AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜರಾಜೇಶ್ವರಿ ನಗರ: ಕೊರೊನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯಿಂದ ಮತ್ತದೇ ಸುಲಿಗೆ

ಬೆಂಗಳೂರು: ಕಿಲ್ಲರ್ ಕೊರೊನಾ ಹೆಸರಲ್ಲಿ ಖಾಸಾಗಿ ಆಸ್ಪತ್ರೆಗಳು ಸುಲಿಗೆಗೆ ನಿಂತಿದ್ದಾವೆ. ರಾಜಾರೋಷವಾಗಿ ಹಗಲು ದರೋಡೆ ಮಾಡ್ತಿವೆ ಎಂದು ರಾಜರಾಜೇಶ್ವರಿ ನಗರದಲ್ಲಿರುವ ಸ್ಪರ್ಶ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಹಗಲು ಸುಲಿಗೇಗೆ ನಿಂತ ಸ್ಪರ್ಶ್: ಕೊರೊನಾ ಸೋಂಕಿತ ರೋಗಿಯೊಬ್ಬರಿಗೆ 5 ದಿನಕ್ಕೆ ಬರೋಬ್ಬರಿ 1 ಲಕ್ಷದ 80 ಸಾವಿರ ಬಿಲ್ ಆಗಿದೆಯಂತೆ. ಪ್ರತ್ಯೇಕ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಅಂತಾ ಲಕ್ಷಾಂತರ ರೂಪಾಯಿ ಬಿಲ್ ಮಾಡಿದ್ದಾರಂತೆ. ಆದ್ರೆ ರೋಗಿ ಜನರಲ್ ವಾರ್ಡ್​ಗೆ ಅಡ್ಮಿಟ್ ಆಗಿದ್ದು ಅದೇ […]

ರಾಜರಾಜೇಶ್ವರಿ ನಗರ: ಕೊರೊನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯಿಂದ ಮತ್ತದೇ ಸುಲಿಗೆ
ಆಯೇಷಾ ಬಾನು
|

Updated on:Oct 13, 2020 | 12:57 PM

Share

ಬೆಂಗಳೂರು: ಕಿಲ್ಲರ್ ಕೊರೊನಾ ಹೆಸರಲ್ಲಿ ಖಾಸಾಗಿ ಆಸ್ಪತ್ರೆಗಳು ಸುಲಿಗೆಗೆ ನಿಂತಿದ್ದಾವೆ. ರಾಜಾರೋಷವಾಗಿ ಹಗಲು ದರೋಡೆ ಮಾಡ್ತಿವೆ ಎಂದು ರಾಜರಾಜೇಶ್ವರಿ ನಗರದಲ್ಲಿರುವ ಸ್ಪರ್ಶ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಹಗಲು ಸುಲಿಗೇಗೆ ನಿಂತ ಸ್ಪರ್ಶ್: ಕೊರೊನಾ ಸೋಂಕಿತ ರೋಗಿಯೊಬ್ಬರಿಗೆ 5 ದಿನಕ್ಕೆ ಬರೋಬ್ಬರಿ 1 ಲಕ್ಷದ 80 ಸಾವಿರ ಬಿಲ್ ಆಗಿದೆಯಂತೆ. ಪ್ರತ್ಯೇಕ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಅಂತಾ ಲಕ್ಷಾಂತರ ರೂಪಾಯಿ ಬಿಲ್ ಮಾಡಿದ್ದಾರಂತೆ. ಆದ್ರೆ ರೋಗಿ ಜನರಲ್ ವಾರ್ಡ್​ಗೆ ಅಡ್ಮಿಟ್ ಆಗಿದ್ದು ಅದೇ ವಾರ್ಡ್​ನಲ್ಲಿ 15 ರೋಗಿಗಳಿದ್ದರು. ಆ 15 ಮಂದಿಗೂ 4 ನರ್ಸ್ ಹಾಗೂ ಒಬ್ಬ ಡಾಕ್ಟರ್ 2 ಟೆಕ್ನಿಶಿಯನ್ಸ್ ಬಂದು ನೋಡಿಕೊಳ್ಳುತ್ತಿದ್ದಾರಂತೆ.

ಮಾಧ್ಯಮಗಳಿಗೆ ಹೇಳಬೇಡಿ.. ಆದರೆ ವಿಪರ್ಯಾಸ ಅಂದ್ರೆ ಒಬ್ಬೊಬ್ಬ ರೋಗಿ ಮೇಲೂ ಸಪರೇಟ್ ಪಿಪಿಇ ಕಿಟ್ ಬಿಲ್ ಹಾಕಿದ್ದರಂತೆ. ಜೊತೆಗೆ ಬ್ಲಡ್ ಟೆಸ್ಟ್, ಯೂರಿನ್ ಟೆಸ್ಟ್ ಅಂತಾ 27 ಸಾವಿರದಷ್ಟು ಬಿಲ್ ಮಾಡಿದ್ದಾರಂತೆ. ಈ ಬಗ್ಗೆ ರೋಗಿಯೊಬ್ಬರು ಪ್ರಶ್ನಿಸಿದರೇ ಉಡಾಫೆ ಉತ್ತರ ಕೊಟ್ಟಿದ್ದಾರಂತೆ. ಕೊನೆಗೆ ಇದರ ಬಗ್ಗೆ ಮಾಧ್ಯಮದಲ್ಲಿ ಹೇಳಬೇಡಿ ಹಣ ವಾಪಸ್ ಕೊಡ್ತೀವಿ ಅಂತಾನೂ ಆಮಿಷ ನೀಡಿದ್ದಾರಂತೆ.

15 ರೋಗಿಗಳಿಗೂ ಡಿವೈಡ್ ಮಾಡಿ ಪಿಪಿಇ ಕಿಟ್ ದರ ಹಾಕಬೇಕಿತ್ತು. ಆದ್ರೆ ಇವರು ಒಬ್ಬೊಬ್ಬ ರೋಗಿಗೂ ಸಪರೇಟ್ ಬಿಲ್ ಮಾಡಿ ಹಣ ದೋಚ್ತಿದ್ದಾರೆ. ಈ ಹಿಂದೆಯೂ ಹೀಗೆಯೆ ಮಾಡಿ ಬಿಬಿಎಂಪಿ ಅಧಿಕಾರಿಗಳಿಂದ ದಂಡಕ್ಕೆ ಒಳಗಾಗಿದ್ರು. ಸ್ಪರ್ಶ್ ಆಸ್ಪತ್ರೆಯವರು ಹಗಲು ದರೋಡೆ ಮಾಡ್ತಿದ್ದಾರೆ ಎಂದು ಸೋಂಕಿತರು ಆರೋಪಿಸಿದ್ದಾರೆ. ಕೇವಲ ಇದೊಂದೇ ಆಸ್ಪತ್ರೆ ಅಲ್ಲ. ಕೊರೊನಾ ಬಂದಾಗಿನಿಂದ ಅನೇಕ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡಲು ಒಂದಲ್ಲಾ ಒಂದು ಮಾರ್ಗ ಹುಡುಕಿಕೊಂಡಿವೆ.

Published On - 12:51 pm, Tue, 13 October 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ