AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿಗೆ ಬಂತು ಕುಂಬಾರರ ಬದುಕು, ಗಣೇಶ ಹಬ್ಬ ವ್ಯಾಪಾರಕ್ಕೆ ಸಿಗ್ತಿಲ್ಲ ಅನುಮತಿ

ಬೆಂಗಳೂರು: ಕೊರೊನಾ ಮಹಾಮಾರಿ ಜನರಿಂದ ಅವರ ಕೆಲಸ, ಸಂತೋಷ, ಊಟ ಎಲ್ಲವನ್ನೂ ಕಿತ್ತುಕೊಳ್ಳುತ್ತಿದೆ. ಜನಸಾಮಾನ್ಯರಿಗೆ ಬದುಕು ನಡೆಸುವುದೇ ಸಾಹಸವಾಗಿದೆ. ಈಗ ಕುಂಬಾರರ ಬದುಕು ಸಹ ಬೀದಿಗೆ ಬಂದಿದೆ. ಮಣ್ಣಿನಿಂದ ಮಡಿಕೆ, ವಿಗ್ರಹಗಳನ್ನು ಮಾಡಿ ಅದನ್ನು ಮಾರಿ ಬಂದ ಹಣದಿಂದ ಹಸಿವು ನೀಗಿಸಿಕೊಳ್ಳುತ್ತಿದ್ದ ಕುಂಬಾರರು ಕಣ್ಣೀರಿನಲ್ಲೇ ಬಾಳಬೇಕಾದ ಪರಿಸ್ಥಿತಿ ಎದುರಾಗಿದೆ. ಪಾಟರಿ ಟೌನ್​ನಲ್ಲಿ 300 ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆ ವೃತ್ತಿ ಅವಲಂಬಿಸಿದ್ದಾರೆ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇವರೆಲ್ಲಾ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಫೆಬ್ರವರಿಯಲ್ಲೇ ಗಣೇಶನ […]

ಬೀದಿಗೆ ಬಂತು ಕುಂಬಾರರ ಬದುಕು, ಗಣೇಶ ಹಬ್ಬ ವ್ಯಾಪಾರಕ್ಕೆ ಸಿಗ್ತಿಲ್ಲ ಅನುಮತಿ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Jul 30, 2020 | 9:49 PM

Share

ಬೆಂಗಳೂರು: ಕೊರೊನಾ ಮಹಾಮಾರಿ ಜನರಿಂದ ಅವರ ಕೆಲಸ, ಸಂತೋಷ, ಊಟ ಎಲ್ಲವನ್ನೂ ಕಿತ್ತುಕೊಳ್ಳುತ್ತಿದೆ. ಜನಸಾಮಾನ್ಯರಿಗೆ ಬದುಕು ನಡೆಸುವುದೇ ಸಾಹಸವಾಗಿದೆ. ಈಗ ಕುಂಬಾರರ ಬದುಕು ಸಹ ಬೀದಿಗೆ ಬಂದಿದೆ.

ಮಣ್ಣಿನಿಂದ ಮಡಿಕೆ, ವಿಗ್ರಹಗಳನ್ನು ಮಾಡಿ ಅದನ್ನು ಮಾರಿ ಬಂದ ಹಣದಿಂದ ಹಸಿವು ನೀಗಿಸಿಕೊಳ್ಳುತ್ತಿದ್ದ ಕುಂಬಾರರು ಕಣ್ಣೀರಿನಲ್ಲೇ ಬಾಳಬೇಕಾದ ಪರಿಸ್ಥಿತಿ ಎದುರಾಗಿದೆ. ಪಾಟರಿ ಟೌನ್​ನಲ್ಲಿ 300 ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆ ವೃತ್ತಿ ಅವಲಂಬಿಸಿದ್ದಾರೆ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇವರೆಲ್ಲಾ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಫೆಬ್ರವರಿಯಲ್ಲೇ ಗಣೇಶನ ವಿಗ್ರಹಗಳನ್ನ ತಯಾರಿಸಿದ್ದಾರೆ. ಆದ್ರೆ ಕೊರೊನಾ ಇರೋ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಕುಂಬಾರರು ಸಿಎಂ ಮೊರೆ ಹೋಗಿದ್ದಾರೆ. ನಮಗೂ ವ್ಯಾಪಾರ‌ ಮಾಡೋಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಬಾರಿ ಮನೆಯಲ್ಲೇ ಪ್ರತಿಷ್ಠಾಪಿಸಲು ಚಿಕ್ಕ‌ ಚಿಕ್ಕ ಮಣ್ಣಿನ ಗಣೇಶನನ್ನ ತಯಾರಿಸಿದ್ದೀವಿ. ಆದ್ರೆ ಇದುವರೆಗೂ ಯಾರೂ ಆರ್ಡರ್ ಮಾಡಿಲ್ಲ. ಇಷ್ಟೊತ್ತಿಗಾಗಲೇ ಸಿಕ್ಕಾಪಟ್ಟೆ ಆರ್ಡರ್ಸ್ ಬರ್ತಾ ಇತ್ತು. ಸರ್ಕಾರವೇ ನಮ್ಮ ‌ಸಮಸ್ಯೆಗೆ ಸ್ಪಂದಿಸಬೇಕು. ವ್ಯಾಪಾರ ಮಾಡೋಕೆ ಅನುಮತಿ ಕೊಡಬೇಕು. ಇಲ್ಲವಾದ್ರೆ ಪರಿಹಾರ ಘೋಷಣೆ ಮಾಡ್ಬೇಕು ಅಂತಾ ಕುಂಬಾರರು ಒತ್ತಾಯ ಮಾಡಿದ್ದಾರೆ.

Published On - 2:38 pm, Wed, 29 July 20

Follow Us
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಜನರಿಂದ ತುಂಬಿ ಹೋಯ್ತು ಕೆ.ಆರ್ ಮಾರ್ಕೆಟ್!
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಜನರಿಂದ ತುಂಬಿ ಹೋಯ್ತು ಕೆ.ಆರ್ ಮಾರ್ಕೆಟ್!
ಶಿಗ್ಗಾಂವಿ ದೇವಾಲಯದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ಯುವಕ
ಶಿಗ್ಗಾಂವಿ ದೇವಾಲಯದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ಯುವಕ