AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಆ ಒಂದು ಸಭೆ

ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಆ ಒಂದು ಸಭೆ

Pramod Shastri G
| Edited By: |

Updated on: May 19, 2026 | 9:52 PM

Share

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ (Karnataka Politics) ಮತ್ತೆ ಪವರ್ ಪಾಲಿಟಿಕ್ಸ್​ ಶುರುವಾಗಿದೆ. ಇಷ್ಟು ದಿನ ರಾಜ್ಯ ರಾಜಕೀಯದಲ್ಲಿ ನಡೀತಿರೋ ಬೆಳವಣಿಗೆ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಪಟ್ಟದ ಮೇಲೆ ಕಣ್ಣಿಟ್ಟು ನಾಯಕರು ತಮ್ಮದೇ ಆದ ತಂತ್ರ, ಪ್ರತಿತಂತ್ರ ಮಾಡ್ತಿದ್ರು. ಆದ್ರೆ ಇದೀಗ ಹೈಕಮಾಂಡ್ ಮಟ್ಟದಲ್ಲಿ ಬೆಳವಣಿಗೆ ಆಗ್ತಿದೆ. ಅದಕ್ಕೆ ಸಾಕ್ಷಿ ಆಗ್ತಿರೋದೇ ನಿನ್ನೆ ಸಚಿವ ಕೆ.ಜೆ.ಜಾರ್ಜ್​ ನಿವಾಸದಲ್ಲಿ ನಡೆದ ಹೈಫ್ರೊಫೈಲ್ ಮೀಟಿಂಗ್.

ಬೆಂಗಳೂರು, (ಮೇ 19): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ (Karnataka Politics) ಮತ್ತೆ ಪವರ್ ಪಾಲಿಟಿಕ್ಸ್​ ಶುರುವಾಗಿದೆ. ಇಷ್ಟು ದಿನ ರಾಜ್ಯ ರಾಜಕೀಯದಲ್ಲಿ ನಡೀತಿರೋ ಬೆಳವಣಿಗೆ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಪಟ್ಟದ ಮೇಲೆ ಕಣ್ಣಿಟ್ಟು ನಾಯಕರು ತಮ್ಮದೇ ಆದ ತಂತ್ರ, ಪ್ರತಿತಂತ್ರ ಮಾಡ್ತಿದ್ರು. ಆದ್ರೆ ಇದೀಗ ಹೈಕಮಾಂಡ್ ಮಟ್ಟದಲ್ಲಿ ಬೆಳವಣಿಗೆ ಆಗ್ತಿದೆ. ಅದಕ್ಕೆ ಸಾಕ್ಷಿ ಆಗ್ತಿರೋದೇ ನಿನ್ನೆ ಸಚಿವ ಕೆ.ಜೆ.ಜಾರ್ಜ್​ ನಿವಾಸದಲ್ಲಿ ನಡೆದ ಹೈಫ್ರೊಫೈಲ್ ಮೀಟಿಂಗ್. ಹೌದು.. ರಾಜ್ಯದಲ್ಲಿನ ಸಿಎಂ ಕುರ್ಚಿ ಕಿತ್ತಾಟವನ್ನ ಎಲ್ಲೋ ಒಂದ್ಕಡೆ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸ್ತಿದೆ. ನಿನ್ನೆಯಷ್ಟೇ ಕೇರಳ ಸಿಎಂ ವಿ.ಡಿ.ಸತೀಷನ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಘಟಾನುಘಟಿ ನಾಯಕರು ಭಾಗಿ ಆದ್ರು. ಇಡೀ ಹೈಕಮಾಂಡೇ ನಿನ್ನೆ ಕೇರಳದಲ್ಲಿತ್ತು.. ಇದೀಗ ಕೇರಳದಿಂದ ರಾಜ್ಯಕ್ಕೆ ಬರ್ತಿದಂತೆಯೇ ನಿನ್ನೆ (ಮೇ 18) AICCಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೈಫ್ರೊಫೈಲ್ ಮೀಟಿಂಗ್ ಮಾಡಿದ್ದಾರೆ. ಬೆಂಗಳೂರಿನ ಸಚಿವ ಕೆ.ಜೆ.ಜಾರ್ಜ್​ ನಿವಾಸದಲ್ಲಿ ನಾಯಕರು ಅನೌಪಚಾರಿಕ ಮೀಟಿಂಗ್ ಮಾಡಿರೋದಕ್ಕೆ ಫೋಟೋ ಸಾಕ್ಷಿಯೂ ಇದೆ.

ಪಕ್ಷದಲ್ಲಿ ಕೆಲವರು ಆಗ್ರಹ ಮಾಡಿದ್ರು. ಹೈಕಮಾಂಡ್ ಸಮ್ಮುಖದಲ್ಲಿ ಸಿಎಂ, ಡಿಸಿಎಂರನ್ನ ಕರೆದು ಒಂದು ಫೈನಲ್ ಮಾಡಿಬಿಡಿ ಅನ್ನೋ ಆಗ್ರಹವೂ ಇತ್ತು. ನಿನ್ನೆ ನಡೆದ ಸಚಿವ ಕೆ.ಜೆ.ಜಾರ್ಜ್​ ನಿವಾಸದಲ್ಲಿ AICC ಆಧ್ಯಕ್ಷ ಮಲ್ಲಿಕಾರ್ಜುನ ಸಮ್ಮುಖದಲ್ಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮಾತುಕತೆ ಮಾಡಿರೋ ಇನ್​ಸೈಡ್ ಮಾಹಿತಿ ಸಿಕ್ಕಿದೆ. ಜಾರ್ಜ್​ ನಿವಾಸದಲ್ಲಿ ಊಟಕ್ಕೆ ಸೇರಿದ್ದ ನಾಯಕರು ಸಿಎಂ ಕುರ್ಚಿ ವಿಚಾರವೂ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಚಿವ ಜಾರ್ಜ್​ ಯಾಕೆ ಇಲ್ಲಿ ಪ್ರಮುಖ ಆಗ್ತಾರೆ ಅಂದ್ರೆ. ಕಳೆದ ಜನವರಿಯಲ್ಲೇ ದೆಹಲಿಗೆ ಕೆ.ಜೆ.ಜಾರ್ಜ್​ರನ್ನ ರಾಹುಲ್ ಗಾಂಧಿ ಕರೆಸಿ ಮಾತನಾಡಿದ್ರು. ಅಧಿಕಾರ ಹಂಚಿಕೆ ಸೇರಿದಂತೆ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ರು. ಯಾರು ಪರ ಇದ್ದಾರೆ? ಯಾರು ವಿರೋಧ ಇದ್ದಾರೆ ಎಂದು ಮಾಹಿತಿ ಪಡೆದಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Pramod Shastri G
Pramod Shastri G