ ಒಳಗಾಗಿ ದಳ್ಳುರಿಯಲ್ಲಿ ಸುಟ್ಟು ಕರಕಲಾದ ಠಾಣೆಯಲ್ಲೂ ಸ್ವಾತಂತ್ರ್ಯೋತ್ಸವ ಸಮಾರಂಭವನ್ನ ನೆರವೇರಿಸಲಾಯಿತು.
ಡಿಜೆ ಹಳ್ಳಿ ಪೊಲೀಸ್ ಠಾಣೆ ಅಂಗಳವನ್ನ ಸ್ವಚ್ಛಗೊಳಿಸಿದ ಸಿಬ್ಬಂದಿ ಹಾನಿಯಾಗಿದ್ದ ಧ್ವಜ ಸ್ತಂಭವನ್ನೂ ಸಹ ಸಿದ್ಧಪಡಿಸಿ ಧ್ವಜಾರೋಹಣ ನೆರವೇರಿಸಿದರು.
ಇತ್ತ ಕಾವಲ್ ಭೈರಸಂದ್ರದಲ್ಲಿ ಸಹ ಜನರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಗಲಭೆಯಲ್ಲಿ ಹಾನಿಗೀಡಾದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆಯ ಎದುರು ರಸ್ತೆಯಲ್ಲಿ ಧ್ವಜಾರೋಹಣ ಮಾಡಲಾಯಿತು. ಗಲಭೆಯಿಂದ ಕಹಿಯ ನಡುವೆಯೂ ಸ್ಥಳಿಯರೆಲ್ಲಾ ಸೇರಿ ಒಟ್ಟಾಗಿ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಿದರು.