ಗುರು ರಾಘವೇಂದ್ರ ಸೌಹಾರ್ದ ಸೊಸೈಟಿ ಮೇಲೆ ACB ದಾಳಿ, ನಕಲಿ ಅಕೌಂಟ್ ಜಾಲ ಪತ್ತೆ

|

Updated on: Jun 18, 2020 | 4:13 PM

ಬೆಂಗಳೂರು: ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೇಲೆ ಎಸಿಬಿ ದಾಳಿ ನಡೆಸಿದೆ. ಎಸಿಬಿ ಡಿವೈಎಸ್ಪಿ ತಮ್ಮಯ್ಯ,ಬಾಲಕೃಷ್ಣ ಮತ್ತು ಖಾನ್ ನೇತೃತ್ವದ ತಂಡ ಏಕಕಾಲದಲ್ಲಿ 5 ಕಡೆ ದಾಳಿ ನಡೆಸಿದೆ. ಮುಖ್ಯ ಕಚೇರಿ ಮತ್ತು ಬ್ಯಾಂಕ್​ನಲ್ಲಿರುವ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಗುರು ರಾಘವೇಂದ್ರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವಿರುದ್ಧ ಬರೋಬ್ಬರಿ 1400 ಕೋಟಿಗಳ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ಏಕಾ ಏಕಿ ದಾಳಿ ನಡೆಸಿ ಪರಿಶೀಲನೆ […]

ಗುರು ರಾಘವೇಂದ್ರ ಸೌಹಾರ್ದ ಸೊಸೈಟಿ ಮೇಲೆ ACB ದಾಳಿ, ನಕಲಿ ಅಕೌಂಟ್ ಜಾಲ ಪತ್ತೆ
ಗುರು ರಾಘವೇಂದ್ರ ಬ್ಯಾಂಕ್
Follow us on

ಬೆಂಗಳೂರು: ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೇಲೆ ಎಸಿಬಿ ದಾಳಿ ನಡೆಸಿದೆ. ಎಸಿಬಿ ಡಿವೈಎಸ್ಪಿ ತಮ್ಮಯ್ಯ,ಬಾಲಕೃಷ್ಣ ಮತ್ತು ಖಾನ್ ನೇತೃತ್ವದ ತಂಡ ಏಕಕಾಲದಲ್ಲಿ 5 ಕಡೆ ದಾಳಿ ನಡೆಸಿದೆ. ಮುಖ್ಯ ಕಚೇರಿ ಮತ್ತು ಬ್ಯಾಂಕ್​ನಲ್ಲಿರುವ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಗುರು ರಾಘವೇಂದ್ರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವಿರುದ್ಧ ಬರೋಬ್ಬರಿ 1400 ಕೋಟಿಗಳ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ಏಕಾ ಏಕಿ ದಾಳಿ ನಡೆಸಿ ಪರಿಶೀಲನೆ ಮಾಡಿದೆ.

ಬ್ಯಾಂಕ್ ನಲ್ಲಿ ಭಾರಿ ಪ್ರಮಾಣದ ನಕಲಿ ಅಕೌಂಟ್​ಗಳು ಪತ್ತೆ
ಎಸಿಬಿ ದಾಳಿ ಸಂದರ್ಭದಲ್ಲಿ 892 ಕೋಟಿ ರೂ ಭಾರೀ ಪ್ರಮಾಣದ ಅವ್ಯವಹಾರ ಪತ್ತೆಯಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 24 ಮಂದಿ ಈ ಅವ್ಯವಹಾರದಲ್ಲಿ ಶಾಮೀಲು ಆಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಎಸಿಬಿ ದಾಳಿ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷ ಡಾ. ರಾಮಕೃಷ್ಣ, ಮಾಜಿ ಸಿಇಓ ವಾಸುದೇವ್ ಮಯ್ಯ ಪರಾರಿಯಾಗಿದ್ದಾರೆ.

ಅಸ್ಥಿತ್ವದಲ್ಲೇ ಇರದ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಅಕೌಂಟ್ ಮಾಡಿಸಿ ವಂಚಿಸಿದ್ದಾರೆ. ಸುಮಾರು 60 ನಕಲಿ ಅಕೌಂಟ್​ ಗಳಲ್ಲಿ 149 ಕೋಟಿ ಠೇವಣಿ ಮಾಡಲಾಗಿದೆ. 1602 ನಕಲಿ ಖಾತೆಯಲ್ಲಿ 701 ಕೋಟಿ ರೂ ವಹಿವಾಟು ನಡೆದಿದೆ. ಬಹುತೇಕ ಖಾತೆಗಳಿಗೆ ವ್ಯಕ್ತಿಗಳು, ದಾಖಲಾತಿಗಳೇ ಇಲ್ಲ. ನಕಲಿ ಅಕೌಂಟ್​ಗಳನ್ನ ಹೊಂದಿರುವ ವ್ಯಕ್ತಿಗಳು ಪತ್ತೆಯಾಗಿಲ್ಲ. ಹಾಗೂ ನಕಲಿ ಅಕೌಂಟ್​ ತೆರೆಯಲು ಸೂಕ್ತ ದಾಖಲಾತಿಗಳನ್ನೂ ನೀಡಿಲ್ಲ.

ಆರ್ ಬಿ ಐ ಗೆ ಸುಳ್ಳು ಲೆಕ್ಕ ನೀಡಿರುವ ಆಡಳಿತ ಮಂಡಳಿ
ಇಲ್ಲಿ ಆಡಳಿತ ಮಂಡಳಿ ಆರ್​ಬಿಐ ಗೈಡ್ ಲೈನ್ಸ್​ಗಳನ್ನು ಗಾಳಿಗೆ ತೂರಿದೆ. ಶೇ 30ರಷ್ಟು ಸಾಲ ವಸೂಲಾತಿ ಬಾಕಿಯಿದ್ದರೂ ಶೇ 1 ಎಂದು ತೋರಿಸಲಾಗಿದೆ. ಬ್ಯಾಂಕ್ ನ 3300 ಗ್ರಾಹಕರಿಗೂ ಮಕ್ಮಲ್ ಟೋಪಿ ಹಾಕಲಾಗಿದೆ. ಎಸಿಬಿಯಿಂದ ದಾಖಲೆ ಪರಿಶೀಲನೆ ವೇಳೆ ಈ ಅವ್ಯವಹಾರ ಬಹಿರಂಗವಾಗಿದೆ.

Published On - 10:58 am, Thu, 18 June 20