Aishwarya – Amartya Reception: ಇಂದು ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಆರತಕ್ಷತೆ, ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಹಲವರಿಗೆ ಆಹ್ವಾನ
Aishwarya And Amartya Hedge Reception | ಡಿಕೆಶಿ ಪುತ್ರಿ ಐಶ್ವರ್ಯಾ ಹಾಗೂ ಅಮರ್ತ್ಯ ಅದ್ಧೂರಿ ಆರತಕ್ಷತೆ ನಡೆಯಲಿದೆ. ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಇಂದು ಸಂಜೆ ಆರತಕ್ಷತೆ ನಡೆಯಲಿದ್ದು, ಕುಟುಂಬಸ್ಥರು, ಗಣ್ಯರು ಸೇರಿದಂತೆ 1500 ಜನ ಭಾಗಿಯಾಗಲಿದ್ದಾರೆ.
ದೇವನಹಳ್ಳಿ: ಇಂದು ಡಿಕೆಶಿ ಪುತ್ರಿ ಐಶ್ವರ್ಯಾ ಹಾಗೂ ಅಮರ್ತ್ಯ ಅದ್ಧೂರಿ ಆರತಕ್ಷತೆ ನಡೆಯಲಿದೆ. ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಇಂದು ಸಂಜೆ ಆರತಕ್ಷತೆ ನಡೆಯಲಿದ್ದು, ಕುಟುಂಬಸ್ಥರು, ಗಣ್ಯರು ಸೇರಿದಂತೆ 1500 ಜನ ಭಾಗಿಯಾಗಲಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಜಸ್ಥಾನ, ಪುದುಚೇರಿ ಸಿಎಂಗಳು ಸೇರಿ ಹಲವರಿಗೆ ಆಹ್ವಾನ ನೀಡಲಾಗಿದೆ.
ವಿಐಪಿ, ವಿವಿಐಪಿಗಳು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಎಲ್ಲರಿಗೂ ಬಾರ್ ಕೋಡ್ ನೀಡಲಾಗಿದೆ. ರೆಸಾರ್ಟ್ ನಲ್ಲಿ ಬಾರ್ ಕೋಡ್ ಸ್ಕ್ಯಾನ್ ಮಾಡಿದ ವೇಳೆ ಒಟಿಪಿ ಬಂದ್ರೆ ಮಾತ್ರ ಎಂಟ್ರಿ ಇರಲಿದೆ. ರೆಸಾರ್ಟ್ ಸುತ್ತಮುತ್ತ ಪೊಲೀಸ್ ಮತ್ತು ಖಾಸಗಿ ಭದ್ರತೆ ಒದಗಿಸಲಾಗಿದೆ. 200 ಜನ ಪ್ರಸಿದ್ಧ ಬಾಣಸಿಗರಿಂದ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ವಿವಿಧ ಬಗೆಯ ಭೋಜನ ತಯಾರಿಸಲಾಗುತ್ತಿದೆ.
ಡಿಕೆಶಿ ಮಗಳ ಆರತಕ್ಷತೆಗೆ ಸಕಲ ಸಿದ್ಧತೆ ಆರತಕ್ಷತೆಗಾಗಿ ಸಂಪೂರ್ಣ ರೆಸಾರ್ಟ್ ಬುಕ್ ಮಾಡಿದ್ದು ರೆಸಾರ್ಟ್ನ ಒಳ ಭಾಗದಲ್ಲಿ ಬಣ್ಣ ಬಣ್ಣದ ಹೂ ಮತ್ತು ದೀಪಗಳಿಂದ ವೇದಿಕೆ ಸಿಂಗರಿಸಲಾಗಿದೆ. ಆರತಕ್ಷತೆಯಲ್ಲಿ ಗಣ್ಯರು ವಧು ವರರನ್ನ ಆಶೀರ್ವದಿಸಲು ಗಾರ್ಡನ್ ಏರಿಯಾದಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಂಜೆ ಓಪನ್ ಗಾರ್ಡನ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಸಂಜೆ ವಿಶೇಷ ದೀಪಾಲಂಕಾರದೊಂದಿಗೆ ಸಂಗೀತದ ಮಧ್ಯೆ ಕಾರ್ಯಕ್ರಮ ನಡೆಯಲಿದೆ.
Published On - 8:44 am, Wed, 17 February 21