ಕೊರೊನಾ ಸಂಕಷ್ಟದಲ್ಲೂ ಲಂಚಕ್ಕೆ ಕೈಚಾಚಿದ್ದ ಅಧಿಕಾರಿ ACB ಬಲೆಗೆ

| Updated By:

Updated on: May 26, 2020 | 4:36 PM

ಗದಗ: ಕೊರೊನಾ ಸಂಕಷ್ಟದ ಸಮಯದಲ್ಲೂ ಲಂಚಕ್ಕೆ ಕೈಚಾಚಿದ್ದ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. 40 ಸಾವಿರ ಲಂಚ ಪಡೆಯುವಾಗ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಾಕೀರ್ ಹುಸೇನ್ ಕುಕನೂರ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. 3 ಲಕ್ಷ ಸಬ್ಸಿಡಿ ಹಣದ ಚೆಕ್ ನೀಡಲು 40 ಸಾವಿರ ಹಣಕ್ಕೆ ಅಧಿಕಾರಿ ಬೇಡಿಕೆ ಇಟ್ಟಿದ್ದ. ನರಗುಂದ ಪಟ್ಟಣದ ಫಾರೂಕ್ ಅಹಮದ್ ದೂರಿನ ಮೇರೆಗೆ ಎಸಿಬಿ ಡಿವೈಎಸ್​ಪಿ ವಾಸುದೇವ ರಾಮ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಜಾಕೀರ್ ಹುಸೇನ್ ಹಾಗೂ ಕಂಪ್ಯೂಟರ್ ಆಪರೇಟರ್ […]

ಕೊರೊನಾ ಸಂಕಷ್ಟದಲ್ಲೂ ಲಂಚಕ್ಕೆ ಕೈಚಾಚಿದ್ದ ಅಧಿಕಾರಿ ACB ಬಲೆಗೆ
Follow us on

ಗದಗ: ಕೊರೊನಾ ಸಂಕಷ್ಟದ ಸಮಯದಲ್ಲೂ ಲಂಚಕ್ಕೆ ಕೈಚಾಚಿದ್ದ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. 40 ಸಾವಿರ ಲಂಚ ಪಡೆಯುವಾಗ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಾಕೀರ್ ಹುಸೇನ್ ಕುಕನೂರ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

3 ಲಕ್ಷ ಸಬ್ಸಿಡಿ ಹಣದ ಚೆಕ್ ನೀಡಲು 40 ಸಾವಿರ ಹಣಕ್ಕೆ ಅಧಿಕಾರಿ ಬೇಡಿಕೆ ಇಟ್ಟಿದ್ದ. ನರಗುಂದ ಪಟ್ಟಣದ ಫಾರೂಕ್ ಅಹಮದ್ ದೂರಿನ ಮೇರೆಗೆ ಎಸಿಬಿ ಡಿವೈಎಸ್​ಪಿ ವಾಸುದೇವ ರಾಮ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಜಾಕೀರ್ ಹುಸೇನ್ ಹಾಗೂ ಕಂಪ್ಯೂಟರ್ ಆಪರೇಟರ್ ಅಕ್ಬರ್ ಕೂಡಾ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಹಲವಾರು ಫಲಾನುಭವಿಗಳ ಚೆಕ್​ಗಳು ನೀಡದೇ ಕಚೇರಿಯಲ್ಲಿ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.