ಹಣ ಹೆಂಡ ಆಮಿಷ ತೋರಿಸಲ್ಲ.. ಪಕ್ಷ ಭೇದ ಮರೆತು ಗ್ರಾಮ ದೇವರ ಮುಂದೆ ಸಾಮೂಹಿಕ ಪ್ರಮಾಣ ಮಾಡಿದ ಅಭ್ಯರ್ಥಿಗಳು

ಎಲ್ಲಾ ಪಕ್ಷದ ಅಭ್ಯರ್ಥಿಗಳು ಭೇದಭಾವ ಮರೆತು ಪ್ರತಿಜ್ಞೆ ಮಾಡಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ. ಸೋತರೂ, ಗೆದ್ದರೂ ಮತದಾರರೊಂದಿಗೆ ಸಂಬಂಧ ಹಾಳುಮಾಡಿಕೊಳ್ಳದೇ ಮೊದಲಿನಂತೆಯೇ ಇರಿ ಎಂದು ಊರಿನವರು ಸಲಹೆ ನೀಡಿದ್ದಾರೆ.

ಹಣ ಹೆಂಡ ಆಮಿಷ ತೋರಿಸಲ್ಲ.. ಪಕ್ಷ ಭೇದ ಮರೆತು ಗ್ರಾಮ ದೇವರ ಮುಂದೆ ಸಾಮೂಹಿಕ ಪ್ರಮಾಣ ಮಾಡಿದ ಅಭ್ಯರ್ಥಿಗಳು
ಗ್ರಾಮ ದೇಗುಲದಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಅಭ್ಯರ್ಥಿಗಳು
Follow us
Skanda
| Updated By: Team Veegam

Updated on:Dec 21, 2020 | 6:15 PM

ಶಿವಮೊಗ್ಗ: ಚುನಾವಣೆ ಬಂದರೆ ಹಣ ಹೆಂಡದ ಹೊಳೆ ಹರಿಯುತ್ತದೆ ಎಂಬ ಮಾತು ಸಾರ್ವಕಾಲಿಕ ಸತ್ಯ ಎನ್ನುವ ದುಃಸ್ಥಿತಿಗೆ ನಮ್ಮ ದೇಶ ಬಂದು ನಿಂತಿದೆ. ಹಣ, ಹೆಂಡ ಹಂಚಿ ಜನರಿಗೆ ಆಮಿಷ ತೋರಿಸಿ ವೋಟು ಗಿಟ್ಟಿಸಿಕೊಳ್ಳುವವರ ನಡುವೆ ಪ್ರಾಮಾಣಿಕತೆ ಎಂದು ಹೋದರೆ ಸೋಲು ನಿಶ್ಚಿತ ಎನ್ನುವ ಪರಿಸ್ಥಿತಿ ಇದೆ.

ಇದಕ್ಕೆ ಅಪವಾದ ಎಂಬಂತೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿಯ ದೋಣಿಹಕ್ಲು ಮತ್ತು ಹೊಸೂರು-ಗುಡ್ಡೇಕೇರಿ ಗ್ರಾಮ ಪಂಚಾಯತಿ ಅಭ್ಯರ್ಥಿಗಳು ಪಕ್ಷಭೇದ ಮರೆತು ಹಣ, ಹೆಂಡ ಹಂಚದೆ ಪ್ರಾಮಾಣಿಕವಾಗಿ ಚುನಾವಣೆ ಎದುರಿಸುವ ಪ್ರತಿಜ್ಞೆ ತೊಟ್ಟು ಇತರರಿಗೆ ಮಾದರಿಯಾಗಿದ್ದಾರೆ.

ಹಣ, ಹೆಂಡ ಅಥವಾ ಯಾವುದೇ ರೀತಿಯ ಆಮಿಷ ತೋರದೆ ಚುನಾವಣೆ ಎದುರಿಸುತ್ತೇವೆ. ಯಾವ ಕಾರಣಕ್ಕೂ ಅಡ್ಡದಾರಿ ತುಳಿಯುವುದಿಲ್ಲ. ನಮ್ಮ ಪ್ರಾಮಾಣಿಕ ಪ್ರಯತ್ನದಿಂದಷ್ಟೇ ಮತಯಾಚಿಸುತ್ತೇವೆ ಎಂದು ಎರಡೂ ಬೂತ್​ಗಳ ಒಟ್ಟು 8 ಅಭ್ಯರ್ಥಿಗಳು ಹೊಸೂರು ಗ್ರಾಮದ ಈಶ್ವರ ದೇವಸ್ಥಾನಕ್ಕೆ ಒಂದಾಗಿ ಹೋಗಿ ದೇವರ ಮುಂದೆ ನಿಂತು ಪ್ರಸಾದ ಸ್ವೀಕರಿಸಿ ವಾಗ್ದಾನ ನೀಡಿದ್ದಾರೆ.

ಎಲ್ಲಾ ಪಕ್ಷದ ಅಭ್ಯರ್ಥಿಗಳು ಭೇದಭಾವ ಮರೆತು ಪ್ರತಿಜ್ಞೆ ಮಾಡಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ. ಸೋತರೂ, ಗೆದ್ದರೂ ಮತದಾರರೊಂದಿಗೆ ಸಂಬಂಧ ಹಾಳು ಮಾಡಿಕೊಳ್ಳದೇ ಮೊದಲಿನಂತೆಯೇ ಇರಿ ಎಂದು ಊರಿನವರು ಸಲಹೆ ನೀಡಿದ್ದಾರೆ.

ಈ ಹಿಂದೆಯೂ ಬೇರೆ ಬೇರೆ ಚುನಾವಣೆ ಸಂದರ್ಭದಲ್ಲಿ ಊರಿನ ಎಲ್ಲಾ ಪಕ್ಷದವರು ಒಂದಾಗಿ ಹಣ ಹಂಚದೇ ಊರಿನ ರಸ್ತೆ, ಶಾಲೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಶ್ರಮ ಹಾಕುವ ನಿರ್ಧಾರ ಮಾಡಿ ಮನಗೆದ್ದಿದ್ದರು.

ಸ್ಥಳೀಯ ಸಂಸ್ಥೆ ಚುನಾವಣೆ: ಕಲಬುರಗಿಯಲ್ಲಿ ಒಂದೇ ಕುಟುಂಬದ ನಾಲ್ವರ ಸ್ಪರ್ಧೆ

Published On - 5:05 pm, Mon, 21 December 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ