AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತ್ಯಂತ ಶ್ರೀಮಂತ Apple.. ಅಮೆರಿಕ GDP ಯನ್ನೇ ಹಿಂದಿಕ್ಕಿದರೆ ಅಚ್ಚರಿ ಪಡಬೇಕಿಲ್ಲ!!!

ಮುಂಬೈ: ಖ್ಯಾತ ಐಫೋನ್‌ ಮೊಬೈಲ್‌ ತಯಾರಿಕಾ ಕಂಪನಿ ಌಪಲ್‌ Apple Inc ಈಗ ವಿಶ್ವದಲ್ಲಿ ಕೆಲವೇ ಕೆಲ ಅತ್ಯಂತ ಶ್ರೀಮಂತ ಕಂಪನಿಗಳ ಪಟ್ಟಿ ಸೇರಿದೆ. ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಅದರ ಷೇರು ಬೆಲೆ ಎರಡು ಟ್ರಿಲಿಯನ್ ಅಮೆರಿಕನ್‌ ಡಾಲರ್‌‌ ದಾಟಿದೆ. ಹೌದು ನಂಬಲಿಕ್ಕೆ ಅಸಾಧ್ಯವಾದರೂ ಇದು ಸತ್ಯ. ಌಪಲ್‌ ಕಂಪನಿಯ ಈಗಿನ ಷೇರು ಮಾರುಕಟ್ಟೆ ಬೆಲೆ ಎರಡು ಟ್ರಿಲಿಯನ್‌ ದಾಟಿದೆ. ಈ ಸಾಧನೆ ಮಾಡಿದ ಎರಡನೇ ಕಂಪನಿ ಎಂಬ ಹೆಗ್ಗಳಿಗೆ ಌಪಲ್‌ ಈಗ ಪಾತ್ರವಾಗಿದೆ. ಸೌದಿ ಅರೆಬಿಯಾದ […]

ವಿಶ್ವದ ಅತ್ಯಂತ ಶ್ರೀಮಂತ Apple.. ಅಮೆರಿಕ GDP ಯನ್ನೇ ಹಿಂದಿಕ್ಕಿದರೆ ಅಚ್ಚರಿ ಪಡಬೇಕಿಲ್ಲ!!!
Follow us
Guru
| Updated By: ಸಾಧು ಶ್ರೀನಾಥ್​

Updated on:Aug 20, 2020 | 2:02 PM

ಮುಂಬೈ: ಖ್ಯಾತ ಐಫೋನ್‌ ಮೊಬೈಲ್‌ ತಯಾರಿಕಾ ಕಂಪನಿ ಌಪಲ್‌ Apple Inc ಈಗ ವಿಶ್ವದಲ್ಲಿ ಕೆಲವೇ ಕೆಲ ಅತ್ಯಂತ ಶ್ರೀಮಂತ ಕಂಪನಿಗಳ ಪಟ್ಟಿ ಸೇರಿದೆ. ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಅದರ ಷೇರು ಬೆಲೆ ಎರಡು ಟ್ರಿಲಿಯನ್ ಅಮೆರಿಕನ್‌ ಡಾಲರ್‌‌ ದಾಟಿದೆ.

ಹೌದು ನಂಬಲಿಕ್ಕೆ ಅಸಾಧ್ಯವಾದರೂ ಇದು ಸತ್ಯ. ಌಪಲ್‌ ಕಂಪನಿಯ ಈಗಿನ ಷೇರು ಮಾರುಕಟ್ಟೆ ಬೆಲೆ ಎರಡು ಟ್ರಿಲಿಯನ್‌ ದಾಟಿದೆ. ಈ ಸಾಧನೆ ಮಾಡಿದ ಎರಡನೇ ಕಂಪನಿ ಎಂಬ ಹೆಗ್ಗಳಿಗೆ ಌಪಲ್‌ ಈಗ ಪಾತ್ರವಾಗಿದೆ. ಸೌದಿ ಅರೆಬಿಯಾದ ಸೌದಿ ಅಱಮ್‌ಕೋ ಇಂಥ ಸಾಧನೆ ಮಾಡಿದ ಮತ್ತೊಂದು ಕಂಪನಿ.

ಈ ರಾಷ್ಟ್ರಗಳ ಆರ್ಥಿಕತೆಗಿಂತಲೂ ಌಪಲ್‌ ಆರ್ಥಿಕತೆ ಸೂಪರ್ ಸಾರ್ವಭೌಮ ಅಂದ ಹಾಗೆ ಈಗೀನ ಷೇರು ಮಖಬೆಲೆಯೊಂದಿಗೆ ಌಪಲ್‌ ವಿಶ್ವದ ಪ್ರಮುಖ ರಾಷ್ಟ್ರಗಳಾದ ರಷ್ಯಾ, ಬ್ರೆಜಿಲ್‌, ಆಸ್ಟ್ರೇಲಿಯಾ, ಮೆಕ್ಸಿಕೋ, ಸೌದಿ ಅರೆಬಿಯಾ, ಇಂಡೋನೇಶಿಯಾ, ಕೆನಡಾ, ಟರ್ಕಿ ಸೇರಿದಂತೆ ಹಲವಾರು ದೇಶಗಳ ಜಿಡಿಪಿ ಅಂದ್ರೆ ಗ್ರಾಸ್‌ ಡೆವಲಪ್‌ಮೆಂಟ್‌ ರೇಟ್‌ಗಿಂತಲೂ ಹೆಚ್ಚಾಗಿದೆ. ಅಂದ್ರೆ ಸಾರ್ವಭೌಮ ರಾಷ್ಟ್ರಗಳ ಆರ್ಥಿಕತೆಗಿಂತಲೂ ಌಪಲ್‌ ಕಂಪನಿಯ ಆರ್ಥಿಕತೆ ಸೂಪರ್‌ ಆಗಿದೆ.

ಅಂದ ಹಾಗೆ ಌಪಲ್‌ ಕಂಪನಿಯ ಒಂದು ಷೇರ್‌ನ ಮುಖಬೆಲೆ ಈಗ 468.65 ಅಮೆರಿಕನ್‌ ಡಾಲರ್‌. ಅಂದ್ರೆ ಈ ಕಂಪನಿಯ ಒಟ್ಟು ಮಾರುಕಟ್ಟೆಯಲ್ಲಿನೆ ಬೆಲೆ 2,004 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌. ಇದು ವಿಶ್ವದ ಶ್ರೀಮಂತ ರಾಷ್ಟ್ರಗಳ ಆರ್ಥಿಕ ಶಕ್ತಿಗಿಂತಲೂ ಬಹುಪಾಲು ಹೆಚ್ಚಿಗೆ. ಇದು ಕೊರೊನಾ ಸಾಂಕ್ರಾಮಿಕ ಸೋಂಕಿನ ಸಮಯದಲ್ಲಂತೂ ಇನ್ನೂ ಹೆಚ್ಚಾಗಿದೆ.

ಌಪಲ್‌ ಶೀಘ್ರದಲ್ಲೇ 5G ಮೊಬೈಲ್‌ ಬಿಡುಗಡೆ ಮಾಡಲಿದೆ. ಆಗ..! ಇದು ಈಗಿನ ಕಥೆಯಾದ್ರೆ, ಌಪಲ್‌ ಕಂಪನಿ ಶೀಘ್ರದಲ್ಲಿಯೇ ಐಫೋನ್‌ನ 5G ಮೊಬೈಲ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಆಗ ಈ ಕಂಪನಿಯ ಷೇರ್‌ನ ಮುಖಬೆಲೆ ಇನ್ನಷ್ಟು ಹೆಚ್ಚಿಗೆಯಾಗುವ ನಿರೀಕ್ಷೆ ಇದೆ. ಹಾಗೇನಾದ್ರೂ ಆದ್ರೆ ಅಮೆರಿಕದ ಜಿಡಿಪಿಯನ್ನೂ ಹಿಂದಿಕ್ಕಿದರೆ ಅಚ್ಚರಿ ಪಡಬೇಕಿಲ್ಲ.

Published On - 2:01 pm, Thu, 20 August 20

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ