CAA, NRC ಪ್ರತಿಭಟನೆಗಾಗಿ Al-Hind ಸಂಘಟನೆಯಿಂದ ಹಣ ಸರಬರಾಜು

| Updated By: ಸಾಧು ಶ್ರೀನಾಥ್​

Updated on: Aug 20, 2020 | 1:15 PM

ಬೆಂಗಳೂರು: ಕಾವಲ್​ ಭೈರಸಂದ್ರದ ಗಲಾಟೆಯಲ್ಲಿ ಶಾಮೀಲಾಗಿದ್ದ ಕೆಲ ಗಲಭೆಕೋರರೊಂದಿಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಇದೀಗ ಅಲ್​-ಹಿಂದ್​ ಸಂಘಟನೆ ಚಟುವಟಿಕೆಗಳ ಮೇಲೆ ಬೆಳಕು ಬಿದ್ದಿದೆ. ಇದೀಗ, ನಗರದಲ್ಲಿ ನಡೆದ ಹಾಗೂ ಮುಂದೆ ನಡೆಯಲಿರುವ CAA ಮತ್ತು NRC ವಿರೋಧಿ ಪ್ರತಿಭಟನೆಗಳಿಗೂ ಅಲ್​ ಹಿಂದ್​ ಸಂಘಟನೆಗೆ ಸಂಬಂಧವಿದೆ ಎಂಬ ವಿಷಯ ಸಿಸಿಬಿ ತನಿಖೆಯಲ್ಲಿ ‌ಬಹಿರಂಗವಾಗಿದೆ. ನಗರದಲ್ಲಿ CAA ಮತ್ತು NRC ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದ ನಾರಿ (NARI) ಪ್ರತಿಷ್ಠಾನಕ್ಕೆ ಅಲ್​ ಹಿಂದ್​ ಸಂಘಟನೆ ಕೋಟ್ಯಂತರ ರೂಪಾಯಿ ವರ್ಗಾವಣೆ ಆಗಿದೆ ಎಂದು […]

CAA, NRC ಪ್ರತಿಭಟನೆಗಾಗಿ Al-Hind ಸಂಘಟನೆಯಿಂದ ಹಣ ಸರಬರಾಜು
Follow us on

ಬೆಂಗಳೂರು: ಕಾವಲ್​ ಭೈರಸಂದ್ರದ ಗಲಾಟೆಯಲ್ಲಿ ಶಾಮೀಲಾಗಿದ್ದ ಕೆಲ ಗಲಭೆಕೋರರೊಂದಿಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಇದೀಗ ಅಲ್​-ಹಿಂದ್​ ಸಂಘಟನೆ ಚಟುವಟಿಕೆಗಳ ಮೇಲೆ ಬೆಳಕು ಬಿದ್ದಿದೆ.

ಇದೀಗ, ನಗರದಲ್ಲಿ ನಡೆದ ಹಾಗೂ ಮುಂದೆ ನಡೆಯಲಿರುವ CAA ಮತ್ತು NRC ವಿರೋಧಿ ಪ್ರತಿಭಟನೆಗಳಿಗೂ ಅಲ್​ ಹಿಂದ್​ ಸಂಘಟನೆಗೆ ಸಂಬಂಧವಿದೆ ಎಂಬ ವಿಷಯ ಸಿಸಿಬಿ ತನಿಖೆಯಲ್ಲಿ ‌ಬಹಿರಂಗವಾಗಿದೆ.

ನಗರದಲ್ಲಿ CAA ಮತ್ತು NRC ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದ ನಾರಿ (NARI) ಪ್ರತಿಷ್ಠಾನಕ್ಕೆ ಅಲ್​ ಹಿಂದ್​ ಸಂಘಟನೆ ಕೋಟ್ಯಂತರ ರೂಪಾಯಿ ವರ್ಗಾವಣೆ ಆಗಿದೆ ಎಂದು ಮಾಹಿತಿ ತಿಳಿದುಬಂದಿದೆ. ನಾರಿ ಫೌಂಡೇಷನ್‌ ಈ ಹಣವನ್ನು CAA ಮತ್ತು NRC ಪ್ರತಿಭಟನೆಗಳಿಗೆ ಬಳಸಿದೆಯಂತೆ.

ನಾರಿ ಫೌಂಡೇಷನ್‌ ಬ್ಯಾಂಕ್​ ಅಕೌಂಟ್ ಪರಿಶೀಲನೆ ವೇಳೆ ಈ ಅಂಶ ಬಯಲಾಗಿದೆ. ಹೀಗಾಗಿ, ಇಡೀ ನಾರಿ ಫೌಂಡೇಷನ್‌ನ ಸದಸ್ಯರನ್ನು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆಂದು ವಶಕ್ಕೆ ಪಡೆಯಲು ಸಿಸಿಬಿ ತಂಡ ಚಿಂತನೆ ನಡೆಸುತ್ತಿದೆ.

Published On - 1:12 pm, Thu, 20 August 20