ಸ್ವಾಮೀಜಿಗೆ ಬಾಸುಂಡೆ ಬರೋಹಾಗೆ ಥಳಿಸಿದ್ರಾ ಪೇದೆ?
ಕಲಬುರಗಿ: ರಾಜ್ಯದಲ್ಲಿ ಸ್ವಾಮೀಜಿಗಳ ಮೇಲೆ ಹಲ್ಲೆ ಆಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ದಾಖಲಾಗುತ್ತಿವೆ. ಆದರೆ ಇಲ್ಲಿ ಸ್ವಾಮೀಜಿ ಮೇಲೆ ಕಾನ್ಸ್‌ಟೇಬಲ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ ಸಂಜೆ ಅಫಜಲಪುರ ತಾಲೂಕಿನ ಅರ್ಜುನಗಿ ಚೆಕ್‌ಪೋಸ್ಟ್ ಬಳಿ ರೇವೂರು ಬಿಯ ಶಿವಾನಂದ ಶಿವಾಚಾರ್ಯ ಶ್ರೀ ಮೇಲೆ ರೇವೂರು ಠಾಣೆ ಪಿಸಿ ಶರಣಗೌಡ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮಹಾರಾಷ್ಟ್ರ ಗಡಿಯಲ್ಲಿನ ಹಳ್ಳಿಗೆ ಹೋಗಿಬಂದಿದ್ದಕ್ಕೆ ಥಳಿಸಿದ್ದಾರಂತೆ. ಸ್ವಾಮೀಜಿಗೆ ಮೈತುಂಬ ಬಾಸುಂಡೆ ಬಂದಿದ್ದು, ಗಾಯಾಳು ಸ್ವಾಮೀಜಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ […]
ಕಲಬುರಗಿ: ರಾಜ್ಯದಲ್ಲಿ ಸ್ವಾಮೀಜಿಗಳ ಮೇಲೆ ಹಲ್ಲೆ ಆಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ದಾಖಲಾಗುತ್ತಿವೆ. ಆದರೆ ಇಲ್ಲಿ ಸ್ವಾಮೀಜಿ ಮೇಲೆ ಕಾನ್ಸ್‌ಟೇಬಲ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಿನ್ನೆ ಸಂಜೆ ಅಫಜಲಪುರ ತಾಲೂಕಿನ ಅರ್ಜುನಗಿ ಚೆಕ್‌ಪೋಸ್ಟ್ ಬಳಿ ರೇವೂರು ಬಿಯ ಶಿವಾನಂದ ಶಿವಾಚಾರ್ಯ ಶ್ರೀ ಮೇಲೆ ರೇವೂರು ಠಾಣೆ ಪಿಸಿ ಶರಣಗೌಡ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮಹಾರಾಷ್ಟ್ರ ಗಡಿಯಲ್ಲಿನ ಹಳ್ಳಿಗೆ ಹೋಗಿಬಂದಿದ್ದಕ್ಕೆ ಥಳಿಸಿದ್ದಾರಂತೆ. ಸ್ವಾಮೀಜಿಗೆ ಮೈತುಂಬ ಬಾಸುಂಡೆ ಬಂದಿದ್ದು, ಗಾಯಾಳು ಸ್ವಾಮೀಜಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 7:12 am, Tue, 26 May 20