ಮೈಸೂರು ಮೃಗಾಲಯಕ್ಕೆ ಆಫ್ರಿಕಾದಿಂದ ಬಂದ ಹೊಸ ಅತಿಥಿ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿ ಆಗಮಿಸಿದ್ದಾರೆ. ಕೊರೊನಾ ಆತಂಕದ ನಡುವೆ ಹೊಸ ಅತಿಥಿ ಆಗಮನ ಕೊಂಚ ಸಂತೋಷ ನೀಡಿದೆ. ಸಿಂಗಪೂರ್ ಮಾರ್ಗವಾಗಿ ಬಂದ ಚೀತಾ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಆಫ್ರಿಕನ್ ಚೀತಾ ತರಲಾಗಿದೆ. ಇನ್ನುಮುಂದೆ ಆಫ್ರಿಕನ್ ಚೀತಾ ಕೂಡ ವೀಕ್ಷಕರನ್ನು ರಂಜಿಸಲಿದೆ, ಹೊಸ ಪ್ರಾಣಿಯ ಬಗ್ಗೆ ತಿಳಿಯಲಿದೆ. ಪ್ರಾಣಿ ವಿನಿಮಯ ಪದ್ದತಿ ಪ್ರಕಾರ ದಕ್ಷಿಣ ಆಫ್ರಿಕಾದಿಂದ ಸಿಂಗಪೂರ್ ಮಾರ್ಗವಾಗಿ ಚೀತಾವನ್ನು ತರಲಾಗಿದೆ. ಕ್ವಾರಂಟೈನ್ ಅವಧಿ ಬಳಿಕ ಸಾರ್ವಜನಿಕ ವೀಕ್ಷಣೆಗೆ ಚೀತಾ […]

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿ ಆಗಮಿಸಿದ್ದಾರೆ. ಕೊರೊನಾ ಆತಂಕದ ನಡುವೆ ಹೊಸ ಅತಿಥಿ ಆಗಮನ ಕೊಂಚ ಸಂತೋಷ ನೀಡಿದೆ.
ಸಿಂಗಪೂರ್ ಮಾರ್ಗವಾಗಿ ಬಂದ ಚೀತಾ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಆಫ್ರಿಕನ್ ಚೀತಾ ತರಲಾಗಿದೆ. ಇನ್ನುಮುಂದೆ ಆಫ್ರಿಕನ್ ಚೀತಾ ಕೂಡ ವೀಕ್ಷಕರನ್ನು ರಂಜಿಸಲಿದೆ, ಹೊಸ ಪ್ರಾಣಿಯ ಬಗ್ಗೆ ತಿಳಿಯಲಿದೆ. ಪ್ರಾಣಿ ವಿನಿಮಯ ಪದ್ದತಿ ಪ್ರಕಾರ ದಕ್ಷಿಣ ಆಫ್ರಿಕಾದಿಂದ ಸಿಂಗಪೂರ್ ಮಾರ್ಗವಾಗಿ ಚೀತಾವನ್ನು ತರಲಾಗಿದೆ. ಕ್ವಾರಂಟೈನ್ ಅವಧಿ ಬಳಿಕ ಸಾರ್ವಜನಿಕ ವೀಕ್ಷಣೆಗೆ ಚೀತಾ ಲಭ್ಯವಾಗಲಿದೆ ಎಂದು ಮೃಗಾಲಯ ತಿಳಿಸಿದೆ.