AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ಸಕಲೇಶಪುರದಲ್ಲಿ ಪ್ರಾರಂಭ; ಫುಲ್​ ಹ್ಯಾಪಿ ಮೂಡ್​ನಲ್ಲಿದ್ದಾರೆ ಅಜಯ್​ ರಾವ್, ರಚಿತಾ ರಾಮ್​

ನಟ ಅಜಯ್​ ರಾವ್ (Ajay Rao) ​ ಮತ್ತು ರಚಿತಾ ರಾಮ್ (Rachita Ram)​ ತುಂಬ ಎಕ್ಸೈಟ್​ ಆಗಿದ್ದು love you racchu ಶೂಟಿಂಗ್ ನಡೆಯುತ್ತಿರುವ ಸಕಲೇಶಪುರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ಸಕಲೇಶಪುರದಲ್ಲಿ ಪ್ರಾರಂಭ; ಫುಲ್​ ಹ್ಯಾಪಿ ಮೂಡ್​ನಲ್ಲಿದ್ದಾರೆ ಅಜಯ್​ ರಾವ್, ರಚಿತಾ ರಾಮ್​
ಲವ್​ ಯೂ ರಚ್ಚು ಸಿನಿಮಾದಲ್ಲಿ ನಟಿಸುತ್ತಿರುವ ರಚಿತಾ ರಾಮ್​, ಅಜಯ್​ ರಾವ್​
Lakshmi Hegde
| Edited By: |

Updated on: Feb 10, 2021 | 7:33 PM

Share

ಗುಳಿಕೆನ್ನೆ ಚೆಲುವೆ ರಚಿತಾ ರಾಮ್​, ನಟ ಅಜಯ್​ ರಾವ್​ ಜತೆ ಒಂದು ಸಿನಿಮಾ ಮಾಡುತ್ತಿದ್ದಾರೆ ಎಂಬ ವಿಷಯ ಹಿಂದೆಯೇ ಬಹಿರಂಗವಾಗಿದೆ. ಆ ಸಿನಿಮಾದ ಹೆಸರು ಲವ್​ ಯೂ ರಚ್ಚು (love you racchu) ಎಂಬುದು ವಿಶೇಷ. ಇದೊಂದು ರೊಮ್ಯಾಂಟಿಕ್​, ಥ್ರಿಲ್ಲರ್​ ಸಿನಿಮಾ ಎಂದು ಹೇಳಲಾಗಿದ್ದು, ಸದ್ಯ ಶೂಟಿಂಗ್​ ಕೂಡ ಶುರುವಾಗಿದೆ. ಇತ್ತೀಚೆಗಷ್ಟೇ ಪೂಜೆ ಮಾಡುವ ಮೂಲಕ ಸಿನಿಮಾ ಶೂಟಿಂಗ್​ಗೆ ಮುಹೂರ್ತ ಇಡಲಾಗಿತ್ತು.ಅದೂ ಆರ್ಟ್​ ಆಫ್​ ಲಿವಿಂಗ್​ನ ರವಿ ಶಂಕರ್​ ಗುರೂಜಿ ಸಿನಿಮಾಕ್ಕೆ ಚಾಲನೆ ನೀಡಿದ್ದರು. ಇದೀಗ ಸಕಲೇಶ​ಪುರದಲ್ಲಿ ಚಿತ್ರೀಕರಣ ಶುರುವಾಗಿದೆ. ಈ ಬಗ್ಗೆ ನಟ ಅಜಯ್​ ರಾವ್​ ಮತ್ತು ರಚಿತಾ ರಾಮ್​ ತುಂಬ ಎಕ್ಸೈಟ್​ ಆಗಿದ್ದು, ತಮ್ಮ ಅನಿಸಿಕೆಗಳನ್ನು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ.

ನಾನು ರಚಿತಾ ರಾಮ್​ ಜತೆ ಇದೇ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದೇನೆ. ಸಿನಿಮಾದ ಮಹತ್ವದ ಭಾಗವನ್ನು ನಾವೀಗ ಸಕಲೇಶ​ಪುರದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ವೈಯಕ್ತಿಕವಾಗಿಯೂ ನನಗೆ ಸಕಲೇಶಪುರ ತುಂಬ ಇಷ್ಟ. ಅದರಲ್ಲೂ ಇಲ್ಲಿನ ಶಾಂತ ವಾತಾವರಣ ನನಗೆ ತುಂಬ ಇಷ್ಟವಾಗುತ್ತದೆ. ನನ್ನ ಹಲವು ಸಿನಿಮಾಗಳನ್ನು ಇಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಗೇ, ನಮ್ಮ ನಿರ್ಮಾಣದ ಕೃಷ್ಣ ಲೀಲಾವನ್ನೂ ಕೂಡ ಇಲ್ಲಿ ಶೂಟಿಂಗ್ ಮಾಡಿದ್ದೇವೆ. ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳ ಎಂದು ಅಜಯ್ ರಾವ್ ತಿಳಿಸಿದ್ದಾರೆ.

ನಂತರ ಪ್ರತಿಕ್ರಿಯೆ ನೀಡಿದ ರಚಿತಾ ರಾಮ್​, ಸಕಲೇಶಪುರದಲ್ಲಿ ಇಂದಿನಿಂದ ಚಿತ್ರೀಕರಣ ಶುರು ಮಾಡಿದ್ದೇವೆ. ನಾನು ಸಿನಿಮಾ ಚಿತ್ರೀಕರಣಕ್ಕಾಗಿ ಸಕಲೇಶಪುರಕ್ಕೆ ಬರುತ್ತಿರುವುದು ಇದೇ ಮೊದಲು. ಕರ್ನಾಟಕದ ಅತ್ಯಂತ ಸುಂದರ ಸ್ಥಳಗಳಲ್ಲಿ ಇದೂ ಒಂದು. ಇಲ್ಲಿನ ಹಸಿರು ನನಗೆ ತುಂಬ ಇಷ್ಟವಾಯಿತು. ಸಂಜೆ ಹೊತ್ತಿಗೆ ಅದೆಷ್ಟು ಚಳಿ ಇರುತ್ತದೆ ಎಂದರೆ ನನಗಂತೂ ಸ್ವಿಜರ್​ಲ್ಯಾಂಡ್​ ನೆನಪಾಗುತ್ತದೆ. ನನಗೆ ಇಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವುದು ತುಂಬ ಸಂತೋಷವಾಗುತ್ತಿದೆ ಎಂದಿದ್ದಾರೆ.

ಲವ್​ ಯೂ ರಚ್ಚು ಸಿನಿಮಾವನ್ನು ಶಂಕರ್ ರಾಜ್​ ನಿರ್ದೇಶನ ಮಾಡಿದ್ದು, ಖ್ಯಾತ ನಿರ್ದೇಶಕ ಶಶಾಂಕ್​ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್​ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ‘ರಾಬರ್ಟ್’ ಸಿನಿಮಾ ರಿಲೀಸ್​ಗೂ ಮುನ್ನ ತಿರುಮಲ ದೇಗುಲಕ್ಕೆ ನಟ ದರ್ಶನ್ ಭೇಟಿ

Follow Us
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ