AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Live: ಕಳ್ಳತನದ ಆರೋಪಿ 34 ವರ್ಷಗಳ ಬಳಿಕ ಅರೆಸ್ಟ್! ಮೆಡಿಕಲ್ ಬಂದ್ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿಗಳು

ಆನ್‌ಲೈನ್ ಫಾರ್ಮಸಿ ವಿರೋಧಿಸಿ ದೇಶಾದ್ಯಂತ ಇಂದು ಮೆಡಿಕಲ್ ಶಾಪ್ ಬಂದ್ ಆಗಿದ್ದು, ಕರ್ನಾಟಕದಲ್ಲೂ ಪ್ರತಿಭಟನೆ ನಡೆಯುತ್ತಿದೆ. ಕೋಲಾರದಲ್ಲಿ 34 ವರ್ಷಗಳ ಬಳಿಕ ಕಳ್ಳತನದ ಆರೋಪಿ ಬಂಧನ, ದೆಹಲಿಯಲ್ಲಿ ವಾರಕ್ಕೆ 2 ದಿನ ಸರ್ಕಾರಿ ನೌಕರರಿಗೆ ವರ್ಕ್ ಫ್ರಮ್ ಹೋಮ್ ಜಾರಿ ಹಾಗೂ ಶಾಲಾ ಬುಕ್‌ಗಳ ಬೆಲೆ ಏರಿಕೆ ಸೇರಿ ಇಂದಿನ ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.

TV9 Kannada News Live: ಕಳ್ಳತನದ ಆರೋಪಿ 34 ವರ್ಷಗಳ ಬಳಿಕ ಅರೆಸ್ಟ್! ಮೆಡಿಕಲ್ ಬಂದ್ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿಗಳು
ಮೆಡಿಕಲ್ ಶಾಪ್ ಬಂದ್ (ಎಐ ಚಿತ್ರ)Image Credit source: MediaForge AI
ಗಣಪತಿ ಶರ್ಮಾ
|

Updated on:May 20, 2026 | 8:27 AM

Share

ಬೆಂಗಳೂರು, ಮೇ 20: ಆನ್ಲೈನ್ ಔಷಧ ಮಾರಾಟ, ಆನ್​ಲೈನ್ ಮೂಲಕ ಔಷಧಗಳಿಗೆ ಭಾರಿ ರಿಯಾಯಿತಿ ನೀಡುವುದದನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ಇಂದು (ಮೇ 20) ಮೆಡಿಕಲ್ ಬಂದ್ (Medical Bandh) ಮಾಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಔಷಧ ವ್ಯಾಪಾರಿಗಳು ಮೆಡಿಕಲ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಬೆಳಗ್ಗೆ 11:00 ಗಂಟೆಗೆ ಡಿ ಸಿ ಕಚೇರಿ ಎದುರು ಪ್ರತಿಭಟನೆಗೆ ಪಕ್ಷದ ವ್ಯಾಪಾರಿಗಳು ಮುಂದಾಗಿದ್ದಾರೆ.

ಮುಖ್ಯಾಂಶಗಳು

  • ದೇಶಾದ್ಯಂತ ಇಂದು ಮೆಡಿಕಲ್ ಬಂದ್, ಔಷಧ ವ್ಯಾಪಾರಿಗಳಿಂದ ಪ್ರತಿಭಟನೆ.
  • ದೆಹಲಿಯಲ್ಲಿ ಇಂದಿನಿಂದ ವಾರದಲ್ಲಿ 2 ದಿನ ವರ್ಕ್ ಫ್ರಮ್​ ಹೋಮ್.
  • ಕಳ್ಳತನದ ಆರೋಪಿ 34 ವರ್ಷಗಳ ಬಳಿಕ ಅರೆಸ್ಟ್.

ಕೋಲಾರದಲ್ಲೊಂದು ಅಚ್ಚರಿಯ ವಿದ್ಯಮಾನ ನಡೆದಿದೆ. ಸುಮಾರು 34 ವರ್ಷಗಳ ಹಿಂದಿನ ಕಳ್ಳತನ ಕೇಸ್​​ ಸಂಬಂಧ ಆರೋಪಿ ರವಿ (62) ಎಂಬಾತನನ್ನು ಉರಿಗಾಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೋರ್ಟ್​ಗೆ ಹಾಜರಾಗದೆ ಬೆಂಗಳೂರಿನ ನಿರಾಶ್ರಿತರ ಕೇಂದ್ರದಲ್ಲಿದ್ದ. 1992ರಲ್ಲಿ ಹಲವು ಕಳ್ಳತನ ಕೇಸ್​ಗಳಲ್ಲಿ ಶಾಮೀಲಾಗಿದ್ದ.

ದೆಹಲಿಯಲ್ಲಿ ಇಂದಿನಿಂದ ವರ್ಕ್ ಫ್ರಮ್​ ಹೋಂ

ಇಂದಿನಿಂದ ದೆಹಲಿಯಲ್ಲಿ ವಾರದಲ್ಲಿ 2 ದಿನ ವರ್ಕ್ ಫ್ರಮ್​ ಹೋಂ ನೀತಿ ಜಾರಿಗೊಳಿಸಲಾಗಿದೆ. ಸರ್ಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗೆ ವರ್ಕ್​ ಫ್ರಮ್​ ಹೋಂ ನೀಡಲಾಗಿದ್ದು ಪ್ರತಿ ಬುಧವಾರ, ಶನಿವಾರ ಅವರು ಮನೆಯೊಂದಲೇ ಕೆಲಸ ಮಾಡಲಿದ್ದಾರೆ. ಆರೋಗ್ಯ ಇಲಾಖೆ ಸೇರಿ ಕೆಲ ತುರ್ತು ಸೇವೆಯ ಇಲಾಖೆಗಳು ಬಿಟ್ಟು ಉಳಿದ ಸರ್ಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗೆ ಈ ನಿಯಮ ಅನ್ವಯವಾಗಲಿದೆ. ಪೆಟ್ರೋಲ್​, ಡೀಸೆಲ್ ಮಿತಬಳಕೆಗೆ ಪ್ರಧಾನಿ ಮೋದಿ ಕರೆ ಹಿನ್ನೆಲೆ ದೆಹಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಶೈಕ್ಷಣಿಕ ವರ್ಷಾರಂಭಕ್ಕೂ ಮುನ್ನವೇ ಪೋಷಕರಿಗೆ ಮತ್ತೊಂದು ಸಂಕಷ್ಟ

ಶಾಲೆಗಳ ಶುಲ್ಕ ಈಗಾಗಲೇ ಏರಿಕೆಯಾಗಿದೆ. ಶಾಲಾ ವಾಹನಗಳ ಬೆಲೆ ಏರಿಕೆಯೂ ಆಗಿದೆ. ಈಗ ಶಾಲೆಗಳ ಆರಂಭಕ್ಕೂ ಮೊದಲೇ ಪೋಷಕರಿಗೆ ಮತ್ತೊಂದು ಆಘಾತ ಎದುರಾಗಿದೆ. ನೋಟ್ಸ್ ಬುಕ್, ವರ್ಕ್ ಬುಕ್, ವರ್ಕ್ ಬುಕ್ ಪೇಪರ್ ಗಳ ಬೆಲೆ ಶೇ 20-25 ಏರಿಕೆಯಾಗಿದ್ದು ಪೋಷಕರನ್ನು ಕಂಗಾಲಾಗಿಸಿದೆ.

ಕರ್ನಾಟಕ ಬಿಜೆಪಿಯಲ್ಲಿ ಆಮೂಲಾಗ್ರ ಬದಲಾವಣೆ ಸಾಧ್ಯತೆ

ಮೇ 25ರ ಬಳಿಕ ಕರ್ನಾಟಕ ಬಿಜೆಪಿಯಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದಾಗ್ಯೂ ಪಕ್ಷದ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಮತ್ತಷ್ಟು ಓದಿ: ಮೇ 25ರ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹಾ ಬದಲಾವಣೆ? ವಿಜಯೇಂದ್ರ ಪಟ್ಟ ಭದ್ರ; ಕೋರ್ ಕಮಿಟಿ ಪುನಾರಚನೆ ಸಾಧ್ಯತೆ!

ನಮ್ಮ ಮೆಟ್ರೋ ಪಿಲ್ಲರ್​ಗಳನ್ನು ವಾಣಿಜ್ಯ ಮತ್ತು ಡಿಜಿಟಲ್ ಜಾಹೀರಾತುಗಳಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಈಗ ಮೆಗಾ ಟೆಂಡರ್ ಆಹ್ವಾನಿಸಿದೆ. ಪಿಲ್ಲರ್​​ಗಳಲ್ಲಿ ಡಿಜಿಟಲ್ ಜಾಹೀರಾತಿಗೆ ಅವಕಾಶ ಕೊಡುವ ಮೂಲಕ ಟಿಕೆಟ್ ಹೊರತಾದ ಆದಾಯ ಹೆಚ್ಚಿಸಿಕೊಳ್ಳಲು ಬಿಎಂಆರ್​ಸಿಎಲ್ ಮುಂದಾಗಿದೆ. ಆದರೆ, ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಪಿಲ್ಲರ್​ಗಳ ಮೇಲೆ ಇನ್ಮುಂದೆ ಡಿಜಿಟಲ್ ಜಾಹೀರಾತುಗಳ ಅಬ್ಬರ: ಸಾರ್ವಜನಿಕರಿಂದ ಆಕ್ರೋಶ

ಬಿಎಂಆರ್​ಸಿಎಲ್​ನ ಈ ನಿರ್ಧಾರದಿಂದ ನಗರದ ಸೌಂದರ್ಯ ಹಾಳಾಗಲಿದೆ. ರಾತ್ರಿ ವೇಳೆ ವಾಹನ ಅಪಘಾತಗಳಿಗೂ ಕಾರಣವಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:26 am, Wed, 20 May 26

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More