AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swachh Bharat Mission ಹಣ ದುರ್ಬಳಕೆ, ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ರಾಯಚೂರು ನಗರಾಭಿವೃದ್ಧಿ ಕೋಶ ಇಲಾಖೆ ಆದೇಶ

Swachh Bharat Mission Fund Misuse | 'ಸ್ವಚ್ಛ ಭಾರತ್ ಮಿಷನ್’ ಯೋಜನೆಯಡಿ‌ ಕವಿತಾಳ ಪಟ್ಟಣ ಪಂಚಾಯಿತಿಗೆ ಶೌಚಾಲಯ ಕಟ್ಟಲು ಬಿಡುಗಡೆಯಾಗಿದ್ದ ಹಣವನ್ನು ಕವಿತಾಳ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಈರಣ್ಣ ಜಗಲಿ ಮತ್ತು ಜಿ.ಟಿ.ರೆಡ್ಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Swachh Bharat Mission ಹಣ ದುರ್ಬಳಕೆ, ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ರಾಯಚೂರು ನಗರಾಭಿವೃದ್ಧಿ ಕೋಶ ಇಲಾಖೆ ಆದೇಶ
ಆಯೇಷಾ ಬಾನು
|

Updated on: Feb 11, 2021 | 12:47 PM

Share

ರಾಯಚೂರು: ‘ಸ್ವಚ್ಛ ಭಾರತ್ ಮಿಷನ್’ ಹಣ ದುರ್ಬಳಕೆ ಆರೋಪ ಕೇಳಿ ಬಂದಿದ್ದು ಕವಿತಾಳ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಈರಣ್ಣ ಜಗಲಿ, ಜಿ.ಟಿ.ರೆಡ್ಡಿ ವಿರುದ್ಧ ಕೇಸ್ ದಾಖಲಿಸಲು ರಾಯಚೂರ ನಗರಾಭಿವೃದ್ಧಿ ಕೋಶ ಇಲಾಖೆ ಆದೇಶಿಸಿದೆ. ಕವಿತಾಳ ಪಟ್ಟಣ ಪಂಚಾಯಿತಿಯಲ್ಲಿ ಶೌಚಾಲಯ ಹಗರಣ ನಡೆದಿದೆ. ನಕಲಿ ಬಿಲ್‌ಗಳನ್ನ ಸೃಷ್ಟಿಸಿ ಹಣ ದೋಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

‘ಸ್ವಚ್ಛ ಭಾರತ್ ಮಿಷನ್’ ಯೋಜನೆಯಡಿ‌ (Swachh Bharat Mission) ಕವಿತಾಳ ಪಟ್ಟಣ ಪಂಚಾಯಿತಿಗೆ ಶೌಚಾಲಯ ಕಟ್ಟಲು ಬಿಡುಗಡೆಯಾಗಿದ್ದ ಹಣವನ್ನು ಕವಿತಾಳ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಈರಣ್ಣ ಜಗಲಿ ಮತ್ತು ಜಿ.ಟಿ.ರೆಡ್ಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

 14 ಲಕ್ಷ ರೂಪಾಯಿ ದುರ್ಬಳಕೆ; ಸಾಬೀತಾದರೆ ಸದಸ್ಯತ್ವ ರದ್ದತಿಗೂ ಸೂಚನೆ ನಕಲಿ ಬಿಲ್‌ಗಳನ್ನ ಸೃಷ್ಟಿಸಿ ಸುಮಾರು 14 ಲಕ್ಷ ರೂಪಾಯಿ ದೋಚಿದ್ದಾರಂತೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲಿಸಲು ಕವಿತಾಳ ಪ.ಪಂ. ಗೆ ರಾಯಚೂರು ನಗರಾಭಿವೃದ್ಧಿ ಕೋಶ ಇಲಾಖೆ ಆದೇಶಿಸಿದೆ. 15 ದಿನದೊಳಗೆ ದೂರು ದಾಖಲಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇನ್ನು ಅಕ್ರಮವೆಸಗಿದ್ದು ಸಾಬೀತಾದರೆ ಸದಸ್ಯತ್ವ ರದ್ದತಿಗೂ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಆಯುಷ್ಮಾನ್ ಭಾರತ್: 112 ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆಗಳ ನಿರ್ಮಾಣ ಗುರಿ