Google Pay ಬಳಸುವವರೆ ಎಚ್ಚರ! ಕಸ್ಟಮರ್ ಕೇರ್ ಹೆಸರಿನಲ್ಲಿ ನಡೀತಿದೆ ವಂಚನೆ

Google Pay ಬಳಸುವವರೆ ಎಚ್ಚರ! ಕಸ್ಟಮರ್ ಕೇರ್ ಹೆಸರಿನಲ್ಲಿ ನಡೀತಿದೆ ವಂಚನೆ

ಬೆಂಗಳೂರು: ಗೂಗಲ್ ಪೇ ಆ್ಯಪ್ ಯೂಸ್ ಮಾಡೋ ಗ್ರಾಹಕರೇ ಎಚ್ಚರ.. ಎಚ್ಚರ! ಸಮಸ್ಯೆ ಆಯ್ತು ಅಂಥ ಕಸ್ಟಮರ್ ಕೇರ್ ಮೊರೆ ಹೋಗಿದ್ದವನಿಗೆ ಕಾದಿತ್ತು ಶಾಕ್! ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆಯಂತೆ. ಬೆಂಗಳೂರಿನ ಗವಿಪುರಂ ನಿವಾಸಿ ಹರೀಶ್​ ವಂಚನೆಗೆ ಒಳಗಾಗಿದ್ದಾರೆ. ಹರೀಶ್​ಗೆ ಗೂಗಲ್​ಪೇಯಲ್ಲಿ ಸಮಸ್ಯೆಯಾದ ಹಿನ್ನೆಲೆಯಲ್ಲಿ ಗೂಗಲ್​ನಲ್ಲಿ ಸರ್ಚ್ ಮಾಡಿದಾಗ ಸಿಕ್ಕ 9901771222 ಕಸ್ಟಮರ್ ಕೇರ್ ನಂಬರ್​ಗೆ ಕರೆ ಮಾಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಮತ್ತೊಂದು 06291766339 ನಂಬರ್​ನಿಂದ ಹರೀಶ್ ಗೆ […]

Ayesha Banu

| Edited By:

Jul 30, 2020 | 8:42 PM

ಬೆಂಗಳೂರು: ಗೂಗಲ್ ಪೇ ಆ್ಯಪ್ ಯೂಸ್ ಮಾಡೋ ಗ್ರಾಹಕರೇ ಎಚ್ಚರ.. ಎಚ್ಚರ! ಸಮಸ್ಯೆ ಆಯ್ತು ಅಂಥ ಕಸ್ಟಮರ್ ಕೇರ್ ಮೊರೆ ಹೋಗಿದ್ದವನಿಗೆ ಕಾದಿತ್ತು ಶಾಕ್! ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆಯಂತೆ. ಬೆಂಗಳೂರಿನ ಗವಿಪುರಂ ನಿವಾಸಿ ಹರೀಶ್​ ವಂಚನೆಗೆ ಒಳಗಾಗಿದ್ದಾರೆ.

ಹರೀಶ್​ಗೆ ಗೂಗಲ್​ಪೇಯಲ್ಲಿ ಸಮಸ್ಯೆಯಾದ ಹಿನ್ನೆಲೆಯಲ್ಲಿ ಗೂಗಲ್​ನಲ್ಲಿ ಸರ್ಚ್ ಮಾಡಿದಾಗ ಸಿಕ್ಕ 9901771222 ಕಸ್ಟಮರ್ ಕೇರ್ ನಂಬರ್​ಗೆ ಕರೆ ಮಾಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಮತ್ತೊಂದು 06291766339 ನಂಬರ್​ನಿಂದ ಹರೀಶ್ ಗೆ ಕಾಲ್ ಬಂದಿದೆ. ಆ ಕಡೆಯಿಂದ ನಿಮ್ಮ ಗೂಗಲ್ ಪೇ ಸಮಸ್ಯೆ ಆಗಿದೆ ನಾವು ಕೇಳುವ ಡಿಟೇಲ್ಸ್ ನೀಡಿದ್ರೆ ಬಗೆಹರಿಯುತ್ತೆ ಎಂದಿದ್ದಾರೆ.

ಅಪರಿಚಿತ ವ್ಯಕ್ತಿ ಕೇಳ್ತಿದ್ದಂತೆ ಡೆಬಿಟ್ ಕಾರ್ಡ್​ ನಂಬರ್, ಸಿವಿವಿ, ಒಟಿಪಿ ನೀಡಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿ ನಿಮ್ಮ ಗೂಗಲ್ ಪೇ ಸರಿ ಆಗಿದೆ. ಈಗ ಓಪನ್ ಮಾಡಿ ಅಂಥ ಕಾಲ್ ಕಟ್ ಮಾಡಿದ್ದಾನೆ. ಕಾಲ್ ಕಟ್ ಮಾಡಿ ನೋಡ್ತಿದ್ದಂತೆ ಅಕೌಂಟ್ ನಲ್ಲಿದ್ದ 24,500 ರೂಪಾಯಿ ಮಂಗಮಾಯವಾಗಿದೆ. ಅಕೌಂಟ್​ನಲ್ಲಿದ್ದ ಹಣ ಇಲ್ಲವಾದ ಬಳಿಕ ಶಾಕ್ ಆಗಿ ಮತ್ತೇ ಅದೇ ನಂಬರ್​ಗೆ ಹರೀಶ್ ಕಾಲ್ ಮಾಡಿದ್ರು. ಆದರೆ ಆ ನಂಬರ್ ಸ್ವಿಚ್ ಆಫ್ ಆಗಿತ್ತು. ಹರೀಶ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ದಕ್ಷಿಣ ಸಿಇಎನ್ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada