ಸಮಾಜಸೇವೆ ಮುಖವಾಡ.. ಒಳಗೆ ಟೆರರ್ ಕೆಲಸ! ನಾರಿ ಫೌಂಡೇಷನ್ ಮೇಲೆ ಅನುಮಾನದ ಹುತ್ತ
ಬೆಂಗಳೂರು: ಶಂಕಿತ ಉಗ್ರ ಸೈಯದ್ ಸಮೀವುದ್ದೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ವಿರುದ್ಧ ಸಿಸಿಬಿಗೆ ಅನುಮಾನಗಳು ಶುರುವಾಗಿದೆ. ಹೊರಗೆ ಸಮಾಜಸೇವೆ, ಒಳಗೆ ಟೆರರ್ ಕೆಲಸ ಮಾಡ್ತಿದಿಯಾ ಎಂಬ ಡೌಟ್ ಉದ್ಭವಿಸಿದೆ. ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ಆರೋಗ್ಯ ಸಂಬಂಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಎನ್ಜಿಒ. ಸೈಯದ್ ನಾರಿ ಫೌಂಡೇಷನ್ ಹೆಸರಲ್ಲಿ ಎನ್ಜಿಒ ನಡೆಸುತ್ತಿದ್ದ. ಶಾಲಾ-ಕಾಲೇಜುಗಳಲ್ಲೇ ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದ್ದ. ವಿದ್ಯಾರ್ಥಿಗಳ ಜೊತೆ ನಡೆಸುತ್ತಿದ್ದ ಕಾರ್ಯಕ್ರಮದ ಸಂವಾದದ ವಿಷಯ ಏನು? ಶಾಲಾ-ಕಾಲೇಜುಗಳಲ್ಲೇ ಏಕೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ. ಕಾರ್ಯಕ್ರಮದಲ್ಲಿ […]

ಬೆಂಗಳೂರು: ಶಂಕಿತ ಉಗ್ರ ಸೈಯದ್ ಸಮೀವುದ್ದೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ವಿರುದ್ಧ ಸಿಸಿಬಿಗೆ ಅನುಮಾನಗಳು ಶುರುವಾಗಿದೆ. ಹೊರಗೆ ಸಮಾಜಸೇವೆ, ಒಳಗೆ ಟೆರರ್ ಕೆಲಸ ಮಾಡ್ತಿದಿಯಾ ಎಂಬ ಡೌಟ್ ಉದ್ಭವಿಸಿದೆ.
ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ಆರೋಗ್ಯ ಸಂಬಂಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಎನ್ಜಿಒ. ಸೈಯದ್ ನಾರಿ ಫೌಂಡೇಷನ್ ಹೆಸರಲ್ಲಿ ಎನ್ಜಿಒ ನಡೆಸುತ್ತಿದ್ದ. ಶಾಲಾ-ಕಾಲೇಜುಗಳಲ್ಲೇ ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದ್ದ. ವಿದ್ಯಾರ್ಥಿಗಳ ಜೊತೆ ನಡೆಸುತ್ತಿದ್ದ ಕಾರ್ಯಕ್ರಮದ ಸಂವಾದದ ವಿಷಯ ಏನು? ಶಾಲಾ-ಕಾಲೇಜುಗಳಲ್ಲೇ ಏಕೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ. ಕಾರ್ಯಕ್ರಮದಲ್ಲಿ ಸಮೀವುದ್ದೀನ್ಗೆ ಪತ್ನಿಯೂ ಸಾಥ್ ನೀಡುತ್ತಿದ್ರ ಎಂಬ ಅನುಮಾನ ಎದ್ದಿದೆ.
ಇನ್ನು ಸಮೀವುದ್ದೀನ್ ಎನ್ಜಿಒಗೆ ವಿದೇಶಿ ದೇಣಿಗೆ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ NGOಗೆ ಹಣ ಬಂದಿದ್ದೆಲ್ಲಿಂದ, ವರ್ಗಾವಣೆ ಮಾಡಿದ್ಯಾರು ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಹಾಗೂ ಸಮೀವುದ್ದೀನ್ ನಂಟು ಹೊಂದಿದ್ದ ಅಲ್ಹಿಂದ್ ಸಂಘಟನೆ ವರ್ಗಾವಣೆ ಮಾಡಿದೆಯಾ ಬಗ್ಗೆ ಅನುಮಾನಗಳಿದ್ದು ಈ ಎಲ್ಲಾ ಅನುಮಾನಗಳ ಆಧಾರದ ಮೇಲೆ ಸಿಸಿಬಿ ತನಿಖೆ ನಡೆಸುತ್ತಿದೆ. ಈ ಬಗ್ಗೆ ಸಿಸಿಬಿ ತಂಡ ಎನ್ಐಎಗೂ ಮಾಹಿತಿ ನೀಡಿದೆ.