ಪಾಕಿಸ್ತಾನ ಪರ ಘೋಷಣೆ ಪ್ರಕರಣ; ಬಂಧಿತರಿಗೆ ಮೈಸೂರು ಪಾಕ್ ತಿನ್ನಿಸಿ ಜೈಲಿಗೆ ಕಳಿಸಲಾಗಿದೆ: ಆರ್ ಅಶೋಕ
ಬಂಧಿತರ ಬಗ್ಗೆ ಮಾತಾಡುವಾಗ ಅಶೋಕ, ಅವರಿಗೆ ಮೈಸೂರು ಪಾಕ್ ಕೊಟ್ಟು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಅನ್ನುತ್ತಾರೆ. ಅವರು ಏನು ಹೇಳಹೊರಟಿದ್ದಾರೆ ಅಂತ ನಿಜಕ್ಕೂ ಅರ್ಥವಾಗಲ್ಲ. ಶಂಕಿತರ ವಿಚಾರಣೆ ನಡೆಯುತ್ತಿದ್ದಾಗ, ಅವರಿಗೆ ಬಿರಿಯಾನಿ ತಿನ್ನಿಸಿ ವಾಪಸ್ಸು ಕಳಿಸಲಾಗಿದೆ ಎಂದು ಕೆಲ ಬಿಜೆಪಿ ನಾಯಕರು ಹೇಳಿದ್ದರು. ಈಗ ಅಶೋಕ ಆವರು ಬಂಧಿತರಿಗೆ ಮೈಸೂರು ಪಾಕ್ ತಿನ್ನಿಸಿ ನ್ಯಾಯಾಂಗ ಕಸ್ಟಡಿಗೆ ಕಳಿಸಲಾಗಿದೆ ಎನ್ನುತ್ತಾರೆ.
ಕಲಬುರಗಿ: ವಿರೋಧಪಕ್ಷದ ನಾಯಕ ಆರ್ ಅಶೋಕ (R Ashoka) ಕಲಬುರಗಿ ಜಿಲ್ಲೆ ಪ್ರವಾಸದಲ್ಲಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ವಿಧಾನ ಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ (pro Pakistan slogan) ಕೂಗಿದ ಆರೋಪಿಗಳನ್ನು (accused) ಬಂಧಿಸಲಾಗಿದೆ ಮತ್ತು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು. ಬಂಧಿತರ ಬಗ್ಗೆ ಮಾತಾಡುವಾಗ ಅಶೋಕ, ಅವರಿಗೆ ಮೈಸೂರು ಪಾಕ್ ಕೊಟ್ಟು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಅನ್ನುತ್ತಾರೆ. ಅವರು ಏನು ಹೇಳಹೊರಟಿದ್ದಾರೆ ಅಂತ ನಿಜಕ್ಕೂ ಅರ್ಥವಾಗಲ್ಲ. ಶಂಕಿತರ ವಿಚಾರಣೆ ನಡೆಯುತ್ತಿದ್ದಾಗ, ಅವರಿಗೆ ಬಿರಿಯಾನಿ ತಿನ್ನಿಸಿ ವಾಪಸ್ಸು ಕಳಿಸಲಾಗಿದೆ ಎಂದು ಕೆಲ ಬಿಜೆಪಿ ನಾಯಕರು ಹೇಳಿದ್ದರು. ಈಗ ಅಶೋಕ ಆವರು ಬಂಧಿತರಿಗೆ ಮೈಸೂರು ಪಾಕ್ ತಿನ್ನಿಸಿ ನ್ಯಾಯಾಂಗ ಕಸ್ಟಡಿಗೆ ಕಳಿಸಲಾಗಿದೆ ಎನ್ನುತ್ತಾರೆ.
ಇದು ಗಂಭೀರವಾದ ಪ್ರಕರಣ, ವಿಧಾನ ಸೌಧದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದನ್ನು ಯಾವ ಕಾರಣಕ್ಕೂ ಸಹಿಸಲಾಗದು. ವಿಧಾನ ಸೌಧವೇ ಅಂತಲ್ಲ, ನಾಡಿನ ಯಾವುದೇ ಭಾಗದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದರೆ ಅದು ಅತ್ಯಂತ ಕಠಿಣ ಶಿಕ್ಷಾರ್ಹ ಅಪರಾಧ. ಹಾಗಾಗಿ ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ಗಂಭೀರವಾಗಿ ತರಾಟೆಗೆ ತೆಗೆದುಕೊಳ್ಳಲಿ. ಮೈಸೂರು ಪಾಕ್ ತಿನ್ನಿಸಿದ್ದಾರೆ ಬಿರಿಯಾನಿ ಕೊಡಿಸಿದ್ದಾರೆ ಅಂತ ಹೇಳುತ್ತಿದ್ದರೆ, ಅದು ಪ್ರಕರಣದ ಗಾಂಭೀರ್ಯವನ್ನು ಕಡಿಮೆ ಮಾಡುವ ಹೇಳಿಕೆಗಳು ಅನಿಸುತ್ತವೆ. ಮುಂದುವರಿದು ಮಾತಾಡುವ ಅಶೋಕ, ಸರ್ಕಾರ ಇಂಥ ಬೇಜವಾಬ್ದಾರಿ ನಡವಳಿಕೆಯಿಂದ ರಾಜ್ಯಕ್ಕೆ ದೊಡ್ಡ ಅನಾಹುತ ಎದುರಾದರೆ ಅಚ್ಚರಿಯಿಲ್ಲ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ